/newsfirstlive-kannada/media/media_files/2025/08/10/modi_new-2025-08-10-15-00-22.jpg)
ಬೆಂಗಳೂರು: 3ನೇ ಹಂತದ ಆರೆಂಜ್ ಮಾರ್ಗದ ಮೆಟ್ರೋಗೆ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು. ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು. ಬಳಿಕ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಅಣ್ಣಮ್ಮ ದೇವಿ ಹಾಗೂ ಕೆಂಪೇಗೌಡರನ್ನು ಸ್ಮರಿಸಿ, ನಮನ ಸಲ್ಲಿಸಿದರು.
ಎಲೆಕ್ಟ್ರಾನಿಕ್​ ಸಿಟಿಯ ಐಐಐಟಿಯ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಆಪರೇಷನ್ ಸಿಂಧೂರು ಆದ ಮೇಲೆ ಇದೇ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ಭಾರತದ ಕೀರ್ತಿ ಹೆಚ್ಚಿಸಿದೆ. ಕನ್ನಡ ಭಾಷೆಯಲ್ಲಿ ಸಿಹಿ ಇದೆ. ಇಲ್ಲಿನ ಜನರ, ಯುವಕರ ಪರಿಶ್ರಮ, ಪ್ರತಿಭೆ ಸಾಕಷ್ಟು ಇದೆ. ಅದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/08/10/namma-metro-yellow2-2025-08-10-12-28-48.jpg)
ನಮ್ಮ ರಕ್ಷಣಾ ಇಲಾಖೆಯಲ್ಲಿ ಮೇಕ್​ ಇನ್ ಇಂಡಿಯಾದ ತಾಕತ್ ಇದೆ. ಆಪರೇಷನ್ ಸಿಂಧೂರು ಮೇಕ್​ ಇಂಡಿಯಾದ ಬಲಿಷ್ಠವಾದ ಶಕ್ತಿ ಆಗಿತ್ತು. ಭಾರತದ ಗಡಿ ದಾಟಿ ಹೋಗಿ ಶತ್ರುಗಳನ್ನು ನಾಶ ಪಡಿಸಿದ್ದೇವೆ. ಭಯೋತ್ಪಾದಕರ ತಾಣಗಳನ್ನು ನಾಶ ಪಡಿಸಲಾಗಿದೆ. ಆಪರೇಷನ್ ಸಿಂಧೂರಿನಲ್ಲಿ ನಮ್ಮ ಸೈನಿಕರ ಯುಕ್ತಿ, ಶಕ್ತಿ ಎಲ್ಲವನ್ನು ನೋಡಿದ್ದೇನೆ. ಎದುರಾಳಿಗೆ ಸರಿಯಾದ ಉತ್ತರವನ್ನು ನಮ್ಮವರು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವದ ನಗರ ಜೊತೆಗೆ ಬೆಂಗಳೂರಿನ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರು ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿಯನ್ನು ಹಾರಿಸಿದೆ. ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಚ್ಚುತ್ತಿದೆ. 2014ಕ್ಕಿಂತ ಮೊದಲು ದೇಶದಲ್ಲಿ ಮೆಟ್ರೋ, ವಿಮಾನ ನಿಲ್ದಾಣ, ಶಿಕ್ಷಣ ಕ್ಷೇತ್ರ, ಬಾಹ್ಯಾಕಾಶಯಾನದಲ್ಲಿ ದೊಡ್ಡ ಬದಲಾವಣೆಗಳು ಆಗಿವೆ. 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈಗ 160 ವಿಮಾನ ನಿಲ್ದಾಣಗಳು ಇವೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/08/10/vande-bharat-train2-2025-08-10-11-35-54.jpg)
ಬೆಂಗಳೂರು ನವಭಾರತದ ಸಂಕೇತವಾಗಿದೆ. ಬೆಂಗಳೂರು ನಗರದ ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಮುಖ್ಯವಾಗಿದೆ. ಮೆಡಿಕಲ್ ಶಿಕ್ಷಣ ಸುಧಾರಿಸಿದೆ. 2014ಕ್ಕಿಂತ ಮೊದಲು ದೇಶದ 4 ನಗರಗಳಲ್ಲಿ ಮಾತ್ರ ಮೆಟ್ರೋ ಇತ್ತು. ಆದರೆ ಈಗ 24 ನಗರಗಳಲ್ಲಿ ಮೆಟ್ರೋ ಅಭಿವೃದ್ಧಿಯಾಗುತ್ತಿದೆ. ವಿಶ್ವದಲ್ಲಿ ಭಾರತ ಸದ್ಯ 4ನೇ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಆಟೋಮೊಬೈಲ್​, ಮೊಬೈಲ್ ಕ್ಷೇತ್ರದಲ್ಲಿ ರಫ್ತು ಹೆಚ್ಚಾಗಿದೆ. ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚುತ್ತಿದೆ. ವಿಶ್ವದ ಶೇಕಡಾ 50 ರಷ್ಟು ಡಿಜಿಟಲ್​ಕರಣ ಭಾರತದಲ್ಲಿ ಆಗುತ್ತಿದೆ. ಡಿಜಿಟಲ್ ಇಂಡಿಯಾದ ಕನಸು ಪೂರ್ಣಗೊಳಿಸೋಣ. ಮುಂದಿನ ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಹೋಗುವ ಭರವಸೆಯನ್ನು ಪ್ರಧಾನಿ ಮೋದಿ aವರು ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us