ಪವಿತ್ರಗೌಡ ಜಾಮೀನು ಅರ್ಜಿ ವಜಾ! ಮುಂದಿನ ಆಯ್ಕೆ ಏನೇನು..?

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್​ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ ಜಾಮೀನು ಅರ್ಜಿ ರದ್ದಾಗಿದೆ. 64ನೇ ಸೆಷನ್ಸ್ ಕೋರ್ಟ್​ ಜಾಮೀನಿಗಾಗಿ ಪವಿತ್ರಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

author-image
Ganesh Kerekuli
Advertisment

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್​ನಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ ಜಾಮೀನು ಅರ್ಜಿ ರದ್ದಾಗಿದೆ. 64ನೇ ಸೆಷನ್ಸ್ ಕೋರ್ಟ್​ ಜಾಮೀನಿಗಾಗಿ ಪವಿತ್ರಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಕಳೆದ ವಾರ ಹಿರಿಯ ವಕೀಲ ಬಾಲನ್ ಅವರು ಪವಿತ್ರಾಗೌಡ ಅರ್ಜಿಯ ಪರ ವಾದ ಮಂಡಿಸಿ, ತಾಂತ್ರಿಕ ಅಂಶಗಳ ಆಧಾರದ ಮೇಲೆ ಜಾಮೀನು ನೀಡಬೇಕೆಂದು ಕೋರ್ಟ್​ಗೆ ಮನವಿ ಮಾಡಿದ್ದರು. ಈ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಅವತ್ತು ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್​ ಇವತ್ತು ಪವಿತ್ರಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ. 

ಜಾಮೀನು ಅರ್ಜಿ ವಜಾ ಬೆನ್ನಲ್ಲೇ ಅಡ್ವೋಕೇಟ್ ಬಾಲನ್ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ನಾವು ಹೈಕೊರ್ಟ್​ಗೆ ತೆಗೆದುಕೊಂಡು ಹೋಗ್ತೀವಿ ಎಂದಿದ್ದಾರೆ. ಪವಿತ್ರಗೌಡ ಅವರಿಗೆ ಇರುವ ಮುಂದಿನ ಆಯ್ಕೆಗಳು ಏನೇನು ಅನ್ನೋದನ್ನು ವಿಡಿಯೋ ನೋಡಿ.. 

ಇದನ್ನೂ ಓದಿ:ಜೈಲು ಹಕ್ಕಿ ರನ್ಯಾ ರಾವ್​​ಗೆ ದೊಡ್ಡ ಆಘಾತ.. 102.55 ಕೋಟಿ ರೂಪಾಯಿ ದಂಡ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Darshan in jail Pavitra Gowda tattoo Pavitra Gowda
Advertisment