/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ವಿಧಾನಸೌಧದ ಟೆರರಿಸ್ಟ್​ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲವಲ್ಲ? -HDK ಶಾಕಿಂಗ್ ಹೇಳಿಕೆ
ಮೇಷ:
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿನ ವಿದ್ಯುತ್ ಉಪಕರಣಗಳಿಂದ ಹಾನಿ ಸಾಧ್ಯತೆ
- ಮಕ್ಕಳ ವಿಚಾರಕ್ಕೆ ಮನೆಯಲ್ಲಿ ಮನಸ್ತಾಪ ಆಗಬಹುದು
- ಇಂದು ಕೆಲಸದ ಒತ್ತಡ ಹೆಚ್ಚು, ಸುಳ್ಳು ಹೇಳಬೇಡಿ
- ಹಣ ಅಥವಾ ಪದಾರ್ಥ ನಷ್ಟವಾಗುವ ಸಾಧ್ಯತೆ ಇರುತ್ತದೆ
- ಇಂದು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಬೇಡ
- ಧ್ಯಾನ ಮಾಡುತ್ತಿರುವ ಋಷಿಗಳನ್ನು ಸ್ಮರಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ
- ನಿಮ್ಮ ಕೀರ್ತಿ ಹೆಚ್ಚಾಗುತ್ತದೆ, ಇದರಿಂದ ಬೀಗುತ್ತೀರಿ
- ವಿದ್ಯಾರ್ಥಿಗಳಿಗೆ ಈ ದಿನ ಶಹಬ್ಬಾಸ್​ಗಿರಿ ಸಿಗುತ್ತದೆ
- ಇಂದು ವಿರೋಧಿಗಳು ನಿಮ್ಮೆದುರು ಸೋಲುತ್ತಾರೆ
- ಹೊಗಳಿಕೆಯಿಂದ ಧನಾತ್ಮಕ ಶಕ್ತಿ ನಿಮಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಹಠದಿಂದ ಜನರು ದೂರ ಉಳಿಯುತ್ತಾರೆ
- ಕೌಟುಂಬಿಕ ಜೀವನದಲ್ಲಿ ಒತ್ತಡ ಮಾನಸಿಕ ಸೌಖ್ಯವಿರುವುದಿಲ್ಲ
- ಹಣದ ವಿಚಾರವಾಗಿ ಕುಟುಂಬದವರ ಸ್ನೇಹಿತರ ಜೊತೆ ಮನಸ್ತಾಪ ಸಾಧ್ಯತೆ
- ಬೇರೆಯವರ ಸಹಾಯ ನಿಮಗೆ ಬೇಕಿದ್ದರೂ ಹತ್ತಿರ ಬರುವುದಿಲ್ಲ
- ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಿ
- ಸುದರ್ಶನನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದುಕೊಡಲಿದೆ
- ನಿಗೂಢವಾದ ವಿಜ್ಞಾನ ಸಂಶೋಧನೆ ವಿಷಯಗಳ ಕಡೆ ಆಸಕ್ತಿ ತೋರುತ್ತೀರಿ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗಲಿದೆ
- ಮರಗೆಲಸ ಮಾಡುವವರಿಗೆ ಲಾಭದ ದಿನ
- ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪ್ರಗತಿ ಕಾಣುತ್ತೀರಿ
- ಮಾರುತಿಯನ್ನು ಸ್ಮರಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಮುಖ ನಿರ್ಧಾರಗಳಿಗೆ ಪ್ರೀತಿ ಪಾತ್ರರ ಸಲಹೆ ಮುಖ್ಯ
- ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ದಿನ
- ನಿಮ್ಮ ಕೆಲಸದ ರೀತಿ ಶೈಲಿ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ
- ಮನೆಯವರ ಸ್ನೇಹಿತರ ನಿರೀಕ್ಷೆ ಹುಸಿ ಮಾಡಬೇಡಿ
- ಒಂದೇ ಬಾರಿಗೆ ಹಲವು ಕೆಲಸ ಅಥವಾ ವಿಚಾರ ಬೇಡ
- ಗೊಂದಲದಿಂದ ಆಗಬೇಕಿದ್ದ ಕೆಲಸ ಅರ್ಧಕ್ಕೆ ನಿಲ್ಲಬಹುದು
- ಲಕ್ಷ್ಮೀ ಆರಾಧನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಮತ್ತು ನೌಕರರಿಗೆ ಸ್ಪರ್ಧಾತ್ಮಕ ಇಲಾಖಾ ಪರೀಕ್ಷೆಗಳಲ್ಲಿ ಯಶಸ್ಸು
- ವ್ಯವಹಾರ ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ
- ದೇವರ ಧ್ಯಾನ ಪೂಜಾದಿಗಳಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ
- ಕೆಲಸದ ಒತ್ತಡ ಕಡಿಮೆ ಮಾನಸಿಕ ಸಂತೋಷ ಹೆಚ್ಚು
- ವೈವಾಹಿಕ ಜೀವನವು ಮಧುರವಾಗಿರುತ್ತದೆ
- ಉತ್ತಮ ಪದವೀಧರರ ಸಂಪರ್ಕ ಸಿಗುತ್ತದೆ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕುಟುಂಬದಲ್ಲಿ ಸಾಮರಸ್ಯದ ಕೊರತೆ ಉಂಟಾಗಬಹುದು
- ಮನೆಯಲ್ಲಿ ಬೇಸರವಾಗಿ ಹೊರಗೆ ಹೋಗಬಹುದು
- ವಾದ-ವಿವಾದಗಳಿಂದ ಸತಿ-ಪತಿಗಳಲ್ಲಿ ಬಿರುಕು ಸಾಧ್ಯತೆ
- ಹೆಂಗಸರು ತವರು ಮನೆ ಅಥವಾ ಸಂಬಂಧಿಕರ ಮನೆಗೆ ಹೋಗಬಹುದು
- ಚಿಕ್ಕಮಕ್ಕಳಿಗೆ ಅಲರ್ಜಿ ಅಥವಾ ಕಫದಿಂದ ಕಿರಿಕಿರಿ ಸಾಧ್ಯತೆ
- ಜನ ನಿಮ್ಮ ಬೆನ್ನ ಹಿಂದೆ ಟೀಕಿಸುವ ಪ್ರಸಂಗಗಳು ಹೆಚ್ಚು ನಡೆಯಬಹುದು
- ಐಕ್ಯಮತ್ಯ ಮಂತ್ರ ಜಪಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾರೊಂದಿಗೂ ಜಗಳ ಮಾಡೋದಕ್ಕೆ ಹೋಗಬೇಡಿ
- ಮೇಲಾಧಿಕಾರಿಗಳ ಹಿರಿಯರ ನಂಬಿಕೆ ಉಳಿಯೋದಿಲ್ಲ
- ನಿಮ್ಮ ಕೆಲಸಗಳಲ್ಲಿ ಬೇರೆಯವರ ಅಭಿಪ್ರಾಯ ಮಾರ್ಗದರ್ಶನ ಬೇಡ
- ಹಳೆಯ ಅನುಭವಗಳ ಲಾಭ ನಿಮಗಿದೆ
- ಸ್ವಂತ ನಿರ್ಧಾರದಿಂದ ದೂರವಾದರೆ ಕಷ್ಟ ಸಾಧ್ಯತೆ
- ಉಚಿತ ಸಲಹೆ ದೂರಮಾಡಿ ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ರಾಜಕೀಯ ಆಸಕ್ತಿ ಉಳ್ಳವರಿಗೆ ನಷ್ಟ ಸಾಧ್ಯತೆ
- ಸಾಯಂಕಾಲ ಶುಭವಾರ್ತೆ ಕೇಳುವಿರಿ
- ಹಿರಿಯರ ಮೇಲಾಧಿಕಾರಿಗಳ ಅವಕೃಪೆಗೆ ಒಳಗಾಗುವ ಸಾಧ್ಯತೆ
- ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲಿ ಮನಸ್ಸಿರುವುದಿಲ್ಲ
- ತಲೆ ನೋವಿರುವ ವ್ಯಕ್ತಿಗಳು ಸೂರ್ಯನ ನೇರ ಬೆಳಕು, ಧೂಳಿನಿಂದ ರಕ್ಷಿಸಿಕೊಳ್ಳಿ
- ಅನುಪಯುಕ್ತ ಕೆಲಸ ವಸ್ತುಗಳ ಬಗ್ಗೆ ಮನಸ್ಸು ಎಳೆಯುತ್ತಿರುತ್ತದೆ
- ಸೂರ್ಯದೇವನನ್ನು ಪ್ರಾರ್ಥಿಸಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
- ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ
- ನಿಮ್ಮ ಸ್ನೇಹಿತರ ಮಾತಿಗೆ ಮರುಳಾಗಬೇಡಿ ತೊಂದರೆ ಆಗಬಹುದು
- ನಿಮ್ಮ ಬುದ್ಧಿವಂತಿಕೆ ಅಭ್ಯಾಸದ ಕಡೆಗೆ ಹೆಚ್ಚು ಇದ್ದರೆ ಯಶಸ್ಸು ಸಿಗುತ್ತದೆ
- ಓದಿನ ಹೊರತಾಗಿ ಬೇರೆ ಚಟುವಟಿಕೆಗಳಿಗೆ ಆಕರ್ಷಿತರಾದ್ರೆ ತೊಂದರೆ
- ಪರ್ವತಾಂಜನೇಯನನ್ನು ಆರಾಧಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ದೂರದ ಪ್ರಯಾಣ ಮಾಡದಿದ್ದರೆ ಒಳ್ಳೆಯದು
- ಪತಿ-ಪತ್ನಿಯರಲ್ಲಿ ಸಣ್ಣ ವಿಚಾರಗಳಿಗೆ ಜಗಳ ಸಾಧ್ಯತೆ
- ಹಳೆಯ ಕಹಿ ನೆನಪುಗಳು ಕಾಡಬಹುದು
- ವೈಯಕ್ತಿಕ ತೇಜೋವಧೆ ಮಾಡಿಕೊಳ್ಳುತ್ತೀರಿ
- ಧರ್ಮದ ಕಾರ್ಯಗಳ ಬಗ್ಗೆ ಮನಸ್ಸು ವಿಚಲಿತ ಸಾಧ್ಯತೆ
- ಇಂದು ಆರೋಗ್ಯದ ಬಗ್ಗೆ ತಾತ್ಸಾರ ಮಾಡಿದರೆ ಕಷ್ಟ ಸಾಧ್ಯತೆ
- ಲಕ್ಷ್ಮಿನಾರಾಯಣನನ್ನು ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಎಲ್ಲ ಕೆಲಸಗಳನ್ನು ನಿಧಾನವಾಗಿ ಮಾಡಿ ಶುಭವಿದೆ
- ಇಂದು ಜನ ನಿಮ್ಮ ಮಾತು, ಸಲಹೆಗಳನ್ನು ಇಷ್ಟಪಡುತ್ತಾರೆ
- ಸಮಾಜದ ಗಣ್ಯರ ಜೊತೆ ನೀವು ಗುರುತಿಸಿಕೊಳ್ಳುವ ಸಾಧ್ಯತೆ ಇದೆ
- ನಿಮ್ಮ ಗುರಿಗಳ ಬಗ್ಗೆ ಹೆಚ್ಚು ಜಾಗೃತರಾಗಿರಿ
- ದುಬಾರಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ
- ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಕಡಿಮೆ
- ಕಾಲಭೈರವನನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us