ರಾಹುಲ್​ ಗಾಂಧಿ ಚುನಾವಣಾ ಆಯೋಗಕ್ಕೆ ಕೇಳಿದ ಮುಖ್ಯವಾದ 5 ಪ್ರಶ್ನೆಗಳು ಯಾವುವು?

ಕೇವಲ ಕರ್ನಾಟಕ ಅಲ್ಲ, ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ನಿಂತಿದೆ. ಒಬ್ಬರಿಗೆ ಒಂದು ಮತ ಎನ್ನುವುದನ್ನು ಮರೆತು, ಇಲ್ಲಿ ಹೇಗೆಂದರೆ ಹಾಗೇ ಬಳಕೆ ಮಾಡಲಾಗಿದೆ.

author-image
Bhimappa
RAHUL_GANDHI_KHARGE
Advertisment

ಬೆಂಗಳೂರು: ಫ್ರೀಡಂ ಪಾರ್ಕ್​ನಲ್ಲಿ ನಡೆದ ಮತಗಳ್ಳತನದ ಆರೋಪದ ಬೃಹತ್​ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗಕ್ಕೆ ಮುಖ್ಯವಾದ 5 ಪ್ರಶ್ನೆಗಳನ್ನು ಕೇಳಿದ್ದು ಉತ್ತರಿಸುವಂತೆ ಹೇಳಿದ್ದಾರೆ.  

ಮತಗಟ್ಟೆಯಲ್ಲಿ ರೆಕಾರ್ಡ್​ ಮಾಡಿದ ವಿಡಿಯೋಗಳು, ಮತ ಗಣತಿ, ಡಿಜಿಟಲ್​ ದಾಖಲೆಗಳನ್ನು ನಮಗೆ ನೀಡಿ. ಕೇವಲ ಕರ್ನಾಟಕ ಅಲ್ಲ, ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ನಿಂತಿದೆ. ಒಬ್ಬರಿಗೆ ಒಂದು ಮತ ಎನ್ನುವುದನ್ನು ಮರೆತು, ಇಲ್ಲಿ ಹೇಗೆಂದರೆ ಹಾಗೇ ಬಳಕೆ ಮಾಡಲಾಗಿದೆ. ಡಿಜಿಟಲ್ ದಾಖಲೆಗಳನ್ನು ಆಯೋಗ ನಾಶ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.  

ಇದನ್ನೂ ಓದಿ:ಎಲೆಕ್ಟ್ರಾನಿಕ್​ ಡಾಟಾ ಸಿಕ್ರೇ, ಕಳ್ಳಮತ​ಗಳಿಂದ ಪ್ರಧಾನಿ ಆದ್ರೂ ಎನ್ನುವುದು ನಿರೂಪಿಸುತ್ತೇವೆ- ರಾಹುಲ್ ಗಾಂಧಿ

RAHUL_GANDHI (1)

ರಾಹುಲ್ ಗಾಂಧಿ ಅವರು ಕೇಳಿದಂತೆ 5 ಪ್ರಶ್ನೆಗಳು? 

  • ವೋಟರ್​ ಲಿಸ್ಟ್​ನ ಡಿಜಿಟಲ್ ಮಿಷನ್ ರೀಡಬಲ್ ಫಾರ್ಮೆಟ್​​ ಅನ್ನು ಯಾಕೆ ನೀವು, ನಮಗೆ (ಭಾರತೀಯರಿಗೆ) ಕೊಡುತ್ತಿಲ್ಲ?. 
  • ಯಾಕೆ ನೀವು ವಿಡಿಯೋ ದಾಖಲೆಗಳನ್ನು ನಾಶ ಮಾಡುತ್ತಿದ್ದೀರಿ? 
  • ಭಾರತದ ಚುನಾವಣಾ ಆಯೋಗ ವೋಟರ್​ ಲಿಸ್ಟ್​ನಲ್ಲಿ ಯಾಕೆ ದೊಡ್ಡ ದೊಡ್ಡ ಫ್ರಾಡ್​ಗಳನ್ನು ಮಾಡುತ್ತಿದೆ? 
  • ಭಾರತದ ಚುನಾವಣಾ ಆಯೋಗ ಯಾಕೆ ನಮಗೆ ಉತ್ತರ ಕೊಡುತ್ತಿಲ್ಲ. ವಿರೋಧ ಪಕ್ಷಗಳಿಗೆ ಬೆದರಿಕೆ ಹಾಕುತ್ತಿರುವುದು ಯಾಕೆ? 
  • ಬಿಜೆಪಿ ಏಜೆಂಟ್​​ನಂತೆ ಭಾರತದ ಚುನಾವಣಾ ಆಯೋಗ ವರ್ತಿಸುತ್ತಿರುವುದು ಯಾಕೆ?.  



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rahul Gandhi CM SIDDARAMAIAH Rahul Gandhi on election fraud
Advertisment