/newsfirstlive-kannada/media/media_files/2025/10/16/mys_tiger-2025-10-16-19-59-22.jpg)
ಮೈಸೂರು: ಹತ್ತಿ ಬೆಳೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪದ ಬಡಗಲಪುರ ಗ್ರಾಮದಲ್ಲಿ ನಡೆದಿದೆ. ನರಭಕ್ಷಕ ಹುಲಿ ಮಾರಾಣಾಂತಿಕ ದಾಳಿಯಿಂದ ರೈತ ಜೀವ ಬಿಟ್ಟಿದ್ದಾನೆ.
ಬಡಗಲಪುರ ಗ್ರಾಮದ ಮಹದೇವ (34) ಮೃತ ರೈತ. ಹತ್ತಿ ಬೆಳೆಯ ಜಮೀನಿನಲ್ಲಿ ರೈತ ಎಂದಿನಂತೆ ಕೆಲಸ ಮಾಡುತ್ತಿದ್ದನು. ಜಮೀನಿನಲ್ಲಿ ಹತ್ತಿಯನ್ನು ಬಿಡಿಸುತ್ತಿರುವಾಗ ವ್ಯಾಘ್ರ ದಾಳಿ ಮಾಡಿ ರೈತನ ರಕ್ತ ಹೀರಿದೆ. ಬಳಿಕ ಕಾಡಿನತ್ತ ಎಳೆದೊಯ್ಯುತ್ತಿರುವಾಗ ಸ್ಥಳದಲ್ಲಿದ್ದ ಸಾರ್ವಜನಿಕರು, ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕೂಗಾಟ, ಚೀರಾಟ ಮಾಡಿದ್ದಾರೆ. ಇದರಿಂದ ಬೃಹತ್ ಗಾತ್ರದ ನರಭಕ್ಷಕ ಹುಲಿ, ರೈತನ ಕಳೇಬರವನ್ನು ಅಲ್ಲೇ ಬಿಟ್ಟು ಓಡಿ ಹೋಗಿದೆ.
ಇದನ್ನೂ ಓದಿ:ಸುಳ್ಳು ಹೇಳಿ ಮನೆಗೆ ಕರೆದುಕೊಂಡು ಬಂದ.. ಡಾ.ಕೃತಿಕಾ ಬಗ್ಗೆ ಸಹೋದರಿ ನಿಕಿತಾ ಹೇಳಿದ್ದೇನು?
ಸದ್ಯ ರೈತನನ್ನು ಬಲಿ ಪಡೆದಿರುವ ಹುಲಿಯಿಂದ ಬಡಗಲಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ರೈತರ ತಾಳ್ಮೆ ಕಳೆದುಕೊಂಡಿದ್ದಾರೆ. ರೈತ ಮಹದೇವ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತತ ಎರಡು ತಿಂಗಳಿಂದ ಗ್ರಾಮದ ಸುತ್ತಮುತ್ತಲಲ್ಲಿ ನರಭಕ್ಷಕ ವ್ಯಾಘ್ರ ಓಡಾಡುತ್ತಿತ್ತು. ಆದರೆ ಈ ಬಗ್ಗೆ ಅರಣ್ಯ ಇಲಾಖೆಯವರು ಗಮನ ಹರಿಸಿರಲಿಲ್ಲ. ಸದ್ಯ ಬೃಹತ್ ಗಾತ್ರದ ಹುಲಿಯನ್ನ ನೋಡಿ ಜಮೀನುಗಳಿಗೆ ತೆರಳಲು ಸುತ್ತಮುತ್ತಲ ಗ್ರಾಮದ ರೈತರು, ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಲಿನ ಸೆರೆ ಹಿಡಿಯಲು 2 ಆನೆಗಳ ಮೂಲಕ ಕೂಂಬಿಂಗ್ ಕಾರ್ಯ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ