/newsfirstlive-kannada/media/media_files/2025/08/06/pavitra-gowda-bail-2025-08-06-20-30-26.jpg)
ಪವಿತ್ರ ಗೌಡ
ಸುಪ್ರೀಂ ಕೋರ್ಟ್​ನ ಕಟಕಟೆಯಲ್ಲಿ ಗಿರ್ಕಿ ಹೊಡೆಯುತ್ತಿರೋ ದರ್ಶನ್​ ಬೇಲ್ ಭವಿಷ್ಯ ಇನ್ನೂ ತೂಗುಗತ್ತಿಯಲ್ಲಿದೆ. ಕೋರ್ಟ್​ ಮುಂದೆ ಏಳು ಆರೋಪಿಗಳು ಲಿಖಿತ ವರದಿ ಸಲ್ಲಿಸಿದ್ದಾರೆ. ಇದನ್ನಾಧರಿಸಿ ಸದ್ಯ ಸುಪ್ರೀಂ ಕೋರ್ಟ್ ಬೇಲ್ ಬಗ್ಗೆ ನಿರ್ಧಾರ ಮಾಡಬೇಕಿದೆ.
ಬೇಲ್​ ಭವಿಷ್ಯದ ಮಧ್ಯೆ ಸುಪ್ರೀಂ ಕೋರ್ಟ್​ಗೆ ಲಿಖಿತ ರೂಪದಲ್ಲೂ ಸರ್ಕಾರದ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದು ಬೇಲ್‌ಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಸರ್ಕಾರದ ಲಿಖಿತವಾದ!
ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ.. ದರ್ಶನ್ ಲಿವ್-ಇನ್ ಸಂಬಂಧದಲ್ಲಿದ್ದ ಪವಿತ್ರಾ ಗೌಡಗೆ Instagramನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದ.. ಇದರಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ, ಪಟ್ಟಣಗೆರೆಯ ಶೆಡ್‌ನಲ್ಲಿ ಅವನ ಕೊಲೆ ಮಾಡಲಾಯಿತು. ಆರೋಪಿಗಳು ಕೊ*ಲೆ ನಡೆದ ಸ್ಥಳದಲ್ಲಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ.. ಅಪಹರಣದ ಸಮಯದಲ್ಲಿ ಮತ್ತು ಕೊ*ಲೆ ನಡೆದ ಸ್ಥಳದಲ್ಲಿ ಆರೋಪಿಗಳು ಇದ್ದರು ಅಂತಾ ತಿಳಿದುಬಂದಿದೆ. ಪಟ್ಟಣಗೆರೆಯ ಶೆಡ್‌ಗೆ ಆರೋಪಿಗಳು, ಮೃತ ವ್ಯಕ್ತಿ ಪ್ರವೇಶಿಸುವುದನ್ನು ಐವರು ಸಾಕ್ಷಿಗಳು ನೋಡಿದ್ದಾರೆ.. ಕೊ*ಲೆ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ಮತ್ತು A-2 ದರ್ಶನ್, A-4 ರಾಘವೇಂದ್ರ, A-5 ನಂದೀಶ್ ಮತ್ತು A-11 ನಾಗರಾಜು ಅವ್ರ ಪಾದರಕ್ಷೆಗಳಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿಗಳು ಹೊಂದಾಣಿಕೆಯಾಗುತ್ತವೆ. DNA ವಿಶ್ಲೇಷಣೆಯಿಂದ ಮೃತ ರೇಣುಕಾಸ್ವಾಮಿ ರಕ್ತದ ಕಲೆಗಳು ಹಲವು ಆರೋಪಿಗಳ ಬಟ್ಟೆಗಳ ಮೇಲೆ ಕಂಡುಬಂದಿವೆ.. ಕೊ*ಲೆ ನಡೆದ ಸಮಯದಲ್ಲಿ A-1 ಪವಿತ್ರಾ ಗೌಡ ಮತ್ತು A-2 ದರ್ಶನ್ ಇಬ್ಬರೂ ಸಕ್ರಿಯವಾಗಿ ಭಾಗಿಯಾಗಿದ್ದರು. ಹೈಕೋರ್ಟ್‌ನ ಜಾಮೀನು ತೀರ್ಪು ಸರಿಯಾಗಿಲ್ಲ ಮತ್ತು ದಾಖಲೆಗಳಿಗೆ ವಿರುದ್ಧವಾಗಿದೆ. ಹೀಗಂತ ಸರ್ಕಾರದ ಪರ ವಕೀಲ ಸಿದ್ಧಾರ್ಥ್​ ಲೂತ್ರಾ ಲಿಖಿತ ರೂಪದಲ್ಲೂ ಖಡಕ್ ವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: ‘I stand with ದರ್ಶನ್ ಸರ್’ ಎಂದ ಧ್ರುವಾ ಸರ್ಜಾ.. ಪ್ರಥಮ್ ವಿರುದ್ಧ ಬೇಸರ
/filters:format(webp)/newsfirstlive-kannada/media/media_files/2025/08/06/actor-darshan-case-2025-08-06-17-53-25.jpg)
ದರ್ಶನ್ ಪಾತ್ರದ ಬಗ್ಗೆ ಸಾಕ್ಷ್ಯವೇ ಇಲ್ಲ ಅಂತ ವಕೀಲರ ವಾದ
ಗ್ರಹಚಾರ ಕೆಟ್ಟಾಗ ಹಗ್ಗ ಕೂಡ ಹಾವಾಗುತ್ತೆ ಅನ್ನೋ ಸ್ಯಾಂಡಲ್​ವುಡ್​ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್​ ಮತ್ತು ನಟ ಪ್ರಥಮ್​ಗೆ ದರ್ಶನ್​​ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಕೇಸ್​ ಕೂಡ ದರ್ಶನ್ ಜಾಮೀನಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಮಧ್ಯೆ ದರ್ಶನ್ ಪರ ವಕೀಲರೂ ಕೂಡ ಲಿಖಿತ ರೂಪದಲ್ಲಿ ಸುಪ್ರೀಂ ಕೋರ್ಟ್​ಗೆ ತಮ್ಮ ಪ್ರತಿವಾದ ಮಂಡಿಸಿದ್ದಾರೆ.
ದರ್ಶನ್​ ವಕೀಲರ ಲಿಖಿತ ವಾದ!
ದರ್ಶನ್​​ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ FIR ದಾಖಲು ಮಾಡಲಾಗಿದ್ದು, ಬಂಧನಕ್ಕೆ ಕಾರಣವನ್ನು ಸಂಜೆ 6:30ರವರೆಗೂ ಲಿಖಿತವಾಗಿ ನೀಡಿರುವುದಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದೇ ಇರುವುದು ಕಾನೂನು ಉಲ್ಲಂಘನೆಯಾಗಿದೆ.. ದರ್ಶನ್ ಜಾಮೀನು ರದ್ದುಪಡಿಸುವುದು ಕಠಿಣ ಕ್ರಮವಾಗಲಿದೆ. ದರ್ಶನ್ ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಅಪಹರಣದಲ್ಲಿ ದರ್ಶನ್ ಪಾತ್ರದ ಬಗ್ಗೆ ಯಾವುದೆ ಸಾಕ್ಷ್ಯವಿಲ್ಲ, ಅಪಹರಣಕ್ಕೆ ದರ್ಶನ್ ಸೂಚನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ದರ್ಶನ್ ಮತ್ತು ಎ-3 ನಡುವೆ ಕರೆಗಳು ಅಥವಾ ವಾಟ್ಸಾಪ್ ಸಂದೇಶಗಳ ವಿನಿಮಯ ಆಗಿಲ್ಲ ಎಂದು ದರ್ಶನ ಪರ ವಕೀಲರು ಲಿಖಿತ ವಾದ ಸಲ್ಲಿಸಿದ್ದಾರೆ.
ಮಗಳಿದ್ದಾಳೆ.. ಜಾಮೀನು ರದ್ದು ಮಾಡಬೇಡಿ.. ಪವಿತ್ರಾ ಮನವಿ!
ಪವಿತ್ರಾ ಗೌಡ ಪರ ವಕೀಲರು ಕೂಡ ಲಿಖಿತವಾಗಿ ಬೇಲ್​ ರದ್ಧತಿ ಬೇಡ ಅಂತಾ ಸುಪ್ರೀಂ ಕೋರ್ಟ್​ಗೆ ಲಿಖಿತ ವರದಿ ನೀಡಿದ್ದಾರೆ.. ತನಗೊಬ್ಬಳು ಮಗಳಿದ್ದಾಳೆ, ಅವಳ ಶೈಕ್ಷಣಿಕ ಬದುಕಿಗಾಗಿ ನನಗೆ ಬೇಲ್​ ನೀಡ್ಬೇಕು ಅಂತಾ ಪವಿತ್ರಾ ನ್ಯಾಯಮೂರ್ತಿಗಳಿಗೆ ಮನವಿಮಾಡಿದ್ದಾರೆ.
ಪವಿತ್ರಾ ವಕೀಲರ ಲಿಖಿತ ವಾದ!
ನಾನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ.. ಆದ್ರೆ, ಅಶ್ಲೀಲ ಮೆಸೇಜ್​ಗಳನ್ನು ರೇಣುಕಾಸ್ವಾಮಿ ಕಳುಹಿಸಿದ್ದ.. ನನಗೂ ಮತ್ತು ಉಳಿದ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ.. ನನಗೆ 10ನೇ ತರಗತಿ ಓದುವ ಮಗಳು ಇದ್ದಾಳೆ. ನಾನು ಸಿಂಗಲ್ ಪೇರೆಂಟ್​ ಆಗಿದ್ದು, ಅವಳನ್ನ ನಾನು ನೋಡಿಕೊಳ್ಳಬೇಕು. ಈ ವರ್ಷ ಬೋರ್ಡ್​ ಪರೀಕ್ಷೆಗಳು ಇವೆ.. ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಅಥವಾ ಕೇಸ್ ಇಲ್ಲ.. ನಾನು ಫ್ಯಾಷನ್ ಡಿಸೈನರ್ ಆಗಿದ್ದು.. ಜೀವನಕ್ಕಾಗಿ ಸ್ಟುಡಿಯೋ ನಡೆಸುತ್ತಿದ್ದೇನೆ.
ಇದನ್ನೂ ಓದಿ:ದರ್ಶನ್ ಪರ ವಕೀಲರಿಂದ ಸುಪ್ರೀಂಗೆ ಲಿಖಿತ ಕಾರಣ ಸಲ್ಲಿಕೆ..
ಒಟ್ನಲ್ಲಿ ದರ್ಶನ್​ ತಂಡದ ಜಾಮೀನು ಅರ್ಜಿಯ ತೀರ್ಪಿಗೆ ಕೌಂಟ್​ಡೌನ್​ ಶುರುವಾಗಿದ್ದು, ರೋಚಕ ಹಂತ ತಲುಪಿದೆ.. ಸುಪ್ರೀಂ ಕೋರ್ಟ್​ ಗರಂ ಆದ ಕೆಲವೇ ಗಂಟೆಗಳಲ್ಲಿ ನಟಿ ಮೇಲೆ ನಡೆದ ಕಮೆಂಟ್ಸ್​ ದಾಳಿ ಹಾಗೂ ಪ್ರಥಮ್ ಪ್ರಕರಣಗಳು ಕೊನೆ ಘಳಿಗೆಯಲ್ಲಿ ಗೇಮ್​ ಚೇಂಜರ್​ ಆಗುತ್ತಾ? ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us