ಮಹಿಳೆಯರಿಗೆ ತುಂಬಾ ಯಶಸ್ಸು ಸಿಗುವ ದಿನ -ರಾಶಿ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ರೇವತಿ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ:ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೈಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರ ವಹಿಸಿ
  • ಹಲವಾರು ಸಮಸ್ಯೆಗಳು  ಸುತ್ತಿಕೊಳ್ಳುವ ದಿನ
  • ವಿನಾಕಾರಣ ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತೀರಿ
  • ಸಮಯ ಸಾಧಕರೆಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ
  • ನಿಮ್ಮ ಸ್ವಭಾವ,ವರ್ತನೆ, ಕೋಪ ಎಲ್ಲವೂ ಬದಲಾದರೆ ಜನ ನಿಮ್ಮನ್ನು ತುಂಬಾ ಇಷ್ಟ ಪಡುತ್ತಾರೆ 
  • ಕುಟುಂಬದಲ್ಲಿ ಆರೋಗ್ಯಕರವಾದ  ಚರ್ಚೆ ನಡೆಯಲಿದೆ
  • ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಆಗಬಹುದು
  • ಕುಲದೇವತೆಯನ್ನು ಆರಾಧಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅಕ್ಕ ಅಥವಾ ತಂಗಿಯರಿಗೆ  ಆಘಾತವಾಗಬಹುದು ಸಹಕರಿಸಿ 
  • ಸ್ನೇಹಿತರು ,ಬಂಧುಗಳು ಯಾರೂ ಕೂಡ  ನಿಮಗೆ ಸಹಾಯ ಮಾಡುವುದಿಲ್ಲ 
  • ದೊಡ್ಡ ದೊಡ್ಡ ಆಲೋಚನೆಗಳು ಮನಸ್ಸಲ್ಲಿ ಬರಲಿದೆ ಆರ್ಥಿಕವಾಗಿ ಚಿಂತನೆ ಮಾಡುತ್ತೀರಿ
  • ನಿಮ್ಮ ನಿರೀಕ್ಷೆಗಳೆಲ್ಲವು ಮಕ್ಕಳಿಂದ ಪೂರ್ಣವಾಗುತ್ತದೆ ಎಂಬ ನಂಬಿಕೆ ಮೂಡಲಿದೆ
  • ಮಕ್ಕಳ ಅಭ್ಯುದಯದಿಂದ ಸಮಾಧಾನ,ತೃಪ್ತಿ ,ಸಂತೋಷವನ್ನು ನೀಡಲಿದೆ
  • ಹೊಸತನ್ನು ಏನಾದರೂ ಮಾಡುವ ವಿಚಾರ ಮುನ್ನೆಲೆಗೆ ಬರಬಹುದು 
  • ಈಶ್ವರನನ್ನು ಪ್ರಾರ್ಥಿಸಿ 

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರ ಬೆಳವಣಿಗೆ ನಿಮ್ಮ ಮನಸ್ಸಿಗೆ ಸಮಾಧಾನ ಕೊಡಲಿದೆ
  • ಅನಗತ್ಯ ಖರ್ಚು ನಿಮ್ಮನ್ನು ಆವರಿಸುವ ದಿನ
  • ಮಕ್ಕಳ ಅಭ್ಯುದ್ಯಯದಿಂದ ನಿಮಗೆ ಉತ್ತಮವಾದ ಫಲ ಸಿಗಲಿದೆ
  • ನಿಮ್ಮ ದೊಡ್ಡ ಆಸ್ತಿಯೆಂದರೆ ಮಾತು ಅದು ಹಾಸ್ಯಾಸ್ಪದ ಆಗಬಾರದು ಅದರಿಂದ ಅವಮಾನವಾಗಬಹುದು
  • ಯಾರಿಗೋ ಮಾತು ಕೊಟ್ಟು ಆ ಮಾತಿಗೆ ತಪ್ಪುತ್ತೀರಿ
  • ವಿನಾ ಕಾರಣ ಪ್ರಯಾಣವನ್ನು ಮುಂದೂಡಬೇಕಾಗುತ್ತದೆ
  • ಕೌಟುಂಬಿಕ ಕಲಹಕ್ಕೆ ಅವಕಾಶವಿದೆ
  • ಮಕ್ಕಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ 
  • ಮಹಾಕಾಳಿಯನ್ನು ಆರಾಧನೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಇಡೀ ಜೀವನವನ್ನ ಭಾವನಾತ್ಮಕ ವಿಷಯದಲ್ಲೇ ಕಳೆಯುತ್ತೀರಿ ಅದು ಕೂಡ ಯೋಗ ತರುವಂತದಲ್ಲ 
  • ಯಾವುದೇ ವಿಚಾರವನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಇಲ್ಲ ಅಂದ್ರೆ ಅವಮಾನವಾಗಲಿದೆ
  • ನಿಮ್ಮಲ್ಲಿ ಕಲೆ ಇದೆ ಆದರೆ ಅದು ಪ್ರಯೋಜನಕ್ಕೆ ಬರುತ್ತಿಲ್ಲ
  • ಮನೆಯಲ್ಲಿ ಸಂಗ್ರಹಿಸಿಟ್ಟ ಪದಾರ್ಥಗಳಿಂದ ಬೈಗುಳಕ್ಕೆ ಒಳಗಾಗುತ್ತೀರಿ
  • ನೀವು ಜಗಳ ಮಾಡುವುದರಿಂದ ನಿಮ್ಮ ಹತ್ತಿರದವರೆಲ್ಲ ದೂರವಾಗುವ ಸಾಧ್ಯತೆ ಇದೆ
  • ನಿಮ್ಮ ಹತ್ತಿರದವರ ಜೊತೆಯಲ್ಲಿಯೇ ನೀವು ದ್ವೇಷ ಸಾಧಿಸುತ್ತೀರಿ
  • ಯಾವುದೇ ವಿಚಾರವಿದ್ದರೂ ತೆರೆದ ಮನಸ್ಸಿನಿಂದ ಮಾತನಾಡಿದರೆ ಒಳ್ಳೆಯದು
  • ಕುಲದೇವತಾ ಆರಾಧನೆ  ಮಾಡಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ನಿಮಗೆ ಸಂಯಮ, ತಾಳ್ಮೆ ಇರಬೇಕು
  • ಕುಟುಂಬದವರ ಮೇಲೆ ವೃತ್ತಿಯಲ್ಲಿ ಅಧಿಕಾರಿಯ ಮೇಲೆ ಧೋರಣೆ ತೋರಿಸಬಾರದು
  • ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಅದನ್ನ ಹಾಗೇ ಉಳಿಸಿಕೊಳ್ಳಿ
  • ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ ತಾತ್ಸಾರ ಬೇಡ
  • ಉಪನ್ಯಾಸ, ಮಹಾತ್ಮರ ಚರಿತ್ರೆ, ಅವರ ಮಾತುಗಳು ಪರಿವರ್ತನೆಗೆ ಅವಕಾಶವಿದೆ 
  • ಗಂಡ ಹೆಂಡತಿಯರ ಮಧ್ಯೆ ಜಗಳ ಆಗಬಹುದು
  • ಪ್ರೇಮಿಗಳಿಗೆ ಶುಭದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಬೇಸರದ ದಿನ ಹಾಗೆ ಸಣ್ಣ-ಪುಟ್ಟ ಸಮಸ್ಯೆಗಳು ಸಾಧ್ಯತೆ
  • ನಿಮ್ಮ ವ್ಯಕ್ತಿತ್ವದಿಂದ ಹೊಸಬರನ್ನು  ಆಕರ್ಷಿಸುತ್ತೀರಿ  
  • ಷೇರು ಮಾರುಕಟ್ಟೆಯ ವ್ಯವಹಾರದಿಂದ ನಷ್ಟವಿದೆ 
  • ಆರ್ಥಿಕವಾಗಿ ತೊಂದರೆ ಇರುವುದಿಲ್ಲ
  • ಭಯ,  ದ್ವೇಷ, ಅಸೂಯೆ, ಕೋಪವನ್ನು ದೂರಮಾಡಿಕೊಳ್ಳಬೇಕು
  • ನಿಮ್ಮನ್ನು ನೀವೇ ಉತ್ತೇಜಿಸಿಕೊಳ್ಳಬೇಕು 
  • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿನಾಕಾರಣ ತಿರುಗಾಟದಿಂದ ಆಗಬೇಕಾದ ಕೆಲಸ ಕೈ ತಪ್ಪಬಹುದು
  • ಆಶ್ಚರ್ಯಕರವಾದ ಘಟನೆಗಳಿಂದ ನಿಮಗೆ ನಂಬಿಕೆ ಬರಬಹುದು
  • ಇಂದು ಯಾವುದೇ ರೀತಿಯ ಪ್ರಯಾಣ ಬೇಡ
  • ರಾಶಿಚಕ್ರದ ದೃಷ್ಟಿಯಿಂದ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವ ಸಾಧ್ಯತೆ
  • ಸಧ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು
  • ಚಿಕ್ಕಪ್ಪ ಅಥವಾ ದೊಡ್ಡಪ್ಪನಿಗೆ ಸ್ವಲ್ಪ ತೊಂದರೆಯಾಗುವ ಸೂಚನೆಯಿದೆ ಎಚ್ಚರ
  • ಈಶ್ವರನ ಆರಾಧನೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನಗತ್ಯ ಕೆಲಸಗಳಿಂದ ಸಮಯ ವ್ಯರ್ಥವಾಗಬಹುದು
  • ಬಯಸಿದ್ದು ಈಡೇರದೆ ಮನಸ್ಸಿಗೆ ಬೇಸರ ಸಾಧ್ಯತೆ
  • ಭವಿಷ್ಯದ ಬಗ್ಗೆ ಹೆಚ್ಚು ಆಲೋಚಿಸುವ ವ್ಯಕ್ತಿಗಳನ್ನು ಭೇಟಿ ಮಾಡಿ
  • ಸಾಯಂಕಾಲದ ವೇಳೆಗೆ ಪ್ರೀತಿ ಪಾತ್ರರಿಂದ ಅಥವಾ ಆತ್ಮೀಯರಿಂದ ಉತ್ತಮ ಸಲಹೆ ಸಿಗಬಹುದು
  • ಇಂದು ಎಲ್ಲಾ ವಿಚಾರಗಳಲ್ಲೂ ಬಿಕ್ಕಟಿನ ಪರಿಸ್ಥಿತಿ ಅನುಭವಿಸುವ ಸಾಧ್ಯತೆಯಿದೆ
  • ದಂತ ವೈದ್ಯರನ್ನು ಭೇಟಿಯಾಗುವ ಸಂದರ್ಭ ಬರಬಹುದು
  • ಕುಲದೇವತೆಯನ್ನ ಆರಾಧನೆ ಮಾಡಿ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬಯಸಿದ್ದು ಸಿಗದೆ ಮನಸ್ಸಿಗೆ ಕಿರಿಕಿರಿ ಸಾಧ್ಯತೆ
  • ತುಂಬಾ ಒತ್ತಡ ಇರುವ ದಿನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಮರದ ವ್ಯಾಪಾರಿಗಳು ಅಥವಾ ಮರಗೆಲಸ ಮಾಡುವವರಿಗೆ ಶುಭದಿನ
  • ಯಾವುದಾದ್ರೂ ಕೆಲಸ, ಉದ್ದೇಶಕ್ಕೆ ಹಣವನ್ನ ಮುಂಗಡ ಕೊಟ್ಟಿದ್ರೆ  ಹೋಯ್ತು
  • ಅನಗತ್ಯ ವಸ್ತುಗಳಿಗೆ ಹಣ ಖರ್ಚಾಗಬಹುದು
  • ಹಣ, ಸಂಬಳದ ವಿಚಾರವಾಗಿ ಗಲಾಟೆ ಆಗುವ ಸಾಧ್ಯತೆಯಿದೆ 
  • ಛಿನ್ನಮಸ್ತಾ  ದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗುವ ಸಾಧ್ಯತೆಗಳಿವೆ
  • ಕೆಲಸದಲ್ಲಿ ನಿಮ್ಮ ಬದ್ಧತೆ ಹೆಚ್ಚಾದ್ರೆ ಲಾಭ ಸಾಧ್ಯತೆ
  • ಗರ್ಭಣಿ ಸ್ತ್ರೀಯರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
  • ನಿಮ್ಮ ವರ್ತನೆಯಿಂದ ಕುಟುಂಬದಲ್ಲಿ ಅಶಾಂತಿ ಸಾಧ್ಯತೆ
  • ನಿಮ್ಮ ಜೀವನದಲ್ಲಿ ಸುಖದ ಆಸೆ ಹೊತ್ತು ಸಂಭ್ರಮಿಸುವಿರಿ
  • ಅನಿರೀಕ್ಷಿತವಾಗಿ ಗಣ್ಯ ವ್ಯಕ್ತಿ ನಿಮ್ಮ ಮನೆಗೆ ಭೇಟಿ ನೀಡಬಹುದು
  • ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಂಘ - ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಂಪೂರ್ಣ ಸಹಕಾರ ಸಿಗುತ್ತದೆ
  • ಮಹಿಳೆಯರಿಗೆ ತುಂಬಾ ಯಶಸ್ಸು ಸಿಗುವ ದಿನ
  • ಬೆಳಗ್ಗೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ
  • ಸಾಯಂಕಾಲದಲ್ಲಿ ಸಿಗುವ ಸುಖ, ಸಂತೋಷ ಎಲ್ಲವನ್ನೂ ಮರೆಸುತ್ತದೆ
  • ಬೇರೆಯವರೊಂದಿಗಿನ ಮಾತು ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು
  • ನಿಮ್ಮ ಆತ್ಮೀಯರೇ ನಿಮಗೆ ಪ್ರತ್ಯಕ್ಷ ದೇವರ ರೂಪದಲ್ಲಿ ಕಾಣುವ ಸಾಧ್ಯತೆ
  • ಪದ್ಮಾವತಿ - ವೆಂಕಟರಮಣರನ್ನು ಪ್ರಾರ್ಥನೆ ಮಾಡಿ 

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಲಗಾರರಿಂದ ಅವಮಾನ, ತುಂಬಾ ಬೇಸರ ಸಾಧ್ಯತೆ
  • ಇಂದು ಪ್ರಗತಿದಾಯಕ ದಿನ ಸಾಧ್ಯತೆ
  • ಆಹಾರ ಸೇವನೆ ಬಗ್ಗೆ ಕಾಳಜಿ ವಹಿಸಿ,
  • ಅಜೀರ್ಣ ಅಥವಾ ಶಾರೀರಿಕ ಬಾಧೆಗೆ ಒಳಗಾಗುವ ಸಾಧ್ಯತೆಯಿದೆ
  • ಎಲ್ಲರ ಮೇಲು ಕೂಡ ಪ್ರೀತಿ, ವಿಶ್ವಾಸ ಇಟ್ಟುಕೊಳ್ಳಬೇಕು
  • ಮನೆಯವರ ಸಂದೇಶ, ಮಾತು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಬಹುದು
  • ಮನೆಯಿಂದ ಹೊರ ಹೋಗುವಾಗ ಕೋಪಿಸಿ ಕೊಂಡರೆ ಅನಾಹುತವಾಗುವ ಸಾಧ್ಯತೆಯಿದೆ
  • ಋಣಮೋಚನ ಮಂಗಳ ಸ್ತೋತ್ರ ಪಠಿಸಿ

ಇದನ್ನೂ ಓದಿ: ಊರಿನ ಅಜ್ಜಿಯರ ಕಿತಾಪತಿ ಕತೆ ಹೇಳಿದ ಗಿಲ್ಲಿ -ಇಂಟ್ರೆಸ್ಟಿಂಗ್​ ಆಗಿದೆ VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment