/newsfirstlive-kannada/media/media_files/2026/01/25/oil-2026-01-25-11-05-10.jpg)
ಬೆಂಗಳೂರು: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಕಳೆದ ಒಂದು ವಾರದಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಏರುಪೇರಾಗಿದೆ.
ಒಂದೇ ವಾರದಲ್ಲಿ ದರ ಹೈಕ್
ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಎಣ್ಣೆಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೇವಲ ಏಳು ದಿನಗಳಲ್ಲಿ ಹತ್ತು ಲೀಟರ್ ಸೂರ್ಯಕಾಂತಿ ಎಣ್ಣೆಯ ಬೆಲೆ 1600 ರಿಂದ 1620 ರೂಪಾಯಿಗೆ ಜಿಗಿದಿದೆ. ಇನ್ನು ಪಾಮ್ ಆಯಿಲ್ ದರದಲ್ಲೂ ಲೀಟರ್‌ಗೆ ಸುಮಾರು 20 ರೂಪಾಯಿ ಏರಿಕೆಯಾಗಿದ್ದು ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಬೆಲೆ ಏರಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಏರಿಕೆಯಾಗಿರುವುದು ನೇರವಾಗಿ ಭಾರತದ ಮೇಲೂ ಪರಿಣಾಮ ಬೀರಿದೆ.
ಇದನ್ನೂ ಓದಿ:SSLC ವಿದ್ಯಾರ್ಥಿಗಳೇ ಗಮನಿಸಿ.. ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ..!
ಆಮದು ಸುಂಕ ಮತ್ತು ರೂಪಾಯಿ ಮೌಲ್ಯ: ಭಾರತವು ಅಡುಗೆ ಎಣ್ಣೆಯ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ತೈಲ ದುಬಾರಿಯಾಗುತ್ತಿದೆ.
ಪೂರೈಕೆ ಕೊರತೆ: ಮುಕ್ತ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಹಾದಿ ಮಾಡಿಕೊಟ್ಟಿದೆ.
ವಿವಿಧ ಎಣ್ಣೆಗಳ ಇಂದಿನ ದರ ಪಟ್ಟಿ
ಎಣ್ಣೆಯ ವಿಧ | ಹಿಂದಿನ ದರ (ಲೀಟರ್​ಗೆ) | ಇವತ್ತಿನ ದರ (ಲೀಟರ್​) |
| ಸೂರ್ಯಕಾಂತಿ ಎಣ್ಣೆ | 140 | 160 |
| ಕಡಲೆಕಾಯಿ ಎಣ್ಣೆ | 210 | 220 |
| ಪಾಮ್ ಆಯಿಲ್ | 116 | 122 |
| ಸೋಯಾ ಎಣ್ಣೆ | 130 | 140 |
| ರೈಸ್ ಬ್ರಾನ್ ಆಯಿಲ್ | 136 | 140 |
| ಸಾಸುವೆ ಎಣ್ಣೆ | 175 | 180 |
| ದೀಪದ ಎಣ್ಣೆ | 126 | 130 |
ಗೃಹಿಣಿಯರ ಆತಂಕ
ಬೆಲೆ ಏರಿಕೆಯಿಂದಾಗಿ ಅಡುಗೆ ಮನೆಯ ಬಜೆಟ್ ನಿರ್ವಹಿಸುವುದು ಕಷ್ಟವಾಗುತ್ತಿದೆ. ತರಕಾರಿ ಬೆಲೆ ಏರಿಕೆಯ ನಡುವೆ ಈಗ ಅಡುಗೆ ಎಣ್ಣೆಯೂ ದುಬಾರಿಯಾಗಿರುವುದು ಒಗ್ಗರಣೆ ಹಾಕುವ ಮುನ್ನವೂ ಯೋಚನೆ ಮಾಡುವಂತೆ ಮಾಡಿದೆ" ಎಂದು ಗೃಹಿಣಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬೆಲೆ ಇಳಿಕೆಯಾಗುತ್ತದೆಯೇ ಅಥವಾ ಮತ್ತಷ್ಟು ಏರಿಕೆಯಾಗುತ್ತದೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ: ತನ್ನ ಸಚಿವರ ವಿರುದ್ಧವೇ ಸಿಎಂ ಅಸಮಾಧಾನ, ಖಡಕ್ ವಾರ್ನಿಂಗ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us