ಬರೀ 1 ರೂಪಾಯಿಗೆ 30 ದಿನ ಅನ್​ ಲಿಮಿಟೆಡ್ ಕರೆ, 2GB ಡೇಟಾ; BSNL ಫ್ರೀಡಂ ಆಫರ್​..!

ಸರ್ಕಾರಿ ಟೆಲಿಕಾಂ ಕಂಪನಿ BSNL ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಕೇವಲ 1 ರೂಪಾಯಿಗೆ 28 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ, ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಮತ್ತು ಪ್ರತಿದಿನ 100 ಉಚಿತ SMS ಪಡೆಯಲಿದ್ದಾರೆ.

author-image
Ganesh
ಗ್ರಾಹಕರಿಗೆ ಗುಡ್​ನ್ಯೂಸ್​; ಕಡಿಮೆ ದರದಲ್ಲಿ ಹಲವು ಬೆನಿಫಿಟ್ಸ್​​; ಏನಿದು BSNL ಹೊಸ ಪ್ಲಾನ್​​?
Advertisment

ಸರ್ಕಾರಿ ಟೆಲಿಕಾಂ ಕಂಪನಿ BSNL ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಗ್ರಾಹಕರು ಕೇವಲ 1 ರೂಪಾಯಿಗೆ 28 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ, ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಮತ್ತು ಪ್ರತಿದಿನ 100 ಉಚಿತ SMS ಪಡೆಯಲಿದ್ದಾರೆ. ಈ ಕೊಡುಗೆ ವಿಶೇಷವಾಗಿ ಹೊಸ BSNL ಗ್ರಾಹಕರಿಗೆ ಆಗಿದೆ. ಸಾಧ್ಯವಾದಷ್ಟು ಜನರನ್ನು ತಲುಪುವ ಉದ್ದೇಶದಿಂದ ಬಿಎಸ್​ಎನ್​​​ಎಲ್ ಇಂಥ ನಿರ್ಧಾರಕ್ಕೆ ಮುಂದಾಗಿದೆ. 

BSNL ಹೊಸ ‘ಫ್ರೀಡಂ ಆಫರ್’

ಬಿಎಸ್ಎನ್ಎಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ‘ಟ್ರೂ ಡಿಜಿಟಲ್ ಫ್ರೀಡಂ’ ಎಂಬ ಹೆಸರಿನಲ್ಲಿ ಮಾಹಿತಿ ನೀಡಿದೆ. ಆಗಸ್ಟ್ 1 ರಿಂದ ಆಗಸ್ಟ್ 31ರ ನಡುವೆ ಗ್ರಾಹಕರು ಹೊಸ ಬಿಎಸ್ಎನ್ಎಲ್ ಸಿಮ್ ಖರೀದಿಸಿದರೆ, ಕೇವಲ 1 ರೂಪಾಯಿ ರೀಚಾರ್ಜ್ ಮಾಡಿದರೆ 30 ದಿನಗಳವರೆಗೆ ಈ ಸೌಲಭ್ಯಗಳನ್ನ ಪಡೆಯುತ್ತಾರೆ ಎಂದಿದೆ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯ ಇರಲಿದೆ. ಗ್ರಾಹಕರು ಯಾವುದೇ BSNL ಕೇಂದ್ರದಿಂದ 1 ರೂಗೆ ಹೊಸ ಸಿಮ್ ಕಾರ್ಡ್ ಖರೀದಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. 

ಇದನ್ನೂ ಓದಿ:ಧರ್ಮಸ್ಥಳ ಕೇಸ್​ ಬಗ್ಗೆ ಹೊಸ ಕತೆ ಹೇಳಿದ ಮತ್ತೊಬ್ಬ.. 15 ವರ್ಷಗಳ ಹಿಂದಿನ ಕಹಿ ಘಟನೆ ಬಗ್ಗೆ ಹೇಳಿದ್ದೇನು?

TRAI ಇತ್ತೀಚಿನ ವರದಿಯ ಪ್ರಕಾರ.. ಇತ್ತೀಚೆಗೆ ಲಕ್ಷಾಂತರ ಬಳಕೆದಾರರು BSNL ಮತ್ತು Vi ನಿಂದ ಇತರ ಕಂಪನಿಗಳಿಗೆ ಪೋರ್ಟ್ ಆಗಿದ್ದಾರೆ. ಬಿಎಸ್​ಎನ್​​ಎಲ್ ಬಳಕೆದಾರರ ಸಂಖ್ಯೆ ಕುಸಿಯುತ್ತಿದೆ. ಹೀಗಾಗಿ ತನ್ನ ಮಾರುಕಟ್ಟೆ ಪಾಲನ್ನು ಬಲಪಡಿಸಲು ಇಂಥ ಆಫರ್ ನೀಡಿದೆ. 

ಏರ್‌ಟೆಲ್‌ ಹೊಸ ಯೋಜನೆ

ಏರ್‌ಟೆಲ್ ಇತ್ತೀಚೆಗೆ 399 ರೂಪಾಯಿ ಪ್ಲಾನ್ ಪರಿಚಯಿಸಿದೆ. ಇದರ ಮಾನ್ಯತೆಯ ಅವಧಿ 28 ದಿನಗಳು. ಇದು ಅನಿಯಮಿತ ಧ್ವನಿ ಕರೆ, ಹೈ-ಸ್ಪೀಡ್ ಡೇಟಾ ಮತ್ತು ಉಚಿತ ರಾಷ್ಟ್ರೀಯ ರೋಮಿಂಗ್ ನೀಡುತ್ತದೆ. ಪ್ರತಿದಿನ 2.5GB ಡೇಟಾ ಮತ್ತು 100 SMS ಉಚಿತವಾಗಿ ಪಡೆಯುತ್ತಾರೆ. 28 ದಿನಗಳವರೆಗೆ ಜಿಯೋಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆ ಸಹ ಒಳಗೊಂಡಿದೆ. OTT ಪ್ರಿಯರಿಗೂ ಲಾಭ ಇದೆ. 

ಇದನ್ನೂ ಓದಿ: ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಂದ 40 ವಿಧದ ಉದ್ಯೋಗಕ್ಕೆ ಕುತ್ತು, ಮೈಕ್ರೋಸಾಫ್ಟ್ ಕಂಪನಿಯ ವರದಿಯಲ್ಲಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

bsnl plan
Advertisment