/newsfirstlive-kannada/media/media_files/2025/09/23/bengalore-case-1-2025-09-23-09-09-58.jpg)
ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಂಚಲನ ಮೂಡಿಸಿದ್ದ ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣದ ಆರೋಪಿ ಶಿಕ್ಷಕ ಮ್ಯಾಥಿವ್ ಇನ್ನೂ ಸಿಕ್ಕಿಲ್ಲ. ಪ್ರಕರಣ ದಾಖಲಾಗಿ ಎರಡು ದಿನಗಳಾದರೂ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
FIR ದಾಖಲು ಮಾಡಲು ಮೂರು ಬಾರಿ ಪೊಲೀಸ್ ಠಾಣೆ ಮಟ್ಟಿಲೇರಿದ್ದ ಸಂತ್ರಸ್ತೆಗೆ, ಪೊಲೀಸರು ಪ್ರಕರಣ ದಾಖಲಿಸರು ಹಿಂದೇಟು ಹಾಕಿದ್ದರು. ಮೊದಲ ಬಾರಿಗೆ ಕೋಣನಕುಂಟೆ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಇದರಿಂದಾಗಿ ಸಂತ್ರಸ್ತೆ ಮಹಿಳಾ ಆಯೋಗದ ಮೊರೆ ಹೋಗಿದ್ದರು, ಮಹಿಳಾ ಆಯೋಗ ಪ್ರಕರಣ ದಾಖಲಿಸಲು ಮೌಖಿಕ ಸೂಚನೆ ನೀಡಿತ್ತು. ಆದ್ರೆ ಪೊಲೀಸರು ಕೇವಲ NCR ಮಾತ್ರ ದಾಖಲು ಮಾಡಿಕೊಂಡಿದ್ದರು.
ನ್ಯೂಸ್ ಫಸ್ಟ್​ನಲ್ಲಿ ಸತತವಾಗಿ ವಂಚಕ ಮ್ಯಾಥಿವ್ ಕರ್ಮಕಾಂಡವನ್ನ ಸತತವಾಗಿ ಸುದ್ದಿ ಮಾಡಿತ್ತು. ಈ ಕುರಿತು ಮಂಗಳವಾರ ಮಹಿಳಾ ಆಯೋಗ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್​ಗೆ ಪತ್ರ ಬರೆಯಲಾಗಿತ್ತು. ಈ ಹಿನ್ನಲೆ ಮಂಗಳವಾರ ರಾತ್ರಿ ಕೋಣದಕುಂಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬುಧವಾರ ವಂಚಕ ಮ್ಯಾಥಿವ್ ವೀಡಿಯೊ ಮೂಲಕ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದ, ಇದಾದ ಬಳಿಕ ಮ್ಮಾಥಿವ್ ಪತ್ತೆಯಾಗಿಲ್ಲ. ಪೊಲೀಸರು ವಂಚಕ ಮ್ಯಾಥಿವ್​ಗಾಗಿ ಬಲೆ ಬೀಸಿದ್ದಾರೆ.
ಏನಿದು ಪ್ರಕರಣ..?
ರಾಜ್ಯದಲ್ಲಿ ‘ಪ್ರಜ್ವಲ್ ರೇವಣ್ಣ ಮಾದರಿ’ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕ ಮ್ಯಾಥಿವ್ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ನನ್ನನ್ನ ದೈಹಿಕವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅಲ್ಲದೇ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಇದನ್ನೂ ಓದಿ:ಮ್ಯಾಥಿವ್ ಬಳಿ 2500 ಅಶ್ಲೀಲ ವಿಡಿಯೋ ಆರೋಪ.. ಸಂತ್ರಸ್ತೆಗೆ ಮೋಸ ಮಾಡಿದ್ದು ಹೇಗೆ..?
ಸಂತ್ರಸ್ತೆ ಆರೋಪ ಏನು..?
ಸಂತ್ರಸ್ತೆ ಆರೋಪದ ಪ್ರಕಾರ.. ನನಗೆ ಈಗಾಗಲೇ ಮದುವೆಯಾಗಿತ್ತು. ಒಂದು ಹೆಣ್ಣು ಮಗು ಇದೆ. ಕಾನೂನು ಪ್ರಕಾರ ಡಿವೋರ್ಸ್ ಪಡೆದು ದೂರವಾಗಿದ್ದೇನೆ. ಮಗಳು ಖಾಸಗಿ ಶಾಲೆಯಲ್ಲಿ ಈ ಮ್ಯಾಥಿವ್​ನ ಪರಿಚಯ ಆಯಿತು. ಮ್ಯಾಥಿವ್, ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನಾಗಿ ಕೆಲಸ ಮಾಡ್ತಿದ್ದಾನೆ.
ಇಬ್ಬರ ನಡುವಿನ ಪರಿಚಯ, ಆತ್ಮೀಯತೆಗೆ ತಿರುಗಿ ಒಟ್ಟಿಗೆ ವಾಸ ಮಾಡಿದೇವು. ನಂತರ ಚರ್ಚ್ ಒಂದರ ಮುಂದೆ ಮದ್ವೆಯಾದೇವು. ಆತ ಜೊತೆಗಿದ್ದಾಗ ಏಕಾಂತ ಕ್ಷಣವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ನನ್ನದು ಮಾತ್ರವಲ್ಲ, ಕೆಲ ಯುವತಿ ಹಾಗೂ ಮಹಿಳೆಯರ ಜೊತೆಗೂ ಈತ ಹೀಗೆಯೇ ಮಾಡಿದ್ದಾನೆ. ಮೊನ್ನೆ ರಾತ್ರಿ ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಪರಾರಿ ಆಗಿದ್ದಾನೆ. ನನ್ನ ಮೊಬೈಲ್​ನಲ್ಲಿ ಮತ್ತಷ್ಟು ಸಾಕ್ಷಿ ಇತ್ತು. ಅದಕ್ಕೆ ಮೊಬೈಲ್ ಸಮೇತ ಜೂಟ್ ಆಗಿದ್ದಾನೆ.
ಮ್ಯಾಥಿವ್ ಮೊಬೈಲ್​​ನಲ್ಲಿ ಹಲವು ಅಶ್ಲೀಲ ವಿಡಿಯೋ ಮತ್ತು ಫೋಟೋಗಳಿದ್ದವು. ಯುವತಿಯರ ಜೊತೆ ಅಶ್ಲೀಲ ವಿಡಿಯೋ ಕಾಲ್ ಮತ್ತು ರೆಕಾರ್ಡ್ ಮಾಡಿದ್ದ. ಆತನ ಬಳಿ ಎರಡು ಮೊಬೈಲ್ ಇದ್ದವು. ಒಂದು ದಿನ ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗಿದ್ದ. ಈ ವೇಳೆ ನಾನು ಮೊಬೈಲ್ ಚೆಕ್ ಮಾಡಿದೆ. ಮೊಬೈಲ್​​ನಲ್ಲಿರುವ ಕೆಲವು ದೃಶ್ಯಗಳನ್ನ ನೋಡಿ ನನಗೆ ಗಾಬರಿ ಆಯಿತು. ‘ಆ ಮೊಬೈಲ್‌ನಲ್ಲಿ ಮ್ಯಾಥಿವ್​ನ 2500ಕ್ಕೂ ಅಧಿಕ ವಿಡಿಯೋಸ್ ಇತ್ತು. ನಾನು ಶಾಕ್ ಆದೆ. ಕೆಲ ವಿಡಿಯೋಗಳನ್ನ ತನ್ನ ಮೊಬೈಲ್​ಗೆ ಫಾರ್ವರ್ಡ್ ಮಾಡಿಕೊಂಡೆ. ಈ ವಿಚಾರ ಗೊತ್ತಾಗಿ ಇಬ್ಬರ ನಡುವೆ ಕಿರಿಕ್ ಆಯಿತು ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.
-ಸಂತ್ರಸ್ತೆ