/newsfirstlive-kannada/media/media_files/2025/08/21/mahesh_thimarodi-2025-08-21-07-22-12.jpg)
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಚಿನ್ನಯ್ಯ ಎಲ್ಲಿದ್ದ, ಎಲ್ಲಿ ವಾಸವಿದ್ದ, ಹಣ ಯಾರಿಂದ ಪಡೆದ ಎನ್ನುವುದ ಕುರಿತು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಮನೆಯಲ್ಲಿ ಮಹಜರು ಮಾಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ತಡರಾತ್ರಿ 2:30ರವರೆಗೆ ನಡೆದ ಮಹಜರು ನಡೆಸಿದ್ದಾರೆ. ಈ ವೇಳೆ ಮಹಜರು ಪ್ರಕ್ರಿಯೆಯಲ್ಲಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ವಶಕ್ಕೆ ತೆಗೆದುಕೊಂಡ ವಸ್ತುಗಳನ್ನೆಲ್ಲ ಎಫ್ಎಸ್ಎಲ್ಗೆ ರವಾನೆ ಮಾಡಲಾಗುತ್ತದೆ.
ಇದನ್ನೂ ಓದಿ:ಮಳೆ ನರ್ತನ ಕೊಚ್ಚಿ ಹೋಗ್ತಿದೆ ಜೀವನ.. ಭೂಕುಸಿತದಿಂದ ಜೀವ ಬಿಟ್ಟ 13 ಜನ
ಮನೆಯಲ್ಲಿದ್ದಂತಹ ಮೊಬೈಲ್, ಬಟ್ಟೆ ಬರೆಗಳು, ಸಿಸಿಟಿವಿ ಡಿವಿಆರ್, ಹಾರ್ಡ್ ಡಿಸ್ಕ್, ಲಗೇಜ್ ಬ್ಯಾಗ್, ಚೆನ್ನ ಬಳಸುವ ದಿನನಿತ್ಯದ ವಸ್ತುಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳನ್ನ ಎಫ್ಎಸ್ಎಲ್ಗೆ ಇಂದು ರವಾನೆ ಮಾಡಲಾಗುತ್ತೆ. ಎಫ್ಎಸ್ಎಲ್ನಿಂದ ವರದಿ ಬಂದ ಬಳಿಕ ಇದರ ಸತ್ಯಾಸತ್ಯತೆ ಹೊರ ಬರುತ್ತದೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ 10 ಗಂಟೆಗಳ ಕಾಲ ಮಹಜರು ನಡೆಸಲಾಗಿದೆ. ಹಾಗೇ ಅವರ ಸಹೋದರ ಮೋಹನ್ ಶೆಟ್ಟಿ ಮನೆಯಲ್ಲಿ ರಾತ್ರಿ 2:30 ರವರೆಗೆ ಮಹಜರು ನಡೆದಿದೆ. ಈ ಇಬ್ಬರ ಮನೆಯು ಅಕ್ಕ-ಪಕ್ಕದಲ್ಲಿವೆ. ಇದು ಈಗಿರುವಾಗಲೇ ಚಿನ್ನಯ್ಯನಿಗೆ ಎರಡು ಲಕ್ಷ ರೂಪಾಯಿ ಕೊಟ್ಟಿದ್ದು ಯಾರು ಎಂದು ತಿಳಿದುಕೊಳ್ಳಲ್ಲಿದ್ದಾರೆ. ಈ ಎಲ್ಲದರ ನಡುವೆ ಇಂದು ಚೆನ್ನಯ್ಯನಿಗೆ ಮೆಡಿಕಲ್ ಟೆಸ್ಟ್ ಒಳಪಡಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ