/newsfirstlive-kannada/media/media_files/2025/08/24/ganesh_festival-2025-08-24-11-12-49.jpg)
ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು, ನಗರದ ಕೆಲ ಬೀದಿ ಬೀದಿಗಳಲ್ಲಿ ಗಣೇಶನ ವಿಗ್ರಹಗಳು ಸಾಲು ಸಾಲಾಗಿ ಇಡಲಾಗಿದೆ. ಎಲ್ಲರೂ ಸಂಭ್ರಮ, ಸಡಗರದಿಂದ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲೂ ವಿನಾಯಕನನ್ನು ಕಾಣಬಹುದು. ಇದರ ಜೊತೆಗೆ ಎಷ್ಟೋ ಜನರು ಗಣೇಶೋತ್ಸವಕ್ಕೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ಅಂಥವರಿಗೆ ಇಲ್ಲೊಂದು ಬಿಗ್ ಶಾಕ್ ಇದೆ.
ವಿನಾಯಕ ಚೌತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವ ಸಾಕಷ್ಟು ಜನರು ತಮ್ಮ ಹಳ್ಳಿಗಳಿಗೆ ಹೋಗಿ ಆಚರಣೆ ಮಾಡುತ್ತಾರೆ. ಆದರೆ ಊರಿಗೆ ಹೊರಟವರ ಜೇಬಿನಿಂದ ದೊಡ್ಡ ಮೊತ್ತದಲ್ಲಿ ಹಣ ಪಡೆಯಲು ಖಾಸಗಿ ಬಸ್ಗಳು ಶುರು ಮಾಡಿವೆ. ಆಗಸ್ಟ್ 27 ರಂದು ಗಣೇಶ ಹಬ್ಬಕ್ಕೂ ಒಂದು ದಿನ ಮೊದಲೇ ಅಂದರೆ ಆಗಸ್ಟ್ 26ಕ್ಕೆ ಗೌರಿ ಹಬ್ಬದ ದಿನವೇ ಬಸ್ ಪ್ರಯಾಣ ಏರಿಕೆ ಮಾಡಲಾಗಿದೆ.
ಗಣೇಶನ ಹಬ್ಬಕ್ಕೆ ಜನ ಸಾಮಾನ್ಯರಿಗೆ ದರ ಏರಿಕೆಯ ಬರೆ ಎಳೆಯಲಾಗುತ್ತಿದೆ. ಕೆಲ ಖಾಸಗಿ ಬಸ್ ಮಾಲೀಕರಿಂದ ಜನ ಸಾಮಾನ್ಯರ ಸುಲಿಗೆ ನಡೆಯುತ್ತಿದೆ ಎನ್ನಬಹುದು. ಬಸ್ ಪ್ರಯಾಣ ದರ, ಒನ್ ಟು ತ್ರಿಬಲ್ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ದುಬಾರಿ ಹಣ ಕೊಟ್ಟು ತಮ್ಮ ಊರಿಗೆ ಹೋಗಬೇಕಿದೆ. ಗೌರಿ, ಗಣೇಶ ಹಬ್ಬವೆಂದು ಊರಿಗೆ ಹೋಗುತ್ತಿದ್ದವರಿಂದ ದರೋಡೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಫುಲ್ ಗ್ಲಾಮರ್ ಲುಕ್ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್
ಹೇಗಿದೆ ಖಾಸಗಿ ಬಸ್ ದರಗಳು
ಬೆಂಗಳೂರು ಇಂದ | ಮಡಿಕೇರಿ |
ಇಂದಿನ ದರ | ₹500- ₹600 |
ಅ.26ರ ದರ | ₹1500- ₹5000 |
ಬೆಂಗಳೂರು ಇಂದ | ಉಡುಪಿ |
ಇಂದಿನ ದರ | ₹600- 950 |
ಅ.26ರ ದರ | ₹2500- ₹3000 |
ಬೆಂಗಳೂರು ಇಂದ | ಧಾರವಾಡ |
ಇಂದಿನ ದರ | ₹800- ₹1200 |
ಅ.26ರ ದರ | ₹1700- ₹4000 |
ಬೆಂಗಳೂರು ಇಂದ | ಬೆಳಗಾವಿ |
ಇಂದಿನ ದರ | ₹800- ₹1000 |
ಅ. 26ರ ದರ | ₹2000- ₹3000 |
ಬೆಂಗಳೂರು ಇಂದ | ದಾವಣಗೆರೆ |
ಇಂದಿನ ದರ | ₹600- ₹800 |
ಅ. 26ರ ದರ | ₹1300-₹2000 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ