ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ನುಗ್ಗಿದ್ದ ಮಳೆನೀರು.. ಹುಂಡಿಯಲ್ಲಿದ್ದ ನೋಟುಗಳನ್ನ ಒಣ ಹಾಕಿದ ಸಿಬ್ಬಂದಿ

ಕಳೆದ ಎರಡು ದಿನಗಳಿಂದ ಭಾರೀ ವರುಣಾರ್ಭಟದಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿತ್ತು. ಇದರಿಂದ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದೀಗ ನೀರು ಕಡಿಮೆಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ವರ್ಗ ನೋಟುಗಳನ್ನು ಒಣ ಹಾಕಿದ್ದಾರೆ.

author-image
Bhimappa
YALLAMMA
Advertisment

ಬೆಳಗಾವಿ: ಕಳೆದ ಎರಡು ದಿನಗಳಿಂದ ಭಾರೀ ವರುಣಾರ್ಭಟದಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿತ್ತು. ಇದರಿಂದ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದೀಗ ನೀರು ಕಡಿಮೆಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ವರ್ಗ ನೋಟುಗಳನ್ನು ಒಣ ಹಾಕಿದ್ದಾರೆ. 

ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ದೊಡ್ಡ ಮಟ್ಟದಲ್ಲಿ ನೀರು ನುಗ್ಗಿದ್ದರಿಂದ ಹುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ನೋಟುಗಳೆಲ್ಲ ತೊಯ್ದು ತೊಪ್ಪೆಯಾಗಿದ್ದವು. ಸದ್ಯ ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ಓಪನ್ ಮಾಡಿ ನೋಟುಗಳನ್ನು ದೇವಾಲಯದ ಆವರಣದಲ್ಲಿ ಒಣ ಹಾಕಿದ್ದಾರೆ. ಕೆಲವು ನೋಟುಗಳಿಗೆ ಮಣ್ಣು ಮೆತ್ತಿಕೊಂಡಿದ್ದು ಅಂತಹುಗಳನ್ನು ಸ್ವಚ್ಛಗೊಳಿಸಲಾಗಿದೆ. 

ಇದನ್ನೂ ಓದಿ:ಮತ್ತೆ ಹೆಣ್ಣುಮಗು ಹುಟ್ಟಿದ್ದಕ್ಕೆ ಬಿಸ್ಕತ್​ನಲ್ಲಿ ವಿಷವಿಟ್ಟು ಜೀವ ತೆಗೆದ TSR ಯೋಧ!

YALLAMMA_HUNDI

ಮಳೆಯಿಂದ ಯಲ್ಲಮ್ಮ ಗುಡ್ಡದಲ್ಲಿ  ಅವಾಂತರ ಹಿನ್ನೆಲೆಯಲ್ಲಿ ನೀರಲ್ಲಿ ಜಲಾವೃತವಾಗಿದ್ದ ಕಾಣಿಕೆ ಹುಂಡಿಗಳನ್ನ ದೇವಸ್ಥಾನದ ಸಿಬ್ಬಂದಿ ಓಪನ್ ಮಾಡಿ ನೋಟುಗಳನ್ನ ಹೊರಗೆ ತೆಗೆದು ಒಣ ಹಾಕಿದ್ದಾರೆ. ಹುಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ದೇವಸ್ಥಾನದ ಗರ್ಭಗುಡಿ ಸೇರಿ ಆವರಣದಲ್ಲಿ 3 ಅಡಿಯಷ್ಟು ನೀರು ನಿಂತಿತ್ತು. ಕಾಣಿಕೆ ಹುಂಡಿಯಲ್ಲಿ ನೀರು ನುಗ್ಗಿದ್ದರಿಂದ ನೋಟುಗಳಿಗೆ ಕುಂಕುಮ ಬಂಡಾರ ಮೆತ್ತಿಕೊಂಡಿದೆ. 

ಮತ್ತೊಂದೆಡೆ ದೇವಾಲಯದ ಆವರಣದಲ್ಲಿನ ಎಲ್ಲ ನೀರನ್ನ ಹೊರ ಹಾಕಿ ಸ್ವಚ್ಚಗೊಳಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Saundatti Yellamma
Advertisment