/newsfirstlive-kannada/media/media_files/2025/12/13/shimogga-story-2025-12-13-08-36-03.jpg)
ಶಿವಮೊಗ್ಗ: ಪ್ರೇಮಿಗಳನ್ನು ಬೆಂಬಲಿಸಿದ್ದಕ್ಕೆ ಇಬ್ಬರನ್ನು ಭೀಕರವಾಗಿ ಹ*ತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ.
ಕಿರಣ (25) ಮತ್ತು ಮಂಜುನಾಥ(65) ಕೊಲೆಯಾದ ದುರ್ದೈವಿಗಳು. 2 ದಿನದ ಹಿಂದಷ್ಟೇ ಪ್ರೀತಿಸುತ್ತಿದ್ದ ಶೃತಿ ಹಾಗೂ ನಂದೀಶ್ ಮನೆಯಿಂದ ಪರಾರಿಯಾಗಿದ್ದರು. ರಕ್ಷಣೆ ಕೋರಿ ನಿನ್ನೆ ಸಂಜೆ ಶೃತಿ ಹಾಗೂ ನಂದೀಶ್ ಜೋಡಿ ಪೊಲೀಸ್ ಠಾಣೆಗೆ ಆಗಮಿಸಿತ್ತು. ಈ ವೇಳೆ ನಂದೀಶ್​ ಜೊತೆ ತೆರಳುವುದಾಗಿ ಶೃತಿ ಹೇಳಿದ್ದಾಳೆ.
/filters:format(webp)/newsfirstlive-kannada/media/media_files/2025/12/13/shimogga-story-1-2025-12-13-08-38-12.jpg)
ಇದರಿಂದ ಕೋಪಗೊಂಡ ಯುವತಿಯ ಸಹೋದರ ಹಾಗೂ ಆತನ ಕಡೆಯವರು, ಪ್ರೇಮಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಿರಣ್​, ಮಂಜುನಾಥ್​ ಸಾ*ನ್ನಪ್ಪಿದ್ದಾರೆ, ಪ್ರಕರಣ ಸಂಬಂಧ ಪೊಲೀಸರು ಐವರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ 35 ವರ್ಷ ಕಳೆದ ಮೇಲೆ.. ಇಂಟ್ರೆಸ್ಟಿಂಗ್ ಸ್ಟೋರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us