/newsfirstlive-kannada/media/media_files/2026/02/06/kamalakar-guruji-4-2026-02-06-17-30-54.jpg)
ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಪ್ರಕರಣದ ಪ್ರಮುಖ ಆರೋಪಿ, ಜ್ಯೋತಿಷಿ ಕಮಲಾಕರ್ ಭಟ್‌ನ ಆರ್ಥಿಕ ಹಿನ್ನೆಲೆ ಮತ್ತು ಆಸ್ತಿ ವಿವರಗಳು ಒಂದೊಂದಾಗಿ ಹೊರಬರುತ್ತಿದ್ದು, ತನಿಖಾ ಅಧಿಕಾರಿಗಳೇ ಹುಬ್ಬೇರಿಸುವಂತೆ ಮಾಡಿದೆ. ಕೊಲೆ ಆರೋಪಿಯ ಮುಖವಾಡದ ಹಿಂದಿದ್ದ ‘ಆಧ್ಯಾತ್ಮಿಕ’ ಬಿಸಿನೆಸ್ ಮತ್ತು ಆಸ್ತಿಯ ವಿವರ ಈಗ ಲಭ್ಯವಾಗಿದೆ.
ಮುದುವಾಲದಲ್ಲಿ ಕೋಟಿ ಬೆಲೆಬಾಳುವ ಜಮೀನು
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ಶಿವಮೊಗ್ಗ ತಾಲ್ಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ ಬರೋಬ್ಬರಿ 10 ಎಕರೆ ಜಮೀನನ್ನು ಹೊಂದಿದ್ದಾನೆ. ಸುಮಾರು 5 ವರ್ಷಗಳ ಹಿಂದೆಯೇ ಈ ಜಮೀನನ್ನು 3.5 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿತ್ತು. ಸದ್ಯ ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 6 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಗೋಶಾಲೆ, ಮಠದ ಹೆಸರಲ್ಲಿ ಖರೀದಿ
ಈ ಬೃಹತ್ ಜಮೀನನ್ನು ಖರೀದಿಸುವಾಗ ಕಮಲಾಕರ್ ಭಟ್, ಅಲ್ಲಿ ಗೋಶಾಲೆ, ಮಠ ಮತ್ತು ದೇವಸ್ಥಾನ ನಿರ್ಮಿಸುವುದಾಗಿ ಹೇಳಿಕೊಂಡಿದ್ದ. ಜನರ ನಂಬಿಕೆ ಗಳಿಸಲು ಆರಂಭದಲ್ಲಿ ಅಲ್ಲಿ ಗೋಶಾಲೆಯನ್ನು ಸಹ ಆರಂಭಿಸಿದ್ದ ಎನ್ನಲಾಗಿದೆ.
ಕೆಲವೇ ತಿಂಗಳಲ್ಲಿ ಗೋಶಾಲೆ ಬಂದ್
ಆರಂಭದಲ್ಲಿ ಗೋಶಾಲೆ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದ ಕಮಲಾಕರ್ ಭಟ್, ಕೆಲವೇ ತಿಂಗಳಲ್ಲಿ ಅದನ್ನು ಮುಚ್ಚಿದ್ದ ಎನ್ನಲಾಗಿದೆ. ಗೋಶಾಲೆ ಬಂದ್ ಆದ ಬಳಿಕ ಆ ಜಾಗವನ್ನು ಕೇವಲ ಹೋಮ-ಹವನ ಮತ್ತು ಜ್ಯೋತಿಷ್ಯದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಸ್ಥಳೀಯರು ಮಾತಾಡಿಕೊಳ್ತಿದ್ದಾರೆ.
ಇದನ್ನೂ ಓದಿ:ಮಹಿಳಾ ಅಧಿಕಾರಿಯ ಮನೆಯಲ್ಲಿ ಹಿಡನ್ ಕ್ಯಾಮರಾ! ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್, 50 ಲಕ್ಷ ರೂ. ಗೆ ಬ್ಲ್ಯಾಕ್ ಮೇಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us