/newsfirstlive-kannada/media/media_files/2025/11/03/klr_sheep_1-2025-11-03-10-58-06.jpg)
ಕೋಲಾರ: ಎಲ್ಲಿಯಾದರೂ ಕುರಿಗಳು ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಅಪ್ಪಿ ತಪ್ಪಿಯು ಮೂರು ಮರಿಗಳಿಗೆ ತಾಯಿ ಆಗುತ್ತವೆ. ಮೇಕೆಗಳಿಗೆ 3-4 ಮರಿಗಳು ಹುಟ್ಟುವುದು ಸಾಮಾನ್ಯ. ಆದರೆ ಇಲ್ಲೊಂದು ಕುರಿ ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಮರಿಗಳಿಗೆ ಜನ್ಮ ನೀಡಿದೆ.
ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಗ್ರಾಮದಲ್ಲಿ ಕುರಿಯೊಂದು ಅಪರೂಪಕ್ಕೆ 4 ಮರಿಗಳಿಗೆ ಜನ್ಮ ನೀಡಿದೆ. ಇದು ಆಂಜಿನಪ್ಪ ಎಂಬುವವರ ಕುರಿ ಆಗಿದೆ. ಇದುವರೆಗೂ ಇವರ ಮನೆಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು ಇಲ್ಲ. ಆದರೆ ಇದೇ ಮೊದಲ ಬಾರಿಗೆ ಆಂಜಿನಪ್ಪ ಅವರ ಕುರಿಗೆ 4 ಮರಿಗಳು ಹುಟ್ಟಿವೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೇ ಭಾರೀ ಭೂಕಂಪ.. ಜೀವ ಬಿಟ್ಟ 7 ಜನರು, 150 ಮಂದಿ ಗಂಭೀರ!
/filters:format(webp)/newsfirstlive-kannada/media/media_files/2025/11/03/klr_sheep-2025-11-03-10-58-20.jpg)
ಇದು ಗ್ರಾಮದ ಜನರಿಗೆ ಅಚ್ಚರಿ ಮೂಡುವಂತೆ ಮಾಡಿದೆ. ಸಾಮಾನ್ಯವಾಗಿ ಕುರಿಗಳು ಒಂದು ಅಥವಾ ಎರಡು ಮರಿಗಳು ಹಾಕುತ್ತವೆ. ಆದರೆ ಆಂಜಿನಪ್ಪ ಅವರ ಕುರಿ 4 ಮರಿ ಹಾಕಿರುವುದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸುದ್ದಿ ಗೊತ್ತಾಗುತ್ತಿದಂತೆ ಅಲ್ಲಿನ ಜನರು ಬಂದು ಮರಿಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ತಾಯಿ ಹಾಗೂ ನಾಲ್ಕು ಮರಿಗಳು ಆರೋಗ್ಯವಾಗಿವೆ. ಇನ್ನು ಕುರಿ ನಾಲ್ಕು ಮರಿ ಹಾಕಿದ್ದಕ್ಕೆ ರೈತ ಆಂಜಿನಪ್ಪ ಅವರು ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us