/newsfirstlive-kannada/media/media_files/2025/10/13/raju_talikote_son_1-2025-10-13-20-59-24.jpg)
ಉಡುಪಿ: ಹಿರಿಯ ರಂಗ ಕಲಾವಿದ, ಚಲನಚಿತ್ರದ ಹಾಸ್ಯ ನಟ ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಕುಡುಕನ ಪಾತ್ರಗಳ ಮೂಲಕ ಮನೆ ಮಾತಾಗಿದ್ದ ಹಿರಿಯ ಹಾಸ್ಯ ನಟ ಕೊನೆಯುಸಿರೆಳೆದಿದ್ದಾರೆ. ಸದ್ಯ ಈ ಸಂಬಂಧ ಅವರ ಮಗ ಮಾತನಾಡಿದ್ದಾರೆ.
ಉಡುಪಿಯ ಮಣಿಪಾಲ ಕೆಎಂಸಿಯಲ್ಲಿ ಮಾತನಾಡಿದ ರಾಜು ತಾಳಿಕೋಟಿ ಅವರ ಮಗ ಭರತ್ ತಾಳಿಕೋಟಿ ಅವರು, ಶೈನ್ ಶೆಟ್ಟಿ ಅವರ ನಾಯಕತ್ವದ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರಿಂದ ಮೂರು ದಿವಸ ಹಿಂದೆ ಅಪ್ಪ ಹೆಬ್ರಿಗೆ ಬಂದಿದ್ದರು. ತಂದೆಯವರನ್ನು ಉಳಿಸಲು ಇಡೀ ಚಿತ್ರತಂಡ ಪ್ರಯತ್ನ ಮಾಡಿತು. ಆದರೆ ಇಂದು ಸಂಜೆ 6 ಗಂಟೆ ಸುಮಾರಿಗೆ ನಮ್ಮನ್ನು ತಂದೆ ಅಗಲಿದ್ದಾರೆ. ಐ ಮಿಸ್ ಯು ಪಪ್ಪ.. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಭಾವುಕರಾದರು.
ಈ ಹಿಂದೆ ಒಮ್ಮೆ ತಂದೆಗೆ ಹೃದಯಾಘಾತತಾಗಿತ್ತು. ಬೆಂಗಳೂರು ಜಯದೇವದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಎರಡನೇ ಬಾರಿಗೆ ತೀವ್ರ ಹೃದಯಘಾತ ಆಗಿದ್ರಿಂದ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ 35 ವರ್ಷದಿಂದ ನಾಟಕ ಮಾಡುತ್ತಿದ್ದಾರೆ. ಸುಮಾರು 70 ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಸರ್ಕಾರ ಅವರನ್ನು ಗುರುತಿಸಿ ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು. ಸುಮಾರು 10 ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಾಗಿದೆ ಎಂದು ಹೇಳಿದ್ದಾರೆ.
ತಂದೆಯವರ ಮೃತದೇಹವನ್ನು ಮೊದಲು ಧಾರವಾಡ ರಂಗಾಯಣಕ್ಕೆ ತೆಗೆದುಕೊಂಡು ಹೋಗುತ್ತೇವೆ. ಬಿಜಾಪುರದ ಸಿಂಧಗಿ ತಾಲೂಕಿನ ಚಿಕ್ಕಸಿಂಧಗಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರು ಯಾವತ್ತೂ ತೋಟದಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲೇ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ. ಅವರ ಪ್ರೀತಿಸುವವರು ಅಭಿಮಾನಿಗಳು, ಸಂಬಂಧಿಕರು, ಚಿಕ್ಕ ಸಿಂಧಗಿಗೆ ಬಂದು ದರ್ಶನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ನಾಳೆ ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ನಮ್ಮ ತಂದೆಯವರಿಗೆ ಎರಡು ಮದುವೆ ಆಗಿವೆ. ಒಟ್ಟು ಐದು ಮಕ್ಕಳು ಇದ್ದೇವೆ. ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಕಲಿಯುಗದ ಕುಡುಕ ಅವರಿಗೆ ಬಹಳ ಹೆಸರು ತಂದುಕೊಟ್ಟ ನಾಟಕವಾಗಿತ್ತು. ಇಬ್ಬರು ಹೆಂಡತಿಯರು 5 ಮಕ್ಕಳ ಆದರೂ ಬಹಳ ಅನ್ಯೋನ್ಯವಾಗಿದ್ದರು. ಇಡೀ ಕುಟುಂಬ ನಾವು ನಾಟಕದಲ್ಲಿ ನಟಿಸುತ್ತಿದ್ದೇವು ಎಂದು ಹೇಳುತ್ತ ಭರತ್ ತಾಳಿಕೋಟಿ ಕಣ್ಣೀರು ಹಾಕಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ