/newsfirstlive-kannada/media/media_files/2025/09/11/shivamogga-road-accident-2025-09-11-13-38-25.jpg)
ಶಿವಮೊಗ್ಗ: ಬೈಕ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಮದುವೆ ಫಿಕ್ಸ್ ಆಗಿದ್ದ ಜೋಡಿ ಸಾವನ್ನಪ್ಪಿದೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ನಡೆದಿದೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ.
ಆಗಿದ್ದೇನು?
ಸೊರಬ ತಾಲೂಕು ಗಂಗವಳ್ಳಿ ಗ್ರಾಮದ ಸದಾಶಿವ ಮತ್ತು ಲೀಲಮ್ಮ ಅವರ ಪುತ್ರ ಬಸವನಗೌಡ ಹಾಗೂ ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ಬಸವರಾಜಪ್ಪ ಅವರ ಪುತ್ರಿ ರೇಖಾ ಅಪಘಾತದಲ್ಲಿ ಮೃತಪಟ್ಟವರು. ಮೃತ ಯುವತಿ ರೇಖಾ ಹಾಗೂ ಬಸವನಗೌಡ ಮದುವೆ ಫಿಕ್ಸ್​ ಆಗಿತ್ತು. ನಿನ್ನೆ ಸಂಜೆ ಈ ಜೋಡಿ ಮತ್ತಿಕೋಟೆಯಿಂದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಹೊರಟ್ಟಿದ್ದರು.
/filters:format(webp)/newsfirstlive-kannada/media/media_files/2025/09/11/shivamogga-road-accident-2025-09-11-13-12-58.jpg)
ಆದ್ರೆ ದುರಾದೃಷ್ಟವಶಾತ್​ ಅಂಬಾರಕೊಪ್ಪ ಕ್ರಾಸ್ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಇಕೋ ಕಾರಿಗೆ ಬೈಕ್​ ಡಿಕ್ಕಿಯಾದ ಪರಿಣಾಮ, ಬಸವನಗೌಡ ಹಾಗೂ ರೇಖಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರ ವಿವಾಹ ದಿನಾಂಕ ನಿಗದಿಯಾಗಿರಲಿಲ್ಲ ಅಂತ ಹೇಳಲಾಗ್ತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us