ಪುರಾಣ ಪ್ರಸಿದ್ಧ ಚಂದ್ರಗುತ್ತಿಯಲ್ಲಿ ಜಾತ್ರಾ ಸಂಭ್ರಮ..!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 22 ರಿಂದ 27ರವರೆಗೆ ಜಾತ್ರೆ ನಡೆಯಲಿದೆ.

author-image
Ganesh Kerekuli
chandragutti temple (1)
Advertisment

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ  ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 22 ರಿಂದ 27ರವರೆಗೆ ಜಾತ್ರೆ ನಡೆಯಲಿದೆ.  

chandragutti temple (2)

ಈ ಹಿನ್ನೆಲೆಯಲ್ಲಿ ಈಗಾಗಲೇ ಸಾಂಪ್ರದಾಯಿಕ ಪದ್ಧತಿಯಂತೆ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಮೂಲಕ ತೆರಳಿ ಜಾತ್ರೆಗೆ ಕರೆ ನೀಡುವ ವಿಶಿಷ್ಟ ಧಾರ್ಮಿಕ ಪದ್ಧತಿ ನೆರವೇರಿತು.

chandragutti temple

ಈ ಮೂಲಕ ಜಾತ್ರಾ ಸಡಗರಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಫೆಬ್ರವರಿ 22 ರಂದು ಕಂಕಣ ಬಂಧನ, ಧ್ವಜಾರೋಹಣ, ಭೇರಿತಾಡನ, 23 ರಂದು ಕಳಶಸ್ಥಾಪನೆ ಯಾಗಶಾಲೆ ಪ್ರವೇಶ ವೃಷಭಯಂತ್ಯೋತ್ಸವ, 24 ರಂದು ಪುಷ್ಪಮಂಜರಿ ಯಂತ್ರೋತ್ಸವ ಸಣ್ಣತೇರು, 25 ರಂದು ಮಹಾ ರಥೋತ್ಸವ, 26 ರಂದು  ಅವಭೃಥೋತ್ಸವ ನಡೆಯಲಿದೆ.

ಇದನ್ನೂ ಓದಿ:ಕೆಂಪು ಕೋಟೆ, ಚಾಂದಿನಿ ಚೌಕ್ ದೇಗುಲ ಟಾರ್ಗೆಟ್: ಪಾಕ್​ ಲಷ್ಕರ್ ಉಗ್ರರಿಂದ ಭೀಕರ ಸ್ಫೋಟಕ್ಕೆ ಸ್ಕೆಚ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

chandragutti temple
Advertisment