/newsfirstlive-kannada/media/media_files/2025/10/14/udp_3_students-2025-10-14-22-32-36.jpg)
ಉಡುಪಿ: 16 ವರ್ಷದ ಒಳಗಿನ ಮೂವರು ಮಕ್ಕಳು ಸಮುದ್ರಕ್ಕೆ ಈಜಲು ತೆರಳಿದ್ದ ವೇಳೆ ನೀರು ಪಾಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ಸಂಕೇತ್ (16), ಸೂರಜ್ (15 ) ಹಾಗೂ ಆಶಿಶ್ (14) ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟವರು. ಸಮುದ್ರದ ನೀರಿನಲ್ಲಿ ಮೂವರು ವಿದ್ಯಾರ್ಥಿಗಳ ಮೃತದೇಹಗಳು ಪತ್ತೆ ಆಗಿವೆ. ಮಕ್ಕಳನ್ನು ಕಂಡು ಪೋಷಕರ ಆಕ್ರಂದನ ಹೇಳತೀರದಂತೆ ಇತ್ತು. ಹೆತ್ತಮಕ್ಕಳು ಕಣ್ಣ ಮುಂದೆಯೇ ಶವವಾಗಿ ಬಿದ್ದಿರುವುದು ಹೆತ್ತವರ ಕರುಳು ಹಿಂಡುವಂತೆ ಇತ್ತು.
ಇದನ್ನೂ ಓದಿ:ಬಿಗ್ ಶಾಕ್​.. ಬೆಂಗಳೂರಲ್ಲಿಯೇ ಕೋಟಿ ಕೋಟಿ ಆಸ್ತಿ ಗಳಿಕೆ ಮಾಡಿರುವ ಸರ್ಕಾರಿ ಅಧಿಕಾರಿಗಳು
ಸಂಕೇತ್, ಆಶಿಶ್ ಹಾಗೂ ಸೂರಜ್ ಮೂವರು ಹೊಸ ಹಿತ್ಲು ಬೀಚ್​ನಲ್ಲಿ ಸಂಜೆ ವೇಳೆ ಈಜಲು ಹೋದಾಗ ಈ ದುರಂತ ಸಂಭವಿಸಿದೆ. ಈ ಪೈಕಿ ಓರ್ವ ಪಿಯುಸಿ ವಿದ್ಯಾರ್ಥಿ ಎನ್ನುವುದು ಗೊತ್ತಾಗಿದೆ. ಉಳಿದ ಇಬ್ಬರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಆಗಿದ್ದಾರೆ. ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ