Namma Metro ಯೆಲ್ಲೋ ಲೈನ್​​ ಆರಂಭಕ್ಕೆ ಮುಹೂರ್ತ ನಿಗಧಿ​.. ಪ್ರಧಾನಿ ಮೋದಿಯಿಂದ ಉದ್ಘಾಟನೆ

ಬೆಂಗಳೂರು ಜನರ ಸಂಚಾರದ ಜೀವನಾಡಿ ‘ನಮ್ಮ ಮೆಟ್ರೋ’ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ತಿದೆ. ಈಗಾಗಲೇ ಓಡಾಟಕ್ಕೆ ಸಿದ್ಧವಾಗಿರುವ ಯೆಲ್ಲೋ ಲೈನ್ ಇದೇ ತಿಂಗಳು ಆರಂಭಗೊಳ್ಳುತ್ತಿದ್ದು, ಖುದ್ದು ಪ್ರಧಾನಿ ಮೋದಿಯೇ ಉದ್ಘಾಟಿಸಲಿದ್ದಾರೆ.

author-image
Ganesh
Namma metro yellow line
Advertisment

ಬೆಂಗಳೂರು ಜನರಿಗೆ ಭರ್ಜರಿ ಗುಡ್​​ನ್ಯೂಸ್​ ಸಿಕ್ಕಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಲಿದ್ದು, ಯೆಲ್ಲೋ ಲೈನ್ ಮೆಟ್ರೋ (Namma Metro) ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಅಂತಾ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. 

ಗುಡ್​ನ್ಯೂಸ್

ಯೆಲ್ಲೋ ಲೈನ್ (Yellow line) ಆರಂಭದ ಬಗ್ಗೆ ಖಚಿತಪಡಿಸಿ ಟ್ವೀಟ್ ಮಾಡಿರುವ ಸಂಸದರು, ಆಗಸ್ಟ್ 10ಕ್ಕೆ ಹಳದಿ ಮಾರ್ಗ ಅಧೀಕೃತವಾಗಿ ಆರಂಭ ಆಗಲಿದೆ. ಕೇಂದ್ರದಿಂದ ಹಳದಿ ಮಾರ್ಗ ಆರಂಭದ ಬಗ್ಗೆ ಘೋಷಣೆ ಮಾಡಲಾಗಿದೆ. ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ ಬರಲಿದ್ದಾರೆ. ಯೆಲ್ಲೋ ಲೈನ್ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಮೆಟ್ರೋ 3ನೇ ಹಂತದ ಕಾಮಗಾರಿ ಆರಂಭಕ್ಕೂ ಅಡಿಪಾಯ ಹಾಕಲಿದ್ದಾರೆ. ಯೆಲ್ಲೋ ಲೈನ್ ಪ್ರಿಯರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. 


ಹಳದಿ ಮಾರ್ಗ..!

  • ಒಟ್ಟು 19.5 ಕಿ.ಮೀ ಉದ್ದದಲ್ಲಿ ಸಿದ್ಧವಾಗಿರುವ ಹಳದಿ ಮಾರ್ಗ
  •  ಪ್ರತಿದಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚಾರ
  •  ಪ್ರತಿದಿನ 25,000 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ 
  •  ಸದ್ಯಕ್ಕೆ ರೈಲುಗಳು 20 ನಿಮಿಷಗಳ ಅಂತರದಲ್ಲಿ ಸಂಚರಿಸುವ ಸಾಧ್ಯತೆ

ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಸುರಕ್ಷತಾ ತಪಾಸಣೆ ಯಶಸ್ವಿಯಾಗಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ಸುರಕ್ಷತಾ ತಪಾಸಣೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಿದ್ದರು. ವರದಿಯಲ್ಲಿ ಕೆಲವು ಸಣ್ಣಪುಟ್ಟ ಷರತ್ತುಗಳನ್ನು ವಿಧಿಸಿದ್ದಾರೆ. ಅದನ್ನು ಕೆಲವೇ ದಿನಗಳಲ್ಲಿ ಸರಿಪಡಿಸುವುದಾಗಿ BMRCL ಭರವಸೆ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬ ಆಗಿರುವ ಈ ಮೆಟ್ರೋ  ಸೇವೆ ಆಗಸ್ಟ್​ನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. ರೈಲುಗಳ ಕೊರತೆಯಿಂದಾಗಿ ಇದು ವಿಳಂಬವಾಗಿತ್ತು. 

ಇದನ್ನೂ ಓದಿ:ಬರೀ 1 ರೂಪಾಯಿಗೆ 30 ದಿನ ಅನ್​ ಲಿಮಿಟೆಡ್ ಕರೆ, 2GB ಡೇಟಾ; BSNL ಫ್ರೀಡಂ ಆಫರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Namma metro
Advertisment