Advertisment

ಕನಸಿನ ಮನೆಯೇ ದಂಪತಿಯ ಜೀವಕ್ಕೆ ಸಂಚಕಾರ ತಂದುಬಿಡ್ತು.. ಕೊನೆ ಉಸಿರಿನಲ್ಲೂ ಒಂದಾದ ಜೋಡಿ

ನಿರ್ಮಾಣ ಹಂತದ ಮನೆಯ ಮೆಟ್ಟಿಲುಗಳು ಏಕಾಏಕಿ ಕುಸಿದು ಬಿದ್ದು, ಮನೆಯ ಕನಸು ಕಂಡಿದ್ದ ದಂಪತಿ ಸಾವನ್ನಪ್ಪಿದ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ.

author-image
Ganesh Kerekuli
rayachuru couple death
Advertisment

ರಾಯಚೂರು: ಜೋಡಿಯೊಂದು ತಮ್ಮ ಭವಿಷ್ಯದ ಮನೆಯ ನಿರ್ಮಾಣದ ಕನಸು ಕಂಡಿದ್ದು, ಆಸರೆ ನೀಡಬೇಕಾಗಿದ್ದ ಮನೆಯೇ ಸಾವಿನ ಮನೆಗೆ ಕಳುಹಿಸಿದ ಶಾಕಿಂಗ್​ ಘಟನೆ ರಾಯಚೂರಿನಲ್ಲಿ ನಡೆದಿದೆ. ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲುಗಳು  ಕುಸಿದು ಬಿದ್ದು ಸಾವಿನ ಮನೆ ಸೇರಿದ್ದಾರೆ. ಈ ದಾರುಣ ಸಾವು ಅವರ ಜೀವನದಲ್ಲಿ ಬರ ಸಿಡಿಲಿನಂತೆ ಅಪ್ಪಳಿಸಿದೆ. 

Advertisment

ಇದನ್ನೂ ಓದಿ: ವ್ಯಕ್ತಿಯ ಜೀವ ತೆಗೆದ ಷೇರು ಮಾರುಕಟ್ಟೆ ವ್ಯವಹಾರ.. ಅಷ್ಟಕ್ಕೂ ಆಗಿದ್ದೇನು..?

Rayachuru couple death

ಘಟನೆಯ ವಿವರ 

38 ವರ್ಷದ ದ್ಯಾವಪ್ಪ ಸೂಗುರು, ಆತನ‌ ಪತ್ನಿ ಶಿವಮ್ಮ ಮೃತ ದುರ್ದೈವಿಗಳು. ಇವರಿಬ್ಬರು ರಾಯಚೂರಿನ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ತಮ್ಮದೇ ಮನೆಯ ಗೌಂಡಿ ಕೆಲಸ ಮಾಡುತ್ತಿದ್ದರು. ಈ  ವೇಳೆ ಏಕಾಏಕಿ ಮೆಟ್ಟಿಲುಗಳು ಕುಸಿದು ಬಿದ್ದಿದ್ದು, ಪಿಲ್ಲರ್ ಇಲ್ಲದೆ ಅವೈಜ್ಞಾನಿಕವಾಗಿ ಮನೆ ನಿರ್ಮಿಸಿದ್ದರಿಂದ ಮೆಟ್ಟಿಲು ಕುಸಿತಗೊಂಡಿವೆ ಎನ್ನಲಾಗಿದೆ. ಮನೆಯ ಜೊತೆಗೆ ಕನಸುಗಳೂ ಕಮರಿಹೋಗಿದ್ದು ಈ ದಂಪತಿಯ ಬಾಳಲ್ಲಿ ದುರಾದೃಷ್ಟಕರ...

ಮೃತ ದೇಹಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

deadlyaccident Couple died on same day
Advertisment
Advertisment
Advertisment