/newsfirstlive-kannada/media/media_files/2025/10/27/bng_shrigandha_1-2025-10-27-11-46-40.jpg)
ಪುಷ್ಪ ಫ್ಲವರ್​ ಅನ್ಕೊಂಡ್ರಾ ಫಯರ್​​, ಈ ಡೈಲಾಗ್​ ಎಲ್ಲರಿಗೂ ನೆನಪಿದೆ ಅಲ್ವಾ. ಹಾಗೇನೇ ಈ ಸಿನಿಮಾದಲ್ಲಿ ಹೇಗೆ ಶ್ರೀಗಂಧವನ್ನ ಕಳ್ಳಸಾಗಣೆ ಮಾಡ್ತಾರೆ ಅಂತಾನೂ ನೋಡಿರ್ತಿರಾ. ಬಟ್​ ಪುಷ್ಪನಾ ಮೀರಿಸೋ ಹಾಗೆ ಇಲ್ಲೊಂದು ಗ್ಯಾಂಗ್​ ಶ್ರೀಗಂಧವನ್ನ​ ಕಳ್ಳ ಸಾಗಾಟ ಮಾಡಲು ಮುಂದಾಗಿತ್ತು. ಆದ್ರೆ ಗ್ರಹಚಾರ ಕೆಟ್ಟು ಇವ್ರ ಈರುಳ್ಳಿ ತಂತ್ರ ಫ್ಲಾಪ್ ಆಗಿದೆ.
/filters:format(webp)/newsfirstlive-kannada/media/media_files/2025/10/27/bng_shrigandha_2-2025-10-27-11-46-52.jpg)
ಹೊರಗಡೆಯಿಂದ ಹಾಲಿನ ಟ್ಯಾಂಕರ್, ಆದ್ರೆ ಅದ್ರೊಳಗಡೆ ಸ್ಯಾಂಡಲ್ವುಡ್. ಇದು ಪುಷ್ಪ ಸಿನಿಮಾದ ಕರಾಳ ಕಳ್ಳ ಸಾಗಣೆ ದಂಧೆಯ ಝಲಕ್​. ಆದ್ರೆ, ಇದೇ ಇದೇ ರೀಲ್ ಸೀನ್​ ರಿಯಲ್​ ಆಗಿ ಕಾಪಿಯಾಗಿದೆ. ಟೆಂಪೋ ತುಂಬಾ ಮೂಟೆ, ಮೂಟೆ ತುಂಬಾ ಈರುಳ್ಳಿ. ಓಪನ್​ ಮಾಡಿದ್ರೆ ನಿಮಗೆ ಕಾಣೋದೇ ಚಿನ್ನದ ಬೆಲೆಯ ಶ್ರೀಗಂಧ. ಇನ್ನೇನು ಪುಷ್ಪ ರೇಂಜ್​ನಲ್ಲಿ ಈ ಗ್ಯಾಂಗ್​ ಡೆಸ್ಟಿನೇಷನ್ ರೀಚ್ ಆಗಬೇಕು ಅಷ್ಟರಲ್ಲೇ ಪೊಲೀಸರ ಕೈನಲ್ಲಿ ಲಾಕ್​ ಆಗಿದ್ದಾರೆ.
‘ಈರುಳ್ಳಿ’ ಮೂಟೆ ಕತೆ!
- ಟೆಂಪೋದಲ್ಲಿ ಈರುಳ್ಳಿ ಮೂಟೆ ಅಂತಾ ಶ್ರೀಗಂಧದ ಮರಗಳ ಸಾಗಾಟ
- ಆಂಧ್ರದ ಕರ್ನೂಲ್​ನಿಂದ ಬೆಂಗಳೂರಿಗೆ ಶ್ರೀಗಂಧ ತಂದಿದ್ದ ಗ್ಯಾಂಗ್
- ಡೆಸ್ಟಿನೇಷನ್​ ರೀಚ್​ಗೂ ಮುನ್ನ ಪೊಲೀಸರಿಂದ ಮೂವರು ಅರೆಸ್ಟ್
- ತಪಾಸಣೆ ಮಾಡ್ತಿದ್ದ ಪೊಲೀಸ್ರಿಗೆ ಶ್ರೀಗಂಧದ ಮರಗಳ ಸಮೇತ ಲಾಕ್
- ಮೇಲಿನ ಮೂಟೆಗಳಲ್ಲಿ ಈರುಳ್ಳಿ, ಕೆಳಗಿನ ಮೂಟೆಗಳಲ್ಲಿ ಶ್ರೀಗಂಧದ ಮರ
- 18 ಶ್ರೀಗಂಧದ ಮರದ ತುಂಡುಗಳು ಬ್ಯಾಗ್​ನಲ್ಲಿರುವುದು ಜಪ್ತಿ ವೇಳೆ ಪತ್ತೆ
- 790 ಕೆ.ಜಿ ಶ್ರೀಗಂಧವನ್ನ ವಶಪಡಿಸಿಕೊಂಡ ಸಿದ್ದಾಪುರ ಪೊಲೀಸರು
- ಆಂಧ್ರದ ಸಿರಾಜ್ ಎಂಬಾತನಿಂದ ಅಕ್ರಮ ಸಾಗಾಣಿಕೆ ಬಗ್ಗೆ ಮಾಹಿತಿ
- ಆಂಧ್ರದಿಂದ ಬೆಂಗಳೂರು, ಬೆಂಗಳೂರಿಂದ ಚೀನಾಗೆ ಶ್ರೀಗಂಧ ಸಪ್ಲೈ ಶಂಕೆ
ಇದನ್ನೂ ಓದಿ: ಯಾವುದೇ ಕೆಲಸ ಇಲ್ಲ, ಆದರೂ ಹೆಂಡತಿಗೆ 37.54 ಲಕ್ಷ ರೂ ಸಂಬಳ ಕೊಡಿಸಿದ ಗಂಡ.. ಹೇಗೆ?
/filters:format(webp)/newsfirstlive-kannada/media/media_files/2025/10/27/bng_shrigandha-2025-10-27-11-47-04.jpg)
ಅದೇನೇ ಹೇಳಿ ಹೊರಗಡೆ ತಳುಕು ಬಳುಕು.. ಒಳಗೆ ಹುಳುಕು ಅನ್ನೋ ಹಾಗೆ ಮೇಲೆಲ್ಲಾ ಈರುಳ್ಳಿ ಒಳಗೆ ಸ್ಯಾಂಡಲ್​ವುಡ್​ ಕಳ್ಳ ಸಾಗಣಿಕೆ ಪತ್ತೆಯಾಗಿದ್ದು, ನಿಜಕ್ಕೂ ಶಾಕಿಂಗ್​. ಈ ಕರಾಳ ದಂಧೆ ಹಿಂದೆ ಯಾರ ಕೈವಾಡ ಇದೆ. ಇದು ಮೊದಲನೇ ಪ್ರಯತ್ನಾನಾ ಅಥವಾ ಇದೇ ಈ ಮೂವರ ಚಾಳಿನಾ, ಇದ್ರಲ್ಲಿ ಕಾಣದ ಕೈಗಳೆಷ್ಟು ಎಲ್ಲವೂ ಪೊಲೀಸರ ತನಿಖೆಯಿಂದ ಆಚೆ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us