Advertisment

ಈ ರಾಶಿಯವರಿಗೆ ಕಾದಿದೆ ಅಚ್ಚರಿ.. ಯಾರಿಗೆ ಶುಭ, ಅಶುಭ?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಶುಕ್ಲಪಕ್ಷ, ಸಪ್ತಮಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ‘ಹೈಕಮಾಂಡ್ ಒಪ್ಪಿದ್ರೆ ನಾನೇ..’ CM ಹೇಳಿಕೆಗೆ ಡಿಕೆಶಿ ರಿಯಾಕ್ಷನ್ ಏನು ಗೊತ್ತಾ..?

ಮೇಷ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಮಕ್ಕಳ ಜೊತೆಯಲ್ಲಿ ಸಂತೋಷವಾಗಿರುತ್ತೀರಿ
ಆತುರದ ನಿರ್ಧಾರದಿಂದ ಕೆಲಸದಲ್ಲಿ ವ್ಯತ್ಯಯ ಆಗಬಹುದು
ಯಾರ ಜೊತೆಯಾದರೂ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ
ಮನೆಯವರಿಗೆ ಅಚ್ಚರಿ ನೀಡುವ ವಿಷಯ ಬರಬಹುದು 
ಉನ್ನತ ಶಿಕ್ಷಣ ಗಂಭೀರ ವಿಚಾರವಾಗಬಹುದು
ಪ್ರವಾಸದ ಬಗ್ಗೆ ಮಾತುಕತೆ ನಡೆಯಬಹುದು
ಶಾರದಾ ಪರಮೇಶ್ವರಿಯನ್ನು ಆರಾಧಿಸಿ 

ವೃಷಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

ರಹಸ್ಯ ಶತ್ರುಗಳು ನಿಮ್ಮ ವಿರುದ್ಧವಾಗಿರುತ್ತಾರೆ ಎಚ್ಚರ
ಶಾಂತಿ ತಾಳ್ಮೆಯು ನಿಮಗೆ ಸಹಕರಿಸುತ್ತದೆ
ಮನೆಯವರ ಸಲಹೆ ಮುಖ್ಯವಾಗಿರುತ್ತದೆ
ಜಮೀನಿಗೆ ಸಂಬಂಧಿಸಿದ ಚರ್ಚೆಯಾಗಬಹುದು
ಆರೋಗ್ಯದ ಕಡೆ ಸ್ವಲ್ಪ ಹೆಚ್ಚಾಗಿ ಗಮನ ಹರಿಸಿ
ಆತ್ಮಾವಲೋಕನದ ದಿನ ತಪ್ಪಿಗೆ ಪ್ರಾಯಶ್ಚಿತ್ತದ ಚಿಂತನೆ
ನರಸಿಂಹ ಕರಾವಲಂಬನ ಸ್ತೋತ್ರ ಪಠಿಸಿ

Advertisment

ಮಿಥುನ 

RASHI_BHAVISHA_MITHUNA

ವಿಶ್ರಾಂತಿಯಿಲ್ಲದೆಯೇ ದುಡಿಮೆಯ ಚಿಂತನೆ
ದೈನಂದಿನ ಕಾರ್ಯಗಳಿಗೆ ಮಹತ್ವ ನೀಡುವಿರಿ
ಧಾರ್ಮಿಕ ಚಿಂತೆಗಳಿಂದ ನಿಮ್ಮ ತಪ್ಪಿನ ಅರಿವಾಗಬಹುದು
ಮಾತಿನಿಂದ ಬೇರೆಯವರನ್ನು ಕಟ್ಟಿ ಹಾಕಬೇಡಿ
ಮನೆಯಲ್ಲಿ ಶುಭ ಕಾರ್ಯಕ್ರಮಗಳ ಬಗ್ಗೆ ಚರ್ಚೆ
ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭಗಳಿಸುವ ಸಾಧ್ಯತೆ
ವೃದ್ಧರಿಗೆ ವಸ್ತ್ರ, ಧನ, ಭೋಜನ ಸಹಾಯ ಮಾಡಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಸಾಯಂಕಾಲದ ಹೊತ್ತಿಗೆ ಸ್ವಲ್ಪ ಅಸ್ವಸ್ಥತೆ ಆಗಬಹುದು
ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುಕೊಳ್ಳಬೇಡಿ
ಯಾರ ಜೊತೆಗೂ ಜಗಳ - ಮನಸ್ತಾಪ ಬೇಡ
ಸ್ವಚ್ಫತೆಗೆ  ತುಂಬಾನೆ ಆದ್ಯತೆ ನೀಡಿ
ಯಾವುದೇ ಬಾಕಿ ಕೆಲಸಗಳನ್ನು ಇಂದು ಪೂರ್ಣಮಾಡಿ
ದುರ್ಗಾರಾಧನೆ ಮಾಡಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಸಾಲದ ಹಣ ಪಡೆದು ಹೊಸ ಯೋಜನೆ ಮಾಡಿ ಶುಭವಿದೆ
ಮನೆಯಲ್ಲಿ ಸಂತೋಷ ನೆಲೆಸಿರಲಿದೆ
ಎಲ್ಲೋ ಕೇಳಿದ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ
ಹಿರಿಯರ ಹೆಸರು ಹೇಳಿ ಗೌರವ ಸಂಪಾದಿಸುತ್ತೀರಿ
ವ್ಯಾವಹಾರಿಕವಾಗಿ ಹಣ ಸಂಪಾದನೆ ಮಾಡುವಿರಿ
ವೃತ್ತಿ , ನೌಕರಿಯಲ್ಲಿ  ನಿಮ್ಮ ಪ್ರಭಾವ ಹೆಚ್ಚು ಬೀರಲಿದೆ
ಸುಬ್ರಹ್ಮಣ್ಯನನ್ನು ಆರಾಧಿಸಿ

Advertisment

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ವೈವಾಹಿಕ ಜೀವನದಲ್ಲಿ ಅತೃಪ್ತಿ ಹೊಂದಬಹುದು
ಸರ್ಕಾರಿ ಸಮಸ್ಯೆಗಳು ಎದುರಾಗಬಹುದು
ಸಾಲದ ವಿಚಾರಕ್ಕೆ ಹೋಗಬೇಡಿ
ಮಕ್ಕಳಿಂದ ನಿಮ್ಮ ಆರೈಕೆ, ಸಂತೋಷ ಸಿಗಲಿದೆ
ಇದು ತುಂಬಾ ದೇಹ ಶ್ರಮದ ದಿನವಾಗಲಿದೆ 
ಹೊಸ ವ್ಯವಹಾರ ಮಾಡುವುದನ್ನು ತಪ್ಪಿಸಿ
ಲಕ್ಷ್ಮೀನಾರಾಯಣ ಸ್ವಾಮಿ ಪಾರಾಯಣ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಏಕಾಂಗಿತನ ಹೆಚ್ಚಾಗಿ ಕಾಡಬಹುದು
ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ, ಹೆಚ್ಚಿನ ದುಃಖವಾಗಲಿದೆ
ವ್ಯಾಪಾರ, ವ್ಯವಹಾರ ಸಮಸ್ಯೆ ಬೇರೆಯವರಿಗೆ ಹೇಳಬೇಡಿ
ಕುಟುಂಬ ಸದಸ್ಯರ ಜೊತೆಗೆ ವೈಮನಸ್ಸು ಬೇಡ
ನಿಮ್ಮ ಚಟುವಟಿಕೆಯ ಸಲುವಾಗಿ ಅಪಾಯವಿದೆ
ಪ್ರತ್ಯಂಗಿರಾ ದೇವಿಯನ್ನು ಪೂಜಿಸಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಹಣದ ಲಾಭ ಹೆಸರು ಎಲ್ಲವೂ ನಿಮ್ಮದಾಗುತ್ತದೆ
ತಾಳ್ಮೆಯಿಂದ ಕೆಲಸ ಮಾಡಿದರೆ ಜನರ ಮೆಚ್ಚುಗೆ ಸಿಗಲಿದೆ
ಕುಟುಂಬದವರ ಸಹಕಾರ ಕೆಲಸ ಮಾಡುತ್ತದೆ
ರಾಜಕಾರಣಿಗಳಿಂದ ಅನುಕೂಲವಾಗುವ ಸಾಧ್ಯತೆ
ಜವಾಬ್ದಾರಿ ಹೊತ್ತ ಕೆಲಸಗಳಲ್ಲಿ ಯಶಸ್ಸು, ಪ್ರಯಾಸವಾಗಲಿದೆ
ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
ಗಣಪತಿಗೆ ಗರಿಕೆ ಅರ್ಪಿಸಿ

Advertisment

ಧನುಸ್​ 

RASHI_BHAVISHA_DHANASU

ಹಣ ಹೂಡಿಕೆಗೆ ಬೇರೆಯವರು ಹೇಳಿದರೂ ಹಿಂಜರಿಯುವಿರಿ
ಮಕ್ಕಳ ಹಣ ಹೂಡಿಕೆಯು ವ್ಯಯವಾಗಲಿದೆ 
ಒತ್ತಡ ದೂರ ಮಾಡಿಕೊಳ್ಳಿ ವಿಶ್ರಾಂತಿಯ ಅಗತ್ಯ
ತುಂಬಾ ಕೆಲಸದ ಒತ್ತಡ ಸ್ವಲ್ಪ ಆದಾಯ ಸಿಗಲಿದೆ
ಮನೆಯವರಿಗೆ ಸಂತೋಷ, ತೃಪ್ತಿ ಸಿಗುತ್ತದೆ
ಕಮೀಷನ್​ ಏಜೆಂಟ್​​ಗಳಿಗೆ ಲಾಭವಿದೆ
ಶಿವಾರಾಧನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಉದ್ಯೋಗದಲ್ಲಿ ಹಣ ಕಡಿಮೆಯಾಗಬಹುದು
ಹಣದ ವಿಚಾರಕ್ಕೆ ಜಗಳ ಸಾಧ್ಯತೆ ಸಾಲ ಬಡ್ಡಿ ವ್ಯವಹಾರ ಬೇಡ
ನಕಲಿ ಖರೀದಿಯಿಂದ ಮೋಸ ಹೋಗುವ ಸಾಧ್ಯತೆ
ಉಚಿತ ಸಮಯವನ್ನು ಅಧ್ಯಯನ ಮಾಡಲು ಮೀಸಲಿಡಿ
ಅನಾವಶ್ಯಕ ಪ್ರಯಾಣ ಮಾಡಬಾರದು 
ಬೇರೆಯವರ ಕೆಲಸದ ಜವಾಬ್ದಾರಿ ಹೊತ್ತುಕೊಳ್ಳಬೇಡಿ
ಗಣಪತಿ ಅಷ್ಟೋತ್ತರ ಶತನಾಮ ಪಠಿಸಿ

ಕುಂಭ 

RASHI_BHAVISHA_KUMBHA

ಕೆಲಸ ಹುಡುಕುತ್ತಿರುವವರಿಗೆ ಸಿಹಿಸುದ್ದಿ ದೊರೆಯಲಿದೆ
ವ್ಯಾಪಾರಿಗಳಿಗೆ ಅಲ್ಪ ಲಾಭ ನಷ್ಟದ ಭಯ ದೂರ
ಪತಿ-ಪತ್ನಿಯರ ನಡುವೆ ಜಗಳ ಸಂಭವಿಸಬಹುದು
ನಿಮ್ಮ ಕೆಲಸಕ್ಕೆ ಸ್ನೇಹಿತರ ಸಹಾಯ ದೊರಕಲಿದೆ
ಅಧಿಕಾರಿ ವರ್ಗದಿಂದ ಮೆಚ್ಚುಗೆಗಳಿಸುವ ಸಾಧ್ಯತೆ 
ಸರ್ಕಾರಿ ಕೆಲಸಗಳ ತೊಂದರೆ ನಿವಾರಣೆಯಾಗಲಿದೆ 
ವಿಷ್ಣು ಸಹಸ್ರನಾಮ ಪಠಿಸಿ

Advertisment

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಕಲಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ದೊರೆಯಲಿದೆ
ಪ್ರತಿಭೆ ಇರುವವರಿಗೆ ಅವಕಾಶಗಳು ಹೆಚ್ಚಾಗಿ ಸಿಗಲಿದೆ
ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ
ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ಮಾಡಬಹುದು
ಅಣ್ಣ ತಮ್ಮಂದಿರು-ಬಂಧುಗಳು ಸೌಹಾರ್ದಯುತರಾಗಿರುತ್ತಾರೆ
ಅನುಭವಿಗಳ ಜೊತೆಯಲ್ಲಿ ಕೆಲವು ವಿಚಾರ ಚರ್ಚಿಸಬಹುದು
ಮನೆದೇವರನ್ನು ಆರಾಧಿಸಿ

ಇದನ್ನೂ ಓದಿ: ವ್ಯಕ್ತಿಯೊಬ್ಬರಿಂದ ದೀಪಾವಳಿಗೆ 1.5 ಕೆಜಿ ಗೋಲ್ಡ್ ಖರೀದಿ! ವಿಡಿಯೋದ ಅಂತ್ಯದಲ್ಲಿ ಯಾವ ಗೋಲ್ಡ್ ಎಂಬ ಸತ್ಯ ಬಹಿರಂಗ !!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment