/newsfirstlive-kannada/media/media_files/2025/09/24/smg-lover-death-2025-09-24-14-24-36.jpg)
ಶಿವಮೊಗ್ಗ ಲವರ್ ಡೆತ್ Photograph: (ಶಿವಮೊಗ್ಗ ಲವರ್ ಡೆತ್)
ಶಿವಮೊಗ್ಗ: ಪೋಷಕರು ಪ್ರೀತಿ ವಿರೋಧ ವ್ಯಕ್ತಪಡಿಸಿದಕ್ಕೆ ಮನನೊಂದು ಪ್ರೇಮಿಗಳು ಚಾನಲ್​ಗೆ ಹಾರಿದ್ದಾರೆ. ಈ ಘಟನೆ ಶಿವಮೊಗ್ಗ (shivamoga) ಜಿಲ್ಲೆ ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ನಡೆದಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಯುವತಿ ಮೃತಪಟ್ಟಿದ್ದಾಳೆ.
ಯುವಕ ಸೇಫಾಗಿದ್ಹೇಗೆ?
ಶಿವಮೊಗ್ಗ ಜಿಲ್ಲೆಯ ಅಂತರಗಂಗೆ ಭೋವಿ ಕಾಲೋನಿ ನಿವಾಸಿ 19 ವರ್ಷದ ಸ್ವಾತಿ ಹಾಗೂ ಸೂರ್ಯ ಎಂಬಾತ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ನೆರೆಹೊರೆಯವರಾಗಿದ್ದು, ಸ್ವಾತಿ ಪ್ರಥಮ ಪದವಿ ಓದುತ್ತಿದ್ದರೆ, ಸೂರ್ಯ ಕೆಲಸಕ್ಕೆ ಹೋಗುತ್ತಿದ್ದನು. ಆ ನಡುವೆ ಪ್ರೀತಿ ಬೆಳೆದು ಪ್ರೀತಿಸಿ ಮದುವೆಯಾಗಬೇಕಿದ್ದರು. ಮನೆಯವರಿಗೆ ಪ್ರೀತಿಯ ವಿಚಾರ ತಿಳಿದು ಇಬ್ಬರಿಗೂ ಬುದ್ಧಿ ಹೇಳಿದ್ದಾರೆ.
ಇದ್ದರಿಂದ ಮನನೊಂದು ಇಬ್ಬರು ಇರುವೆಯನ್ನ ಸಾಯಿಸಲು ಇಟ್ಟಿರುವ ಪುಡಿಯನ್ನ ಸೇವಿಸಿದ್ದಾರೆ. ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಚಾನಲ್‌ಗೆ ಹಾರಿದ್ದಾರೆ. ಆ ವೇಳೆ ಪ್ರಿಯಕರ ಸೂರ್ಯನಿಗೆ ಸಾವಿನ ಭಯ ಕಾಡಿದ್ದು, ಮರದ ದಿಮ್ಮಿಯ ಸಹಾಯದಿಂದ ಪ್ರಾಣಪಾಯದಿಂದ ಪಾರಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆದರೇ, ಈಗ ಯುವತಿಯ ತಾಯಿ ತಮ್ಮ ಮಗಳನ್ನು ಹತ್ಯೆ ಮಾಡಲಾಗಿದೆ. ಇದು ಆತ್ಮಹತ್ಯೆಯಲ್ಲ ಎಂದು ಆರೋಪಿಸಿದ್ದಾರೆ. ಸೂರ್ಯ ಎಂಬಾತನೇ ತಮ್ಮ ಮಗಳನ್ನು ಕರೆದೊಯ್ದು ನಾಲೆಗೆ ತಳ್ಳಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಗೆ ಯುವತಿ ಸ್ವಾತಿ ತಾಯಿ ಆಗ್ರಹಿಸಿದ್ದಾರೆ.