/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
- ಸಂತೋಷದ ವಾತಾವರಣ ಇರಲಿದೆ
- ಸ್ವಂತ ಉದ್ಯೋಗದ ಚಿಂತನೆ ಮಾಡ್ತೀರಿ
- ಬಂಧುಗಳಲ್ಲೊಬ್ಬರ ಸಹಕಾರ ಸಿಗುವುದರಿಂದ ಉದ್ಯೋಗಕ್ಕೆ ತುಂಬಾ ಅನುಕೂಲ
- ಬೇರೆಯವರ ಆಕರ್ಷಿಸುವ ದಿನ
- ಪಾರ್ಟನರ್​ಶಿಪ್​ನಿಂದ ಅನೂಕೂಲ ಆಗೋದ್ರಿಂದ ಹೊರೆ ಕಡಿಮೆ
- ಸಂಪಾದನೆ ಮಾಡಲು ಹೆಸರು ಮಾಡಲು ಉತ್ತಮ ಅವಕಾಶ
- ಗ್ರಾಮದೇವತೆಯನ್ನು ಪ್ರಾರ್ಥಿಸಿ
ವೃಷಭ
- ಹಣವಿದೆ ಆದರೆ ಆರೋಗ್ಯ ಇರುವುದಿಲ್ಲ
- ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರು
- ನಿಮ್ಮನ್ನು ರಕ್ಷಣೆ ಪೋಷಣೆ ಮಾಡಿಕೊಳ್ಳುವುದರಲ್ಲೇ ಕಾಲ ಹೋಗಬಹುದು
- ನಿಮ್ಮ ಕೆಲಸ ನೀವಂದುಕೊಂಡಂತೆ ನಡೆಯಬಹುದು
- ರಾಜಕೀಯ ವಿಚಾರ ಚರ್ಚೆಯಾಗಲಿದೆ
- ಎಲ್ಲಾ ಇದೆ ಆದರೆ ನೆಮ್ಮದಿಯಿಲ್ಲ
- ಇಷ್ಟದೇವತೆಯನ್ನ ಪ್ರಾರ್ಥನೆ ಮಾಡಿ
ಮಿಥುನ
- ಗಂಭೀರವಾದ ಯೋಚನೆಗಳಿಂದ ಹೊರಬರಬೇಕು
- ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಸಲಹೆ
- ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ದೂರಮಾಡಿಕೊಳ್ಳಿ
- ಕುಟುಂಬದಲ್ಲಿ ವ್ಯಾಜ್ಯ ತಾರಕ್ಕೇರಬಹುದು
- ವ್ಯಾಪಾರದಿಂದ ನಷ್ಟವನ್ನು ಅನುಭವಿಸುತ್ತೀರಿ
- ವಿದ್ಯಾರ್ಥಿಗಳಿಗೆ ಸಣ್ಣ ಮಕ್ಕಳಿಗೆ ತೊಂದರೆಯಾಗಬಹುದು
- ಕುಲದೇವತೆಯನ್ನು ಪ್ರಾರ್ಥನೆ ಮಾಡಿ
ಕಟಕ
- ಅನಾರೋಗ್ಯಕ್ಕೆ ಹಣ ವ್ಯಯ ಆಗಬಹುದು
- ಆಡಂಬರದ ವಸ್ತು ಖರೀದಿ ಸಂತೋಷ, ಖರ್ಚಿನ ಚಿಂತೆ
- ಹೊಸತನಕ್ಕೆ ಆತುರ ಮಾಡಬೇಡಿ
- ಸಹೋದ್ಯೋಗಿಗಳಿಂದ ಕಿರುಕುಳ ಇರಬಹುದು
- ಕಠಿಣ ಪರಿಶ್ರಮದ ನಂತರದಲ್ಲಿ ಬೇಸರ ಲಾಭವಿಲ್ಲ
- ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಕಲಹ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಕುಟುಂಬದಲ್ಲಿ ಹಲವು ಮಾಹಿತಿ ಸಲಹೆಗಳು ದೊರೆಯುತ್ತದೆ
- ಮಾನಸಿಕ ಆಯಾಸ ಕಾಡಬಹುದು
- ಅನಗತ್ಯ ಹೂಡಿಕೆ ಬೇಡ ಹಣಕ್ಕಾಗಿ ತೊಂದರೆಯಾಗಬಹುದು
- ಯಾರನ್ನು ಅಂಧರನಾಗಿ ನಂಬಬಾರದು
- ಜೊತೆಯವರು ಗೊತ್ತಿಲ್ಲದೆ ಮೋಸ ಮಾಡಬಹುದು
- ಹಣದ ಬಗ್ಗೆ ಜಾಗ್ರತೆವಹಿಸಿ
- ಲಕ್ಷ್ಮೀನಾರಾಯಣನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವೃತ್ತಿ ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
- ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
- ಅಧ್ಯಯನದ ಕೊರತೆ ಆಗಬಹುದು
- ಒಳ್ಳೆಯ ದಿನ ಸದ್ಬಳಕೆಯಾಗಲಿ
- ಖರ್ಚು ಹೆಚ್ಚು ಲಾಭವಿದೆ
- ದೇವಿಯ ಪ್ರಾರ್ಥನೆ ಮಾಡಿ
ತುಲಾ
- ಸರ್ಕಾರಿ ಕೆಲಸಗಳಿಂದ ಸಮಾಧಾನ
- ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿ. ಶುಭವಿದೆ
- ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
- ಕುಟುಂಬದಲ್ಲಿ ಮಾತಿನ ಸಮತೋಲನ ಕಾಪಾಡಿಕೊಳ್ಳಿ
- ವ್ಯಾಪಾರದಲ್ಲಿ ಲಾಭವಿದೆ
- ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಸ್ನೇಹಿತರೊಂದಿಗೆ ಕೆಲಸದ ಬಗ್ಗೆ ಚಿಂತಿಸಿ
- ಅದೃಷ್ಟದ ಬೆಂಬಲವಿರಬಹುದು
- ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸೂಚನೆ
- ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು
- ನಿಮ್ಮ ದೊಡ್ಡ ದೊಡ್ಡ ಚಿಂತನೆಗಳಿಗೆ ಪುಷ್ಠಿ ಸಿಗಬಹುದು
- ಈಶ್ವರನ ಆರಾಧನೆ ಮಾಡಿ
ಧನುಸ್ಸು
- ಕಠಿಣ ಪರಿಶ್ರಮದ ಮನಸ್ಸಿದ್ದಾಗ ರಾಜಿ ಬೇಡ
- ಮನೆಯ ಗೊಂದಲಗಳಿಗೆ ತೆರೆ ಬೀಳುವ ದಿನ
- ನಕಾರಾತ್ಮಕ ಸಲಹೆಗಳಿಂದ ಜನರಿಂದ ದೂರವಿರಿ
- ಶಾಂತಿಪ್ರಿಯರಾಗಿದ್ದರೆ ಯಶಸ್ಸಿದೆ
- ಏಕಾಂಗಿಯಾಗಿ ಹೋರಾಟಮಾಡಬಹುದು ತಾಳ್ಮೆಯಿರಲಿ
- ನಿಮ್ಮ ವರ್ತನೆ ಬದಲಾದರೆ ಜಯವಿದೆ
- ವಿಷ್ಣು ಸಹಸ್ರನಾಮ ಪಠಿಸಿ
ಮಕರ
- ಪ್ರೀತಿ ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹ ಆಗಬಹುದು
- ಹಳೆಯ ಕೆಲಸದಿಂದ ಪ್ರಶಂಸೆ ಸಿಗಲಿದೆ
- ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
- ಶಿಕ್ಷಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
- ಮನೆಯ ಬಗ್ಗೆ ತುಂಬಾ ಕಾಳ ಜಿವಹಿಸಿ
- ವಿದೇಶ ಪ್ರಯಾಣ ಮಾಡುವವರು ಸಹಾಯ ಕೇಳಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ವ್ಯಾಪಾರ ವ್ಯವಹಾರದಲ್ಲಿ ರಾಜಿ ಬೇಡ ನಷ್ಟವಿದೆ
- ಮನೆಯವರ ಸಲಹೆ ಈ ದಿನ ಅನುಪಯುಕ್ತ
- ಜನರಿಂದ ಸವಾಲುಗಳು ಎದುರಾದರೂ ನಿಭಾಯಿಸುತ್ತೀರಿ
- ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ
- ಶ್ರಮ ಹೆಚ್ಚು ತೃಪ್ತಿ ಕಡಿಮೆ
- ಹಣದ ಲಾಭದಿಂದ ಮಾತ್ರ ಸಂತೋಷವಾಗಬಹುದು
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ವೃತ್ತಿಯಲ್ಲಿ ಕೆಲಸದಲ್ಲಿ ಸಮಾಧಾನವಿಲ್ಲದಿದ್ದರೆ ಬದಲಿಸುವ ಚಿಂತನೆ ಮಾಡಬಹುದು
- ಸ್ನೇಹಿತರು ಬಂಧುಗಳೊಂದಿಗೆ ವಿಷಯ ಚರ್ಚಿಸಲು ಅವಕಾಶವಿದೆ
- ಹಣದ ಅನುಕೂಲವಿದೆ
- ಮನೆಯಲ್ಲಿ ವಿರುದ್ಧ ಮಾತು ಸಲಹೆ ಬರಬಹುದು
- ಇಂದು ಮಂಗಳಕರ ದಿನ
- ಬದಲಾವಣೆಯಿಂದ ಶುಭಫಲ ಕಾಣಬಹುದು
- ನವಗ್ರಹ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us