Advertisment

ಲಿಂಗಾಯತ ವಿಧಿ ವಿಧಾನದಂತೆ ನೆರವೇರಿದ ಶರಣಬಸಪ್ಪ ಅಪ್ಪ ಅಂತ್ಯಸಂಸ್ಕಾರ

ಕಲ್ಯಾಣ ನಾಡನ್ನ ಶಿಕ್ಷಣ ಕಾಶಿಯನ್ನಾಗಿ ಮಾಡಿದ ಮಹಾನ್ ಸಂತ. ಅನ್ನ ದಾಸೋಹದ ಜೊತೆ ಅಕ್ಷರ ದಾಸೋಹವನ್ನ ಸಹ ಸಾರಿದ ಜ್ಞಾನ ಭಂಡಾರಿ. ಕಲ್ಯಾಣ ನಾಡಿನ ಆರಾಧ್ಯ ದೈವ ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ಅವಿಶ್ರಾಂತವಾಗಿ ದುಡಿದ ಸಂತನ ಅಗಲಿಕೆಗೆ ಲಕ್ಷಾಂತರ ಭಕ್ತಗಣ ಕಂಬನಿ ಮಿಡಿದಿದೆ.

author-image
NewsFirst Digital
kalaburagi sharanabasappa(3)
Advertisment

ಕಲ್ಯಾಣ ನಾಡನ್ನ ಶಿಕ್ಷಣ ಕಾಶಿಯನ್ನಾಗಿ ಮಾಡಿದ ಮಹಾನ್ ಸಂತ. ಅನ್ನ ದಾಸೋಹದ ಜೊತೆ ಅಕ್ಷರ ದಾಸೋಹವನ್ನ ಸಹ ಸಾರಿದ ಜ್ಞಾನ ಭಂಡಾರಿ. ಕಲ್ಯಾಣ ನಾಡಿನ ಆರಾಧ್ಯ ದೈವ ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ಅವಿಶ್ರಾಂತವಾಗಿ ದುಡಿದ ಸಂತನ ಅಗಲಿಕೆಗೆ ಲಕ್ಷಾಂತರ ಭಕ್ತಗಣ ಕಂಬನಿ ಮಿಡಿದಿದೆ. 

Advertisment

ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ

kalaburagi sharanabasappa(2)

ಬೇತಾಳನಂತೆ ಬೆಂಬಿಡದೇ ಕಾಡುವ ಬರದ ನಾಡಲ್ಲಿ ಅಕ್ಷರವನ್ನೇ ಉತ್ತಿ ಬಿತ್ತಿ ಬೆಳೆದ ಶಿಕ್ಷಣ ಯೋಗಿ. ಶರಣಬಸವೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದ ಜ್ಞಾನ ಭಂಡಾರಿ. ಲಿಂಗಾಯತ ಪರಂಪರೆಯ ಮಹಾ ದಾಸೋಹವನ್ನ ಅಕ್ಷರಶಃ ಪಾಲಿಸಿ ಮುನ್ನಡೆಸಿದ ಮಹಾ ದಾಸೋಹಿ. ಕಲ್ಯಾಣ ಕರ್ನಾಟಕದ ಕ್ರಾಂತಿ ಪುರುಷ ಡಾ.ಶರಣಬಸವಪ್ಪ ಅಪ್ಪ ನಿನ್ನೆ ಅಸಂಖ್ಯಾತ ಭಕ್ತಗಣವನ್ನ ಅಗಲಿದ್ದಾರೆ. 

ಕಲಬುರಗಿಯ ಕಾಮಧೇನು ಕಲ್ಪವೃಕ್ಷದಂತೆ ಬದುಕಿದ ಶರಣಬಸವೇಶ್ವರ ದೇವಸ್ಥಾನ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಮ್ಮ 90ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಅಪ್ಪಾ, ರಾತ್ರಿ 9:23ಕ್ಕೆ ಕಾಯಕ ಯೋಗಿಯ ಗುರುತಾದ ದಾಸೋಹ ಮಹಾ ಮನೆಯಲ್ಲಿ ಕೊನೆಯುಸಿರೆಳೆದ್ದಾರೆ.

Advertisment

kalaburagi sharanabasappa

ದಾಸೋಹ ಮಹಾಮನೆಯ ಎದುರಿನ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪುಷ್ಪಾಲಂಕೃತ ಮಂಟಪ ನಿರ್ಮಿಸಿ ಶರಣ ಬಸವಪ್ಪ ಅವರ ಪಾರ್ಥಿವ ಇರಿಸಲಾಗಿತ್ತು. ಬೆಳಿಗ್ಗೆ 8 ಗಂಟೆ ಹೊತ್ತಿಗೆ ಶರಣಬಸಪ್ಪ ಅಪ್ಪ ಅವರ ಪ್ರಸಾದಿ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಯ್ತು. ಜ್ಞಾನ ಭಂಡಾರಿ ಅಂತಿಮ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರವೇ ಹರಿದು ಬಂದಿತ್ತು. ಅಸಂಖ್ಯೆ ಭಕ್ತರ ದರ್ಶನದ ಕಾರಣ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಮೂರು ಸರದಿ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಶರಣ ಬಸಪ್ಪ ಅಪ್ಪ ಅವರ ಮಂತ್ರ ಶರೀರಕ್ಕೆ ಗಣ್ಯರು ಭಕ್ತರು, ಹಣೆಮಣಿದು, ಬಿಲ್ವಪತ್ರೆ, ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸಿದ್ರು. ಸ್ವಾಮೀಜಿಗಳು ಆರತಿ ಬೆಳಗಿ, ನುಡಿನಮನ ಸಲ್ಲಿಸಿದ್ರು. ಸಚಿವರು, ಶಾಸಕರು, ಜನಪ್ರತಿನಿಧಿಗಳು ಅಂತಿಮ ದರ್ಶನ ಪಡೆದ್ರು. 

kalaburagi sharanabasappa(1)

ಸಂಜೆ ಶರಣಬಸವೇಶ್ವರ ದೇವಸ್ಥಾನದ ಮುಂದೆ ಅಪ್ಪ ಅಂತ್ಯಕ್ರಿಯೆ ನೆರವೇರಿತು. ನೂರಾರು ಮಠಾಧಿಶರು ಸಮ್ಮುಖದಲ್ಲಿ ಉದ್ದ 16 ಪಾದ, ಅಂಗುಲ 9 ಪಾದ, ಮೂಲ 3 ಪಾದ ಅಂಗುಲ 5 ಅಡಿ ಆಳದ ಸಮಾಧಿ ಮೂಲಕ ಡಾ.ಅಪ್ಪಾ, ಸಮಾಧಿಯಸ್ಥರಾದ್ರು. ಮೊದಲ ಬಾರಿಗೆ ಎರಡು ಸಂಪ್ರದಾಯಗಳ ಸಮ್ಮಿಳನದಂತೆ ಅಂತ್ಯಕ್ರಿಯೆ ನೆರವೇರಿದೆ. ಪಂಚಪೀಠಗಳು ಮತ್ತು ಬಸವಾದಿ ಶರಣರ ತತ್ವದ ಪ್ರಕಾರ ಅಂತಿಮ ಕ್ರಿಯೆಗಳು ನಡೆದಿವೆ.. ಪೂಜ್ಯ ಅಪ್ಪ ಅವರ ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವ ಪತ್ರೆ, 5050 ವಿಭೂತಿ ಬಳಕೆ ಆಗಿದೆ. 
ಸೂರ್ಯೋದಯಕ್ಕೂ ಮುನ್ನವೇ ಶರಣಬಸವೇಶರ ಸಂಸ್ಥಾನಕ್ಕೆ ಪ್ರವಾಹೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ ದೇವಸ್ಥಾನದ ಜಾತ್ರಾ ಮೈದಾನದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣ ನಾಡಿನ ಅಕ್ಷರ ಹಾಗೂ ದಾಸೋಹ ಸಂತನ ಅಗಲಿಕೆಯಿಂದ ಮಹಾಮನೆಯನ್ನ ಮೌನಕ್ಕೆ ತಳ್ಳಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sharanabasappa Appa
Advertisment
Advertisment
Advertisment