/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಕಿಶನ್ ಶಿವತಾಂಡವ.. ಮನಸೋತ ಫ್ಯಾನ್ಸ್.. ವಾವ್ಹ್​ ಎನ್ನುವ ಫೋಟೋಗಳು..!
ಮೇಷ
- ಆಸ್ತಿಯ ವಿಚಾರಕ್ಕೆ ಚರ್ಚೆಯಾಗಬಹುದು
- ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗುವುದಿಲ್ಲ
- ಬಾಕಿ ಇರುವ ಕೆಲಸಗಳ ಬಗ್ಗೆ ಚಿಂತಿಸುವಿರಿ
- ನಿಮಗೆ ಪ್ರಿಯವಾದ ಚಿಂತೆಗಳಲ್ಲಿ ಕಾಲಕಳೆಯಬಹುದು
- ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೆ ಸಂಚು
- ದುಶ್ಚಟಗಳಿರುವವರು ದೂರವಿರಬೇಕು ತೊಂದರೆಯಾಗಬಹುದು
- ನರಸಿಂಹನ ಪ್ರಾರ್ಥನೆ ಮಾಡಿ
ವೃಷಭ
- ಇಂದು ಆತುರದ ತೀರ್ಮಾನ ಬೇಡ
- ನಿಮ್ಮ ಕೋಪ ಶಿಸ್ತು ನಿಮ್ಮ ಪರವಾಗಿರುತ್ತದೆ
- ಎಲ್ಲಾ ದೃಷ್ಟಿಯಿಂದ ನಿಮಗೆ ಅನುಕೂಲಕಂಡರೂ ಹಿನ್ನಡೆ ಇದೆ
- ಆಹಾರಕ್ಕಾಗಿ ನಿರೀಕ್ಷೆಯಲ್ಲಿದ್ದ ನಿಮಗೆ ತೊಂದರೆಯ ಸೂಚನೆ
- ಆರ್ಥಿಕವಾಗಿ ಸಮಸ್ಯೆಯಿಲ್ಲ ಇರುವುದಿಲ್ಲ
- ಭರವಸೆಯ ನಿರೀಕ್ಷೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
- ಈಶ್ವರಾರಾಧನೆ ಮಾಡಿ ಬಿಲ್ವ ಪಾತ್ರೆ ಸಮರ್ಪಿಸಿ
ಮಿಥುನ
- ಬೇರೆಯವರು ನಿಮ್ಮ ಕೆಲಸದಲ್ಲಿ ಸಹಾಯ ಮಾಡಬಹುದು.
- ಪ್ರೀತಿ ಪ್ರೇಮ ವಿಷಯಗಳಲ್ಲಿ ಹುಷಾರಾಗಿರಿ
- ನೀವು ಉಳಿಸಿದ ಹಣ ಸಕಾಲದಲ್ಲಿ ಉಪಯೋಗಕ್ಕೆ ಬಹಬಹುದು
- ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ಕೊಡುತ್ತದೆ
- ನಿಜವಾದ ಕಷ್ಟದ ಬಗ್ಗೆ ನಿಮಗೆ ಅರಿವಿರುವುದಿಲ್ಲ
- ಗೋವಿಗೆ ಅಕ್ಕಿ ಬೆಲ್ಲ ನೀಡಿ
ಕಟಕ
- ಬಯಸದೇ ಬಂದ ಭಾಗ್ಯ ನಿಮ್ಮದಾಗುತ್ತದೆ.
- ಅಸಮಾಧಾನ ಬೇಡ ನಿಮ್ಮ ಪಾಲಿಗಿರುವುನ್ನು ಅನುಭವಿಸಿ
- ಜೀವನ ಪೂರ್ತಿ ಬಂಧನ ಎಂದು ಭಾಸವಾಗುವ ದಿನ
- ತಾಳ್ಮೆಯಿರಲಿ ಕೋಪ ಮಾಡಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ
- ನಿಮ್ಮ ನಂಬಿಕೆ ಶ್ರದ್ಧೆ ನಿಮ್ಮನ್ನು ಕಾಪಾಡುತ್ತವೆ
- ಯಾವುದೇ ನೋವಿರಲಿ ಅದಕ್ಕೆ ಪರಿಹಾರ ಮಾರ್ಗ ಸಿಗಬಹುದು
- ಶ್ರೀರಾಮ ಪರಿವಾರ ದೇವರನ್ನು ಪೂಜಿಸಿ
ಸಿಂಹ
- ನಿಮ್ಮ ಎಲ್ಲಾ ಪ್ರಯತ್ನಗಳು ಇಂದು ವಿಫಲ ಆಗಬಹುದು
- ಅನಾರೋಗ್ಯ ಪೀಡಿತ ಬಂಧುಗಳ ಭೇಟಿ ಖರ್ಚು ಹೆಚ್ಚು
- ಹಣ ಉಳಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುತ್ತೀರಿ
- ಜೀವನದ ತೊಂದರೆಗಳನ್ನು ಹೇಳಿಕೊಂಡು ತಪ್ಪು ಮಾಡಬೇಡಿ
- ಸಣ್ಣ ವ್ಯಾಪಾರಿಗಳಿಗೆ ಧನಲಾಭ
- ನಿಮ್ಮ ಕೆಲಸ ಜವಾಬ್ದಾರಿಯ ಬಗ್ಗೆ ಬದ್ಧತೆ ಇರಲಿ
- ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ
ಕನ್ಯಾ
- ಲೆಕ್ಕ ಶಾಸ್ತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು
- ಆಸ್ಪತ್ರೆಗಾಗಿ ಹಣ ಖರ್ಚು ಮಾಡಬೇಕಾಗಬಹುದು
- ಅಧಿಕ ಖರ್ಚು ಹಣಸಂಗ್ರಹದ ಬಗ್ಗೆ ಆಲೋಚನೆ
- ಹೊಸ ಯೋಜನೆಗಳು ಸಾಕಾರವಾಗಬಹುದು
- ನಿಮ್ಮ ಯೋಜನೆಗೆ ತಕ್ಕ ವ್ಯಕ್ತಿಗಳ ಪರಿಚಯ ಸಹಾಯ ಸಿಗುತ್ತದೆ
- ಹಳೆಯ ಬಾಕಿ ಹಣ ನಿಮ್ಮ ಕೈ ಸೇರಬಹುದು
- ಕಾಲ ಭೈರವ ಮಂತ್ರ ಪಠಿಸಿ
ತುಲಾ
- ಮಕ್ಕಳ ಬಗ್ಗೆ ಚಿಂತೆ ಮಾಡಿ, ಅವರಿಗೆ ಸರಿಯಾಗಿ ತಿಳುವಳಿಕೆ ನೀಡಿ
- ಹಳೆಯ ನೋವಿನಿಂದ ಬಳಲುತ್ತೀರಿ
- ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಬಗ್ಗೆ ಚಿಂತಿಸಿ
- ನಿಮ್ಮ ಸಂದೇಶ ಮನೆ ಮಕ್ಕಳಿಗೆ ದಾರಿದೀಪವಾಗಬೇಕು
- ವಿಶ್ರಾಂತಿಯಿರುತ್ತದೆ ಮನಸ್ಸು ಮಾತ್ರ ಸಮಾಧಾನದಲ್ಲಿರುವುದಿಲ್ಲ
- ಕೆಲಸ ಕಾರ್ಯಗಳು ನಿಮಗೆ ಯಾವುದೇ ರೀತಿಯ ಸಮಾಧಾನ ಕೊಡುವುದಿಲ್ಲ
- ಮೃತ್ಯುಂಜಯನ ಪ್ರಾರ್ಥನೆ ಮಾಡಿ
ವೃಶ್ಚಿಕ
- ಅನಗತ್ಯ ವಿಚಾರಗಳೇ ಹೆಚ್ಚು ಪ್ರಸ್ತಾಪವಾಗುವ ದಿನ
- ಮಧ್ಯಾಹ್ನದ ನಂತರ ಹಣಕಾಸಿನ ವಿಚಾರದಲ್ಲಿ ಅನುಕೂಲ
- ಕಠಿಣ ನಿರ್ಧಾರಗಳು ಬೇಡ
- ಬೇರೆಯವರ ವಿಶ್ವಾಸ ಬೆಂಬಲ ಸಿಗುತ್ತದೆ
- ಪ್ರೇಮಿಗಳಿಗೆ ತಿರುವು ಪಡೆಯುವಂತಹ ದಿನ
- ಸಾಯಂಕಾಲ ಬಂಧುಗಳ ಹಾಗೂ ಸ್ನೇಹಿತರ ಸಮಮಾಗಮವಾಗಬಹುದು
- ಆಂಜನೇಯನ ಪ್ರಾರ್ಥನೆ ಮಾಡಿ
ಧನುಸ್ಸು
- ಆರೋಗ್ಯದಲ್ಲಿ ಸಮಾಧಾನಕೊಡಬಹುದು
- ದೀರ್ಘಕಾಲದ ಆಲೋಚನೆಗಳಿಂದ ಮನಸ್ಸಿಗೆ ಅನುಕೂಲ
- ಸ್ನೇಹಿತರ ಮಿಲನದಿಂದ ನಿಮ್ಮ ಕೆಲಸಕ್ಕೆ ಅನುಕೂಲ
- ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಡಿ
- ವೃತ್ತಿಯಲ್ಲಿ ಹಿನ್ನಡೆಯಾಗಬಹುದು ಲಾಭವಿಲ್ಲ
- ಪ್ರಯಾಣ ಪ್ರವಾಸದ ಯೋಜನೆ ಹಾಕಬಹುದು
- ಲಕ್ಷ್ಮೀಮಂತ್ರ ಪಠಿಸಿ
ಮಕರ
- ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ತಾಯಿ- ತಂದೆಯರ ದುಃಖ ಕಾರಣವಾಗಬಹುದು
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಹಣದ ಅಡಚಣೆಯೇ ಎಲ್ಲಾ ವಿಚಾರದಲ್ಲಿ ಕಾರಣವಾಗಬಹುದು
- ಭೂ ಸಂಬಂಧಿ ವ್ಯವಹಾರಗಳಿಂದ ನಷ್ಟ ಕಾಣಬಹುದು
- ಮನಸ್ಸಿನಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು
- ಭೂ ವರಾಹನನ್ನು ಅರ್ಚಿಸಿ
ಕುಂಭ
- ಪ್ರವಾಸ ಕುರಿತು ಮಾನಸಿಕ ಉಲ್ಲಾಸ
- ಉತ್ತಮ ವಾತಾವರಣ ಇರಲಿದೆ
- ನೀವಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ
- ಜೀವನದ ಅನುಭವ ನಿಮ್ಮನ್ನು ಪರಿವರ್ತಿಸಬಹುದು
- ನಿಮಗೆ ಹಳೆಯ ನೆನಪುಗಳು ಸಂತೋಷಕೊಡಬಹುದು
- ದಾಂಪತ್ಯ ಜೀವನಲ್ಲಿ ಸುಖ ಸಂತೋಷ ಇರಲಿದೆ
- ಗಣಪತಿಯ ಅನುಗ್ರಹ ಪಡೆಯಿರಿ
ಮೀನ
- ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತೀರಿ
- ಪ್ರೇಮಿಗಳಿಗೆ ಗೊಂದಲದ ದಿನ
- ಮಾನಸಿಕ ಶಾಂತಿಗಾಗಿ ದುಡಿದ ಹಣ ಸ್ವಲ್ಪ ಖರ್ಚು ಮಾಡಿ
- ಆತ್ಮವಿಶ್ವಾಸದೊಂದಿಗೆ ಎಲ್ಲಾ ಕೆಲಸಗಳನ್ನು ಪ್ರಾರಂಭಿಸಿ ಶುಭವಿದೆ
- ಬೇರೆಯವರ ಸಹಾಯದಿಂದ ನಿಮಗೆ ತೃಪ್ತಿ ಸಿಗಬಹುದು
- ಹೊಸ ಸ್ನೇಹಿತರನ್ನು ಜನರನ್ನು ಆಕರ್ಷಿಸುತ್ತೀರಿ
- ಕುಲದೇವತಾ ಆರಾಧಾನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us