/newsfirstlive-kannada/media/media_files/2025/11/08/sugarcane_farmers_protest_bagalkote-2025-11-08-07-35-19.jpg)
ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿಗಳನ್ನ ನಿಗದಿಪಡಿಸಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದು ಬೆಳಗಾವಿಯ ಗುರ್ಲಾಪುರ ಕ್ರಾಸ್​ನಲ್ಲಿ ಕಳೆದ 9 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಕಬ್ಬು ಬೆಳೆಗಾರರಲ್ಲಿ ಸಂಭ್ರಮ ತಂದಿದೆ. ಆದ್ರೆ, ವಿಜಯಪುರ- ಬಾಗಲಕೋಟೆ ರೈತರಲ್ಲಿ ಮಾತ್ರ ಗೊಂದಲ ಮೂಡಿದ್ದು, ಹೋರಾಟ ಮುಂದುವರಿಸಿದ್ದಾರೆ.
ಕಳೆದ 9 ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಮುಷ್ಕರಕ್ಕೆ ರಾಜ್ಯ ಸರ್ಕಾರ ತಲೆಬಾಗಿದೆ. ನಾ ಕೊಡೆ ನೀ ಬಿಡೆ ಅಂತ ಹಗ್ಗಜಗ್ಗಾಟ ನಡೆಸ್ತಿದ್ದ ರೈತರು ಮತ್ತು ಸರ್ಕಾರದ ಮಧ್ಯೆ ಕೊನೆಗೂ ಒಮ್ಮತ ಮೂಡಿದೆ. ಕಬ್ಬಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯಲ್ಲಿ 100 ರೂ. ಏರಿಕೆ ಮಾಡಿದೆ. 3,200 ರೂಪಾಯಿ ಇದ್ದ ಬೆಂಬಲ ಬೆಲೆಯನ್ನ 3,300ಕ್ಕೆ ಏರಿಕೆ ಮಾಡಲಾಗಿದೆ. ಹೋರಾಟದ ಕೇಂದ್ರವಾಗಿದ್ದ ಗುರ್ಲಾಪುರ ಕ್ರಾಸ್​​ನಲ್ಲಿ ಸಂಭ್ರಮ ಕಾಣಿಸಿದ್ರೆ, ಕೆಲವೆಡೆ ವಿರೋಧ ವ್ಯಕ್ತವಾಗಿದೆ.
/filters:format(webp)/newsfirstlive-kannada/media/media_files/2025/11/04/bgk_sugarcane_1-2025-11-04-07-37-38.jpg)
ಮುಷ್ಕರ ಮುಂದುವರಿಸಿದ ಬಾಗಲಕೋಟೆ, ವಿಜಯಪುರ ರೈತರು!
ಹೋರಾಟ ಅಂತ್ಯಹಾಡಿದ ರೈತರಲ್ಲೇ ಗೊಂದಲ ಸೃಷ್ಟಿ ಆಗಿದೆ. ಸರ್ಕಾರದ ನಿರ್ಧಾರ ಸ್ವಾಗತಿಸಿದ ಬೆಳಗಾವಿ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿ ಮುಷ್ಕರ ಕೈಬಿಟ್ಟಿರುವುದಾಗಿ ಘೋಷಿಸಿದ್ದಾರೆ.. ಆದರೆ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ರೈತರು ಮುಷ್ಕರ ಮುಂದುವರಿಸುವುದಾಗಿ ತಿಳಿಸಿದ್ದು, ರೈತ ಸಂಘಗಳಲ್ಲೇ ಒಡಕಿನ ದನಿ ಇಣುಕಿದೆ..
ವಿಜಯಪುರ, ಬಾಗಲಕೋಟೆ ರೈತರು ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಸರ್ಕಾರದ ತೀರ್ಮಾನವನ್ನ ತಿರಸ್ಕರಿಸಿದ ಮುಧೋಳದಲ್ಲಿ ರೈತರು ಪ್ರತಿಭಟನೆ ವಾಪಸ್ ಪಡೆದಿಲ್ಲ. ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಧರಣಿ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಹೋರಾಟದ ಸ್ಥಳಕ್ಕೆ ಬಂದು ತೀರ್ಮಾನ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಮ್ಮ ಬೇಡಿಕೆ ಕನಿಷ್ಟ 3,500 ಆಗಿತ್ತು. ಈಗ ಘೋಷಿಸಿದ ಹಣ ಸಾಲೋದಿಲ್ಲ. ಅದೇನೆ ಆದೇಶ ಇದ್ದರೂ ಹೋರಾಟ ಮುಂದುವರೆಯಲಿದೆ ಅಂತ ರೈತ ಮುಖಂಡ ವೀರಣ್ಣ ಹಂಚಿನಾಳ ಹೇಳಿದರು.
ಇದನ್ನೂ ಓದಿ:9 ದಿನ ಅಹೋರಾತ್ರಿ ಅನ್ನದಾತರ ಹೋರಾಟ.. ಸಿಕ್ಕ ಫಲ, ಕಬ್ಬಿಗೆ ಹೆಚ್ಚುವರಿ 100 ರೂ ಸಹಾಯಧನ
/filters:format(webp)/newsfirstlive-kannada/media/post_attachments/wp-content/uploads/2023/06/MSP-sugarcane.jpg)
ಸಂಸದ ರಮೇಶ ಜಿಗಜಿಣಗಿ ವಿರುದ್ಧ ಕಿಡಿ
ಇತ್ತ, ವಿಜಯಪುರ ಕಬ್ಬು ಬೆಳೆಗಾರರ ಬೇಡಿಕೆ ಬಗ್ಗೆ ಸ್ಪಷ್ಟತೆ ಸಿಗದ ಕಾರಣ ತಮ್ಮ ಧರಣಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಶನಿವಾರ ಒಂದು ದಿನ ಕಾಯುತ್ತೇವೆ. ಆಗಲೂ ಸ್ಪಷ್ಟತೆ ಸಿಗದಿದ್ದರೆ ಹೆದ್ದಾರಿ ಬಂದ್ ಮಾಡಲಾಗುವುದು ಅಂತ ರೈತ ಸಂಘದ ಮುಖಂಡರು ಎಚ್ಚರಿಸಿದ್ದಾರೆ. ವಿಜಯಪುರದ ಬಬಲೇಶ್ವರ ಪಟ್ಟಣದಲ್ಲಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗಿ ಆಗಿದ್ದ ಸಂಸದ ರಮೇಶ ಜಿಗಜಿಣಗಿ ವಿರುದ್ಧ ರೈತರು ಕಿಡಿಕಾರಿದ್ರು. ರೈತರ ಮಾತಿಗೆ ಆಕ್ರೋಶಗೊಂಡ ಜಿಗಜಿಣಗಿ ನಿಮಗಾಗಿ ರಾಜೀನಾಮೆ ಕೊಡೊಕೆ ಸಿದ್ಧ ಅಂತ ವಾಗ್ವಾದಕ್ಕಿಳಿದ ಘಟನೆ ನಡೀತು.
ಸರ್ಕಾರದ ನಿರ್ಧಾರಕ್ಕೆ ಕಬ್ಬು ಬೆಳೆಗಾರರಲ್ಲಿ ಸಂಭ್ರಮ ತಂದಿದೆ. ಈ ಹೋರಾಟದಿಂದ 100 ರೂ. ಆದ್ರೂ ಹೆಚ್ಚಾಗಿದೆ ಅಂತ ಖುಷಿಪಟ್ಟಿದ್ದಾರೆ. ಆದ್ರೆ, ವಿಜಯಪುರ-ಬಾಗಲಕೋಟೆ ರೈತರಲ್ಲಿ ಗೊಂದಲ ಮನೆ ಮಾಡಿದ್ದು, ಇವತ್ತು ಹೋರಾಟಕ್ಕೆ ತೆರೆ ಬೀಳುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us