Advertisment

ಮನಸ್ಸು ವಿಚಲಿತ, ಮನೆಯಲ್ಲಿ ಅಶಾಂತಿ ವಾತಾವರಣ: ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಪ್ರತಿಪತ್ (ಪಾಡ್ಯ) ತಿಥಿ, ಆಶ್ಲೇಷಾ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿ: ಕೃಷಿ ಸಚಿವ N.ಚಲುವರಾಯಸ್ವಾಮಿ

ಮೇಷ

  • ಅನೇಕ ರೀತಿಯಲ್ಲಿ ಮನಸ್ಸು ವಿಚಲಿತವಾಗಬಹುದು
  • ಮನೆಯಲ್ಲಿ ಅಶಾಂತಿ ವಾತಾವರಣ
  • ಮಕ್ಕಳಿಂದ ಸಂತೋಷ ಸಿಗಲಿದೆ
  • ಸ್ವಂತ ಭೂಮಿಯ ವಿಚಾರದ ಮಾತು - ರಕ್ಷಣೆಯ ವಿಚಾರ
  • ಹಣವಿರುತ್ತದೆ ಅನುಭವಿಸುವ ಯೋಗ ಕಡಿಮೆ
  • ಇಂದು ಆಶ್ಚರ್ಯ ಹುಟ್ಟಿಸುವಂತೆ ಸೌಮ್ಯವಾಗಿರುತ್ತೀರಿ
  • ವಿಘ್ನೇಶ್ವರನನ್ನು ಪ್ರಾರ್ಥಿಸಿ

ವೃಷಭ

  • ಅನುಕೂಲವಿದ್ದಾಗ ಖುಷಿಪಡಿ  ಯೋಚಿಸಬೇಡಿ
  • ಆದಾಯಕ್ಕಿಂತ ಖರ್ಚು ಹೆಚ್ಚು
  • ವೃತ್ತಿಯಲ್ಲಿ ಅಧಿಕಾರಿಗಳಿಂದ ಸಲಹೆ  ಸೂಚನೆ  ಬೇಸರ
  • ಮನೆಯವರ ಸಲಹೆ ಇಷ್ಟವಾಗುವುದಿಲ್ಲ
  • ದೈವಭಕ್ತಿಯಿರಲಿ ಶುಭವಿದೆ  ಸಂಕಟದಿಂದ ಪಾರಾಗುವಿರಿ
  • ಅನುಚಿತ ಕೆಲಸಗಳ ವಿಚಾರ ಮಾಡಬೇಡಿ
  • ಗಾಯತ್ರೀ ಮಂತ್ರ ಶ್ರವಣ ಮಾಡಿ
Advertisment

ಮಿಥುನ

  • ವಿದ್ಯಾರ್ಥಿಗಳಿಗೆ ಅಡಚಣೆ  ಬೇಸರ ಉಂಟಾಗಬಹುದು
  • ದಾಂಪತ್ಯ ವಿಚಾರ ಏರಿಳಿತಗಳಿಂದ ಕೂಡಿರುತ್ತದೆ
  • ವೃತ್ತಿಪರರಿಗೆ ಅನುಕೂಲ
  • ಹೆಂಗಸರಿಗೆ ಹೊಟ್ಟೆಗೆ ಸಂಬಂಧಿಸಿದ ತೊಂದರೆ ಆಗಬಹುದು
  • ಬಂಧುಗಳ ನೆರವು  ಉತ್ತಮ ಸಹಕಾರ
  • ಎದುರಾಳಿಗಳಿಗೆ ಹೆದರಿಕೆ
  • ಧನ್ವಂತರಿಯನ್ನು ಆರಾಧಿಸಿ

ಕಟಕ

  • ವಿವಾಹ ವಿಚಾರ  ಸಂತೋಷ
  • ಉದ್ಯೋಗದಲ್ಲಿ ಬಡ್ತಿ ಅವಕಾಶ  ಹೊಸಬರಿಗೆ ಆದ್ಯತೆ
  • ಮನಸ್ಸಿನ ಅನುಮಾನಗಳು ಕೆಲವು ನಿಜವಾಗಬಹುದು
  • ಕೆಲಸಗಳನ್ನು ಏಕಾಗ್ರಚಿತ್ತದಿಂದ ಮಾಡಿ
  • ಸಭ್ಯ ನಡವಳಿಕೆ ಬೇರೆಯವರಿಗೆ ಇಷ್ಟ  ಮನೆಯವರಿಗೆ ಕಷ್ಟ
  • ಖಾಸಗಿ ಕ್ಷೇತ್ರದವರಿಗೆ ಸಿಹಿ ಸುದ್ದಿ 
  • ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥಿಸಿ

ಸಿಂಹ

  • ಜನರು ನಿಮ್ಮಿಂದ ನಿರೀಕ್ಷೆ ಇಟ್ಟುಕೊಂಡು ನಿರಾಶೆ ಹೊಂದಬಹುದು
  • ಕೆಲಸದಲ್ಲಿ ಬಡ್ತಿ ಸಿಗಲಿದೆ
  • ವೃತ್ತಿ ಜೀವನದಲ್ಲಿ ಎಡವಟ್ಟು  ಅಪಮಾನದ ಭಯ
  • ವೈವಾಹಿಕ ಜೀವನ ಉತ್ತಮ  ಹೊಂದಾಣಿಕೆ ಇರಲಿ
  • ನ್ಯಾಯಾಲಯದ ವಿಚಾರಗಳಿಗೆ ತಿರುವು  ಸಂತೋಷ
  • ನಿಮ್ಮ ಸ್ವಭಾವದಿಂದ ಸಂಬಂಧಿಕರಿಗೆ ಸಂತೋಷ
  • ಶ್ರೀರಾಮನನ್ನು ಪ್ರಾರ್ಥಿಸಿ
Advertisment

ಕನ್ಯಾ

  • ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿ  ನೆಮ್ಮದಿಯಿದೆ
  • ಬಂಧುಗಳಿಂದ ಉತ್ತಮ ಸುದ್ದಿ
  • ಷೇರು ಪೇಟೆಯಲ್ಲಿ ಗಣನೀಯ ಲಾಭ
  • ಹಳೆಯ ಸಮಸ್ಯೆಗಳಿಂದ  ಅಶಾಂತಿ ವಾತಾವರಣ
  • ಯಂತ್ರಗಳಿಂದ ತೊಂದರೆಯಾಗಬಹುದು
  • ಕುಟುಂಬದವರ ಸಹಕಾರವಿರುವುದಿಲ್ಲ
  • ಯೋಗಾನರಸಿಂಹನನ್ನು ಪ್ರಾರ್ಥಿಸಿ

ತುಲಾ

  • ಯಾವ ಕಾರ್ಯಕ್ಕೂ ಉತ್ಸಾಹವಿಲ್ಲ
  • ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತೀರಿ
  • ಗಂಡ  ಹೆಂಡತಿಯ ಜಗಳ ಮಕ್ಕಳಿಗೆ ಆಘಾತವಾಗಬಹುದು
  • ದುಶ್ಚಟಗಳಿರುವವರು ದೈಹಿಕ ತೊಂದರೆಗೆ ಈಡಾಗಬಹುದು
  • ದಾಂಪತ್ಯ ಕಲಹ  ಅನುಮಾನದ ಮಾತು
  • ಅನುಭವಿಗಳ ಮಾತು ನಿಮಗೆ ಪಥ್ಯ
  • ಕುಲದೇವತೆಯನ್ನು ಸರಿಯಾಗಿ ಆರಾಧಿಸಿ

ವೃಶ್ಚಿಕ

  • ನಿಮ್ಮ ವೃತ್ತಿಯಲ್ಲಿ ತಂತ್ರಗಾರಿಕೆ ಬಳಸಿ ಯಶಸ್ವಿಗಳಾಗುತ್ತೀರಿ  
  • ಕಾರ್ಯಚಟುವಟಿಕೆಗಳಲ್ಲಿ ಅರ್ಥಪೂರ್ಣ ಬದಲಾವಣೆ
  • ತಾಯಿಯನ್ನು ಗೌರವಿಸಿ ಬೆಲೆ ಕೊಡಿ
  • ವ್ಯವಹಾರದಲ್ಲಿ ಹಿಂದಿನ ಶ್ರಮ ಇಂದಿನ ಲಾಭ
  • ಹಣದ ಸಮಸ್ಯೆಗಳು ಬಗೆಹರಿಯುತ್ತದೆ
  • ಸ್ನೇಹಿತರ ಬಂಧುಗಳ ಮಾತಿನಿಂದ ಪ್ರಭಾವಿತರಾಗುತ್ತೀರಿ
  • ಲಲಿತಾ ಪರಮೇಶ್ವರಿಯ ಪ್ರಾರ್ಥನೆ ಮಾಡಿ
Advertisment

ಧನಸ್ಸು

  • ಪತಿ ಪತ್ನಿಯರ ಕಲಹಕ್ಕೆ ಈ ದಿನ ಔಷಧಿಯಿಲ್ಲ
  • ಮಕ್ಕಳನ್ನು ನಿರ್ಲಕ್ಷಿಸಬಾರದು
  • ಕುಟುಂಬ ಸಮಸ್ಯೆಗಳು ಹೆಚ್ಚಾಗಬಹುದು
  • ರಾಜಕೀಯ ಸಂಪರ್ಕದಿಂದ ಲಾಭ
  • ದೇಹಾಲಸ್ಯ ಮನಸ್ಸಿಗೆ ನೆಮ್ಮದಿಯಿರುವುದಿಲ್ಲ
  • ವ್ಯವಹಾರದಲ್ಲಿ ಸಹಭಾಗಿತ್ವದಿಂದ ಲಾಭವಿದೆ
  • ಗಣಪತಿಯನ್ನು 21 ಗರಿಕೆಯಿಂದ ಪೂಜಿಸಿ

ಮಕರ

  • ಮಧುಮೇಹಿಗಳಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
  • ವಿದೇಶ ಪ್ರಯಾಣ ಪ್ರವಾಸಕ್ಕೆ ಅನುಕೂಲವಿದೆ
  • ಬೇರೆಯವರನ್ನು ಗೌರವಿಸಿ ಲಾಭವಿದೆ
  • ಆತ್ಮೀಯರೊಂದಿಗೆ ವೈಮನಸ್ಯ ಉಂಟಾಗುತ್ತದೆ
  • ಸರಿಯಾದ ದಿನಚರಿಯನ್ನು ಆಯೋಜಿಸಿಕೊಳ್ಳಿ
  • ಬಹುನಿರೀಕ್ಷಿತ ಕೆಲಸದ ವಿಳಂಬ ಅಗಬಹುದು
  • ವಿಷ್ಣುತ್ರಯೀ ಮಂತ್ರ ಜಪ ಮಾಡಿ

ಕುಂಭ

  • ಕುಟುಂಬದ ಶಾಂತಿ ಕಾಪಾಡಿ
  • ಅಂದು ಕೊಂಡ ಕಾರ್ಯ ಕೈಗೂಡುವುದರಿಂದ ಉತ್ಸಾಹ
  • ಸಮಾಜದ ಜನಪ್ರಿಯತೆಯ ಹಿಂದೆ ಹೋಗಬೇಡಿ
  • ಹೊಸ ಹೊಸ ಅವಕಾಶಗಳು ಹೊರೆಯಲಿವೆ
  • ಪ್ರತಿಷ್ಠೆ ಗೌರವ ಹೆಚ್ಚಾಗಲಿದೆ
  • ಮರಗೆಲಸ ಮಾಡುವವರಿಗೆ ಅನುಕೂಲ
  • ಇಷ್ಟದೇವತಾ ಪೂಜೆ ಮಾಡಿ
Advertisment

ಮೀನ

  • ವಿದ್ಯಾರ್ಥಿಗಳಿಗೆ ಸಾಧನೆಗೆ ಉತ್ತಮ ವಾತಾವರಣ
  • ಮಕ್ಕಳ ಶಿಕ್ಷಣದ ಕುರಿತು ಚಿಂತೆ ಬೇಡ  ಶುಭವಿದೆ
  • ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ  ಗೌರವ
  • ಅಲ್ಪ ಪ್ರಯತ್ನದಿಂದ ದೊಡ್ಡ ಕೆಲಸಗಳಾಗಬಹುದು
  • ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಕಾಲ  ಪ್ರಯತ್ನಿಸಿ
  • ಹೊಸ ಆಸ್ತಿ ಆದಾಯ ನಿಮ್ಮದಾಗಬಹುದು
  • ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಇದನ್ನೂ ಓದಿ: ಮೆಗಾ ಕುಟುಂಬಕ್ಕೆ ಸಂಭ್ರಮದ ಹಬ್ಬ: ರಾಮ್ ಚರಣ್-ಉಪಾಸನ ದಂಪತಿಗೆ ಅವಳಿ ಮಕ್ಕಳ ಜನನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya
Advertisment
Advertisment
Advertisment