/newsfirstlive-kannada/media/media_files/2025/10/18/gold_price-2025-10-18-13-55-50.jpg)
ಬೆಂಗಳೂರು: ಹಳದಿ ಲೋಹ ಅದೇ ಚಿನ್ನ ಅಂತರಲ್ಲಾ.. ಅದರ ಬೆಲೆ ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಇದರಿಂದ ಗ್ರಾಹಕರು ಚಿನ್ನದ ಖರೀದಿಸಬೇಕೋ, ಬೇಡ್ವೋ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಏಕೆಂದರೆ ಹಾಗೇ ಬಿಟ್ಟರೇ ಇನ್ನಷ್ಟು ಬೆಲೆ ಏರಿಕೆ ಆಗುತ್ತದೆ. ಮುಂದೆ ಯಾವಾಗಲಾದರೂ ಖರೀದಿ ಮಾಡೋಣ ಎಂದರೆ ಅವಾಗ ಬೆಲೆ ಡಬಲ್ ಜಾಸ್ತಿ ಆಗಿರುತ್ತದೆ.
2024ರಿಂದ ಈ ವರೆಗೆ ಚಿನ್ನದ ದರದಲ್ಲಿ ಇಳಿಕೆಗಳಿಗಿಂತಲೂ ಏರಿಕೆಗಳು ಆಗಿರುವುದೇ ಹೆಚ್ಚು. ಹೀಗಾಗಿ 30, 40 ಸಾವಿರ ಆಸುಪಾಸಿನಲ್ಲಿದ್ದ ಚಿನ್ನ ಈಗ 1 ಲಕ್ಷದ 30 ಸಾವಿರ ರೂಪಾಯಿವರೆಗೆ ಬಂದು ನಿಂತಿದೆ. ಕೇವಲ ಎರಡೇ ವರ್ಷದಲ್ಲಿ ಚಿನ್ನ ಶೇಕಡಾ 100 ರಷ್ಟು ಏರಿಕೆ ಅಗಿದೆ ಎನ್ನಲಾಗುತ್ತಿದೆ ಇದರ ಜೊತೆಗೆ ಈಗ ಖುಷಿ ವಿಷ್ಯ ಎಂದರೆ ಬಂಗಾರದ ಬೆಲೆಯಲ್ಲಿ 10 ಗ್ರಾಂಗೆ 1,910 ರೂಪಾಯಿ ಕಡಿಮೆ ಆಗಿದೆ.
ಇದನ್ನೂ ಓದಿ: BIGG BOSS; ರಕ್ಷಿತಾ ಆಟ ಮೆಚ್ಚಲೇಬೇಕು.. ಜಾಹ್ನವಿ, ಅಶ್ವಿನಿ ಮಾಡಿದ್ದು ಸರಿ ಇದೆಯಾ?
ಪ್ರಪಂಚದಲ್ಲಿ ರಾಜಕೀಯ ಉದ್ವಿಗ್ನತೆಗಳು, ಆಕ್ರಮಣಕಾರಿ ಬಡ್ಡಿದರ ಕಡಿತ, ಕೇಂದ್ರ ಬ್ಯಾಂಕ್ ಖರೀದಿ, ಡಾಲರ್ ರಹಿತೀಕರಣ ಹಾಗೂ ಬಲವಾದ ವಿನಿಮಯ ವ್ಯಾಪಾರ ನಿಧಿಗಳ (ETF) ಒಳ ಹರಿವುಗಳಿಂದ ಬಂಗಾರದ ಬೆಲೆಗಳಲ್ಲಿ ಏರಿಕೆ ನಿರಂತರವಾಗಿದೆ. ಸೇರಿದಂತೆ ಹಲವಾರು ಅಂಶಗಳಿಂದಾಗಿ ಬೆಲೆಗಳು ಏರುತ್ತಿವೆ. ಉಕ್ರೇನ್ ಆಕ್ರಮಣದ ನಂತರ ರಷ್ಯಾದ ವಿದೇಶಿ ಕರೆನ್ಸಿ ನಿಕ್ಷೇಪಗಳು ಸ್ಥಗಿತವಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣ.
24 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ
ಗ್ರಾಂ | ಇಂದಿನ ದರ | ನಿನ್ನೆಯ ಬೆಲೆ | ಎಷ್ಟು ರೂಪಾಯಿ ಕಡಿಮೆ ಆಗಿದೆ? |
01 | 13,086 | 13,277 | 191 |
08 | 1,04,688 | 1,06,216 | 1,528 |
10 | 1,30,860 | 1,32,770 | 1,910 |
100 | 13,08,600 | 13,27,700 | 19,100 |
22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ಗ್ರಾಂ | ಇಂದಿನ ದರ | ನಿನ್ನೆಯ ಬೆಲೆ | ಎಷ್ಟು ರೂಪಾಯಿ ಕಡಿಮೆ ಆಗಿದೆ? |
01 | 11,995 | 12,170 | 175 |
08 | 95,960 | 97,360 | 1,400 |
10 | 1,19,950 | 1,21,700 | 1,750 |
100 | 11,99,500 | 12,17,000 | 17,500 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ