Advertisment

ಕಳೆದು ಹೋಗಿದ್ದ ವಸ್ತು ಸಿಗಲಿದೆ -ಇವತ್ತು ನಿಮ್ಮ ಭವಿಷ್ಯ ಸೂಪರ್ ಆಗಿದೆ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಕಾರ್ತಿಕ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಭರಣೀ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ನಂದಿನಿ ತುಪ್ಪದ ರೇಟ್‌ ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ : ಬೆಲೆ ಏರಿಕೆ ಶಾಕ್ ನೀಡಿದ ಕೆಎಂಎಫ್‌

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಿಟ್ಟಿನಿಂದಲೇ ಇಂದು ತೊಂದರೆಯಾಗುವ ಸಾಧ್ಯತೆ ಇದೆ
  • ನಿಮ್ಮ ಮನೆಯ ಸದಸ್ಯರನ್ನು ಅವಮಾನಿಸಬೇಡಿ
  • ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಇಂದು ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುತ್ತೀರಿ
  • ನಿಮ್ಮ ಕೋಪ ನಿಮ್ಮ ನಿಯಂತ್ರಣದಲ್ಲಿರಲಿ
  •  ತಾಪಸಮನ್ಯುವನ್ನು ಸ್ಮರಣೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೆಂಕಿಯಿಂದ ಸ್ವಲ್ಪ ಅನಾಹುತ ಸಾಧ್ಯತೆ, ಜಾಗ್ರತೆ ಇರಲಿ ಭಯಬೇಡ
  • ನಿಮ್ಮ ಕೋಪ ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಬಹುದು
  • ಮನೆಯಲ್ಲಿ ಅಥವಾ ಕೆಲಸಕ್ಕೆ ಹೋದಾಗ ಬೆಂಕಿ ಮತ್ತು ನೀರಿನ ಬಗ್ಗೆ ಜಾಗ್ರತೆ ವಹಿಸಿ
  • ಇಂದು ಯಾವುದೇ ಆತಂಕಗಳಿಲ್ಲದೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ
  • ಬಿಲ್ವಪತ್ರೆಯಿಂದ ಈಶ್ವರನಿಗೆ ಅರ್ಚನೆ ಮಾಡಿ 
Advertisment

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಸಂಜೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳನ್ನು ಭೇಟಿ ಮಾಡಿ
  • ಯಾವುದೇ ರೀತಿಯ ವಾದ-ವಿವಾದ ಮಾಡಬೇಡಿ
  • ಇಂದು ಉದ್ಯೋಗದಲ್ಲಿ ಅಸ್ಥಿರತೆ ಕಾಡುತ್ತದೆ
  • ಉದ್ಯೋಗ ಸಂಬಂಧಿ ವಿಚಾರದಲ್ಲಿ ಸಮಾಧಾನವಿರುವುದಿಲ್ಲ
  • ಕೆಲಸವನ್ನು ಕಳೆದುಕೊಳ್ಳುವ ಭಯ ಕೂಡ ಕಾಡುತ್ತದೆ
  • ಕಾಲಭೈರವಾಯ ನಮಃ ಎಂದು 108 ಬಾರಿ ಪ್ರಾರ್ಥನೆ ಮಾಡಿ

ಕಟಕ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಉತ್ತಮವಾದ ಭೋಜನ ಮಾಡುತ್ತೀರಿ
  • ಖಾಸಗಿ ಕ್ಷೇತ್ರದಲ್ಲಿರುವ ನೌಕರರಿಗೆ ಇಂದು ಸಿಹಿ ಸುದ್ದಿ ಸಾಧ್ಯತೆ
  • ನಿಮ್ಮೆಲ್ಲಾ ಹಳೆಯ ಕೆಲಸಗಳು ಇಂದು ಪೂರ್ಣವಾಗುತ್ತವೆ
  • ಇಂದು ಸಹೋದ್ಯೋಗಿಗಳ ಜೊತೆಗಿನ ಭಿನ್ನಾಭಿಪ್ರಾಯ ದೂರವಾಗುತ್ತದೆ
  • ವ್ಯಾಪಾರದಾರರು ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಬಹುದು
  • ಇಂದು ಉತ್ತಮವಾದ ದಿನ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಧುಮೇಹ ಖಾಯಿಲೆ ಇರುವವರು ಹೆಚ್ಚಿನ ಜಾಗ್ರತೆವಹಿಸಿ
  • ಕುಟುಂಬದವರೊಂದಿಗೆ ಸಂತೋಷದ ವಾತಾವರಣ ಇರುತ್ತದೆ
  • ಆತ್ಮವಿಶ್ವಾಸವು ನಿಮ್ಮೆಲ್ಲಾ ಕೆಲಸಗಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ
  • ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಹಿ ಸುದ್ದಿ ಸಿಗುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ
Advertisment

ಕನ್ಯಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಮಾತಿನಿಂದಲೇ ನಿಮಗೆ ನೆಮ್ಮದಿ ಸಿಗುತ್ತದೆ
  • ನೀವು ಎಲ್ಲಾ ಕೆಲಸ ಕಾರ್ಯ ನಿರ್ವಹಿಸಲು ಸಮರ್ಥರಾಗಿರುತ್ತೀರಿ
  • ಮನೆಯಲ್ಲಿ ಮಂಗಳ ಕಾರ್ಯ ನಡೆಯುವುದರಿಂದ ಸಂತೋಷದಿಂದ ಇರುತ್ತೀರಿ
  • ನಯವಾದ ಮಾತಿನಿಂದಲೇ ಕೆಟ್ಟವರನ್ನು ದೂರಮಾಡಿ
  • ವಿರೋಧಿಗಳ ಜೊತೆ ವಾದ-ವಿವಾದಗಳು ಬೇಡ
  • ನಿಮ್ಮ ಹಳೆಯ ವಿರೋಧಗಳಿಂದ ಮಂಗಳ ಕಾರ್ಯಗಳಿಗೆ ತೊಂದರೆ ಸಾಧ್ಯತೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಮನೆಯಲ್ಲಿ ಅಶಾಂತಿಯ ವಾತಾವರಣ ಸಾಧ್ಯತೆ 
  • ಪಿತ್ರಾರ್ಜಿತ ಆಸ್ತಿ ಸಿಗುವ ಸೂಚನೆ ಇದೆ
  • ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ಇರಲಿ
  • ಹೊಟ್ಟೆಗೆ ಸಂಬಂಧಿಸಿದ  ಸಮಸ್ಯೆ ಕಾಣಬಹುದು ಸ್ವಲ್ಪ ಎಚ್ಚರವಹಿಸಿ
  • ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವ್ಯಾಪಾರಿ ಬುದ್ಧಿಯಿಂದ ಹಲವರಿಗೆ ಬೇಸರವಾಗುವ ಸಾಧ್ಯತೆ ಇದೆ
  • ಪ್ರೇಮ ವಿಚಾರವನ್ನು ಮುಚ್ಚಿಡುವುದರಿಂದ ತೊಂದರೆಯಾಗಬಹುದು ಎಚ್ಚರಿಕೆ ಇರಲಿ
  • ಉದ್ಯೋಗದಲ್ಲಿ ನಿಮ್ಮ ಕಾರ್ಯ ವೈಖರಿ ಚೆನ್ನಾಗಿರುತ್ತದೆ
  • ಹಿರಿಯರಿಗೆ ಗೌರವವನ್ನು ನೀಡಿ
  • ದೇವಿಯನ್ನು ಪ್ರಾರ್ಥನೆ ಮಾಡಿ
Advertisment

ಧನುಸ್

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾಣೆಯಾಗಿರುವ ವಸ್ತು ಇಂದು ಸಿಗುವ ಸಾಧ್ಯತೆ ಇದೆ
  • ಹೊರಗಿನ ವ್ಯಕ್ತಿಗಳಿಂದ ಉದ್ಯೋಗ, ವ್ಯವಹಾರದಲ್ಲಿ ಸಹಾಯ ಸಿಗುತ್ತದೆ
  • ಕೆಲ ದಿನಗಳಿಂದ ಇದ್ದ ಸಮಸ್ಯೆ ಇಂದು ಬಗೆಹರಿಯುತ್ತದೆ 
  • ಉತ್ತಮ ಸ್ಪಂದನೆ ಸಿಗುವುದರಿಂದ ಮನೋಬಲ ಹೆಚ್ಚಾಗುತ್ತದೆ
  • ಗಂಡ-ಹೆಂಡತಿಯ ಮಧ್ಯೆ ವಾಗ್ವಾದ ಆಗಬಹುದು
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮಕರ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಯಕ್ಷೇತ್ರಗಳಲ್ಲಿ ಕಾರ್ಯ ಪೂರ್ತಿ ಮಾಡಬೇಕೆಂಬ ಒತ್ತಡ ಇರಬಹುದು
  • ಇಂದು ನಿಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಗಮನವಿರಲಿ
  • ಬೇರೆಯವರಿಗೆ ದಾನ-ಧರ್ಮ ಮಾಡುವ ಯೋಗವಿದೆ
  • ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಅಡೆತಡೆಗಳಿದ್ದರೆ ಅದು ನಿವಾರಣೆಯಾಗಲಿದೆ
  • ನೀವು ಮಾಡಿದ ತಪ್ಪಿನಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ
  • ಚಿಂತಾಮಣಿ ಗಣಪತಿಯನ್ನು ಪ್ರಾರ್ಥನೆ ಮಾಡಿ  

ಕುಂಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ಅವಶ್ಯಕ ಪೂರೈಕೆ ನಿಮ್ಮನ್ನು ಕಾಡುತ್ತದೆ
  • ಒಟ್ಟಾರೆ ಇಂದು ನಿಮಗೆ ಅಶುಭ ದಿನ
  • ಮನೆಯ ಹೊರಗಡೆಯೂ ನಿಮಗೆ ಉತ್ತಮ ವಾತಾವರಣ ಇದೆ ಅನ್ನಿಸುವುದಿಲ್ಲ
  • ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
  • ವಿನಾಕಾರಣ ಕೆಲಸಕ್ಕೆ ಗೈರಾಗುವ ಸಾಧ್ಯತೆಗಳಿವೆ
  • ಮಕ್ಕಳು ಮಾಮೂಲಿಯಂತೆ ಇರುವುದಿಲ್ಲ
  • ಪುಣ್ಯಕ್ಷೇತ್ರದಲ್ಲಿ ಹರಕೆ ಬಾಕಿ ಇದ್ದರೆ ಆದಷ್ಟು ಬೇಗ ತೀರಿಸಿ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ  
Advertisment

ಮೀನ

ಪ್ರೇಮಿಗಳಿಗೆ ಶುಭ, ಮನೆ, ಜಮೀನು ಮಾರುವವರಿಗೆ ಲಾಭ ಸಿಗುವ ದಿನ; ಇಲ್ಲಿದೆ ಇಂದಿನ ಭವಿಷ್ಯ

  • ವಯಸ್ಸಾದವರು ಬೀಳುವುದಾಗಲಿ ಅಥವಾ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ
  • ವಾಹನ ಖರೀದಿ ಬಗ್ಗೆ ಯೋಚನೆ ಇದ್ದರೆ ಕೆಲ ದಿನ ಮುಂದಕ್ಕೆ ಹಾಕಿ
  • ಇಂದು ನಿಮಗೆ ಸಂಪೂರ್ಣ ಒತ್ತಡದ ದಿನ
  • ಸಾಲ ನಿಮಗೆ ಅನಿವಾರ್ಯವಾಗುವ ಸಾಧ್ಯತೆ ಇದೆ
  • ಕುಟುಂಬದಲ್ಲಿ ಅನೇಕ ಕಾರ್ಯಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರುತ್ತವೆ
  • ದೊಡ್ಡ ಒಪ್ಪಂದ ಮಾಡಿಕೊಳ್ಳವ ಸಂದರ್ಭ ಬರಬಹುದು
  • ನಿಮ್ಮ ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ಶರಭೇಶ್ವರನನ್ನು ಪ್ರಾರ್ಥಿಸಿ

ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬುಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಹೋರಾಟ : ಸಚಿವ ಎಂ.ಬಿ.ಪಾಟೀಲ್ ಕೊಟ್ಟ ಭರವಸೆ ಏನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rashi Bhavishya
Advertisment
Advertisment
Advertisment