/newsfirstlive-kannada/media/media_files/2025/08/21/mahesh_timarodi-2025-08-21-11-00-03.jpg)
ಮಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಎಂಬುವರು ಬ್ರಹ್ಮವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಇಂದು ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಆಗಮಿಸಿದ್ದರು. ಬಳಿಕ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿ.ಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ:ಧರ್ಮಸ್ಥಳದ ದೇವರಾಣೆಗೂ ನನ್ನ ಮಗಳು ಇದ್ದಳು, ಸತ್ಯ; ಸುಜಾತ್ ಭಟ್ ಹೇಳುವುದೇನು?
/filters:format(webp)/newsfirstlive-kannada/media/media_files/2025/08/21/mahesh_thimarodi-2025-08-21-07-22-12.jpg)
ಫೇಸ್​​ಬುಕ್​ ಪೇಜ್​ನಲ್ಲಿ ಬಿ.ಎಲ್ .ಸಂತೋಷ್ ಅವರನ್ನು ತೇಜೋವಧೆ ಮಾಡಿದ ಆರೋಪ ಇದೆ. ಅಲ್ಲದೇ ಹಿಂದೂ ಧರ್ಮದ ನಾಯಕನ ನಿಂದನೆ ಮಾಡಿ ಧರ್ಮ ಸಮುದಾಯಗಳ ನಡುವೆ ವೈಮನಸ್ಸಿನ ಉಂಟು ಮಾಡಿದ ಹಿನ್ನೆಲೆ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಎಂಬುವರು ದೂರು ದಾಖಲಿಸಿದ್ದರು. ಬ್ರಹ್ಮವಾರ ಪೊಲೀಸ್ ಠಾಣೆಯಲ್ಲಿ ಯುಎಸ್​ 196(1), 352, 353 (2), ಬಿಎನ್​ಎಸ್​ನಂತೆ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us