/newsfirstlive-kannada/media/media_files/2025/08/01/sumalatha-ambareesh-and-darshan2-2025-08-01-18-55-28.jpg)
ಮಂಡ್ಯ: ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಕೆಟ್ಟದಾಗಿ ಸಂದೇಶ ಕಳುಹಿಸಿದ್ದರು. ಈ ಸಂಬಂಧ ನಟಿ ರಮ್ಯಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೇ 30ಕ್ಕೂ ಅಧಿಕ ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್.. ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು..!
ಇನ್ನೂ, ಇದೇ ವಿಚಾರವಾಗಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಮಾಡಬಾರದು. ನಾನು ರಮ್ಯಾ ಅವರ ಸೋಶಿಯಲ್ ಮೀಡಿಯಾ ನೋಡಿಲ್ಲ. ಅವರಿಗೆ ಯಾವ ರೀತಿಯ ಕಮೆಂಟ್ ಮಾಡಿದ್ದಾರೆ ಯಾರು ಮಾಡಿದಾರೆ ಎಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಅಷ್ಟೇ ನಾನು ಇದ್ದನ್ನು ನೋಡಿದ್ದೇನೆ ಅಷ್ಟೇ. ರಮ್ಯಾ ಅವರು ಪೊಲೀಸ್‌ಗೆ ದೂರು ನೀಡಿದ್ದಾರೆ. ಪೊಲೀಸ್ ತನಿಖೆ ಮಾಡಿ ತಪ್ಪು ಮಾಡಿದರವ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ಪೊಲೀಸ್ ಅವರು ರಮ್ಯಾಗೆ ಸ್ಪಂದಿಸುತ್ತಾರಾ? ಜನರಿಗೂ ಹೀಗೆ ಸ್ಪಂದಿಸಿದರೆ ಸ್ವಾಗತ. ನ್ಯಾಯ ಎನ್ನೋದು ಪ್ರತಿಯೊಬ್ಬರಿಗೂ ಸಿಗಬೇಕು ಎಂದರು.
ಇನ್ನೂ, ದರ್ಶನ್ ವಿಚಾರವಾಗಿ ಮಾತಾಡಿದ ಸುಮಲತಾ ಅಂಬರೀಶ್, ದರ್ಶನ್ ಅವರನ್ನು ಮಾಧ್ಯಮದವರು ಸಂಪರ್ಕ ಮಾಡಿದಾರೋ ಇಲ್ವೋ ಗೊತ್ತಿಲ್ಲ. ಇತ್ತೀಚೆಗೆ ದರ್ಶನ್ ಮಾಧ್ಯಮಗಳ ಜೊತೆ ಮಾತಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತಾಡಬಹುದಿತ್ತು ಎಂಬೋದನ್ನು ಅವರನ್ನೇ ಕೇಳಬೇಕು. ನಾನು ದರ್ಶನ್ ಪರವಾಗಿ ಹೇಳಿದರೆ ತಪ್ಪಾಗುತ್ತೆ. ನಾನು ಯಾವ ನಟನ ಅಭಿಮಾನಿಗೂ ವಿಶೇಷವಾಗಿ ಹೇಳಲ್ಲ. ಎಲ್ಲರಿಗೂ ಸಹ ನಾನು ಹೇಳ್ತೀನಿ. ಇನ್ನೂ ದರ್ಶನ್ ಅಭಿಮಾನಿಗಳೇ ಮಾಡಿದ್ದಾರೆ ಎನ್ನೋದಕ್ಕೆ ಆಧಾರ ಇಲ್ಲ. ದರ್ಶನ್ ಅಭಿಮಾನಿಗಳೇ ಮಾಡಿದ್ರೆ ನಾನು ಮನವಿ ಮಾಡ್ತೀವಿ. ಈ ರೀತಿ ಯಾರು ಮಾಡಬೇಡಬೇಡಿ. ನಿಮ್ಮ ಬದುಕಿನ ಬಗ್ಗೆ ಗಮನವರಿಸಿ. ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆ ಗಮನವಿಟ್ಟು ಪೋಸ್ಟ್ ಮಾಡಿ ಸಲಹೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ