/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಇನ್ಮುಂದೆ ಮನೆಯಲ್ಲಿ ಶ್ವಾನ ಸಾಕೋಕು ಬೇಕು ಲೈಸನ್ಸ್.. ಬೆಂಗಳೂರಲ್ಲಿ ಹೊಸ ನಿಯಮ ಏನು ಹೇಳುತ್ತೆ..?
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ಒತ್ತಡದಿಂದ ನಿಮಗೆ ನಿರಾಶೆಯಾಗಬಹುದು
- ನಿಮ್ಮ ಮನೆಯವರಿಗೆ ನಿಮ್ಮ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚು
- ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸಿದ್ಧ ಆಹಾರಗಳನ್ನು ತ್ಯಜಿಸುವುದು ಒಳಿತು
- ನಿಮಗಿರುವ ಅನುಕೂಲವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ
- ಅವಕಾಶ ಮಾಡಿಕೊಂಡು ಧ್ಯಾನ-ಯೋಗ ಮಾಡಿ ಆಲಸ್ಯ ಬೇಡ
- ನಿಮ್ಮ ಕುಲದೇವರನ್ನು ಆರಾಧನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸರ್ಕಾರಿ ಕೆಲಸಗಳಲ್ಲಿ ಅಡಚಣೆಯಾಗಬಹುದು
- ಹವಮಾನ ಬದಲಾವಣೆಯಿಂದ ತಲೆನೋವು ಆಲಸ್ಯ ಆಗಬಹುದು
- ಪ್ರೇಮಿಗಳು ಉತ್ಸುಕರಾಗಿರುವ ದಿನ
- ಅಧ್ಯಯನ-ಧ್ಯಾನಕ್ಕೆ ಶರೀರ ಅನುಮತಿ ಕೊಡುವುದಿಲ್ಲ
- ವಿದ್ಯಾರ್ಥಿಗಳು ಬಲವಂತವಾಗಿ ಅಭ್ಯಾಸ ಮಾಡಬೇಕಾದ ದಿನ
- ಸರಸ್ವತಿಯ ಪ್ರಾರ್ಥನೆ ಮಾಡಬೇಕು
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಸಂದರ್ಭ
- ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
- ಇಂದು ಈ ರಾಶಿಯವರಿಗೆ ಕೋಪ ಹೆಚ್ಚಿರುವ ಸಾಧ್ಯತೆ
- ತಮ್ಮ ಕೋಪವನ್ನು ಸ್ನೇಹಿತರು, ಮನೆಯವರ ಮೇಲೆ ತೀರಸಬಾರದು
- ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯೊಂದಿಗೆ ಇರಬೇಕು
- ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದ ದೃಷ್ಟಿಯಿಂದ ಈ ದಿನ ಚೆನ್ನಾಗಿಲ್ಲ
- ಮಾನಸಿಕ ಬೇಸರ ಅಸಮಾಧಾನ ಸಾಧ್ಯತೆ
- ಪ್ರಮುಖ ಉಪಕರಣ ಅಥವಾ ವಾಹನಕ್ಕೆ ಹಾನಿ ಸಂಭವ
- ಇವತ್ತು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ದುರ್ಗಾದೇವಿಯ ಪಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಸ್ವಲ್ಪ ಮಟ್ಟಿಗೆ ಕಡಿಮೆ
- ಹೊಸ ಸ್ನೇಹಿತರು ಸಿಗಬಹುದು
- ವ್ಯಾಪಾರ ವ್ಯವಹಾರದಾರರಿಗೆ ಲಾಭದ ದಿನ
- ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಾಧನೆಗೆ ಅವಕಾಶವಿದೆ
- ಪ್ರಯಾಣದ ವಿಚಾರವಿದ್ದರೆ ನಾಳೆಗೆ ಮುಂದೂಡುವುದು ಒಳ್ಳೆಯದು
- ತುಂಬಾ ಅಗತ್ಯವಿದ್ದರೆ ರಾಹುಕಾಲದ ನಂತರ ಪ್ರಯಾಣ ಮಾಡಬಹುದು
- ಹಣಕಾಸಿನ ವ್ಯವಹಾರವಿದ್ದರೆ ಮಧ್ಯಾಹ್ನದ ನಂತರ ಮಾಡಬಹುದು
- ಶ್ರೀ ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಬಂಧಿಕರು ಸ್ನೇಹಿತರು ಹಣವನ್ನು ಅಥವಾ ವಸ್ತುವನ್ನು ಸಾಲವಾಗಿ ಕೇಳಬಹುದು
- ಬಹಳ ಯೋಚನೆ ಮಾಡಿ ಕೊಡಿ ಅನಾನುಕೂಲವಾಗುವ ಸಾಧ್ಯತೆ ಇದೆ
- ಧಾರ್ಮಿಕ ಕಾರ್ಯಗಳ ಬಗ್ಗೆ ಸಂಕಲ್ಪ ಮಾಡುವ ಮುನ್ನ ಹೆಚ್ಚು ಎಚ್ಚರವಹಿಸಿ
- ಸಂಕಲ್ಪ, ಹರಕೆ ತೀರಿಸುವುದಕ್ಕೆ ಆಗದೆ ತೊಂದರೆ ಆಗುವ ಸಾಧ್ಯತೆ
- ಜನರು ನಿಮ್ಮ ಮಾತನ್ನು ತಪ್ಪಾಗಿ ತಿಳಿಯುವ ಸಾಧ್ಯತೆ ಇದ್ದು ಮಿತವಾಗಿ ಮಾತನಾಡಿ
- ಕಾರ್ತವೀರಾರ್ಜುನನ್ನು ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಕೆಲಸಗಳನ್ನು ಆರಂಭಿಸಲು ಬಹಳ ಉತ್ತಮ ದಿನ
- ವ್ಯಾಪಾರ ವ್ಯವಹಾರಗಳಲ್ಲಿ ತುಂಬಾ ಅನುಕೂಲವಾಗುವ ದಿನ
- ಹಳೆಯ ಆಸೆಗಳು ಇಂದು ಈಡೇರುತ್ತವೆ
- ಸಮಾಜದಲ್ಲಿ ಗೌರವ, ಪ್ರಶಸ್ತಿಗಳು ದೊರೆಯುವ ದಿನ
- ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ
- ನಿಮ್ಮ ಕುಲದೇವತೆ ಆರಾಧನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಶರೀರ ಭಾಗದಲ್ಲಿ ಇದಕ್ಕಿದ್ದಂತೆ ನೋವು ಕಾಣಿಸಬಹುದು
- ಇವತ್ತು ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು
- ಹಳೆಯ ಸಾಲ ಅಥವಾ ಬಾಕಿಯಿಂದ ತೊಂದರೆ ಅವಮಾನ ಸಾಧ್ಯತೆ
- ಇಂದು ಯಾರಿಗೂ ಯಾವುದೇ ಭರವಸೆ ನೀಡಬೇಡಿ
- ಇಂದು ತುಂಬಾ ಆಲಸ್ಯ ಕಾಡುವ ದಿನ
- ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ವಿಶೇಷವಾಗಿ ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸ್ಥಿರಾಸ್ತಿಯನ್ನು ಖರೀದಿಸುವ ಯೋಚನೆ ಬರುತ್ತದೆ
- ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸಂದರ್ಭ ಬರುತ್ತದೆ
- ಪಿತ್ರಾರ್ಜಿತ ಆಸ್ತಿಯಿಂದ ಹಣ ಬರುವ ಸಾಧ್ಯತೆ
- ವ್ಯಾಪಾರದಾರರಿಗೆ ಇಂದು ಹೆಚ್ಚು ಲಾಭ
- ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ ಶಿಸ್ತನ್ನು ಬೇರೆಯವರ ಮೇಲೆ ಹೇರಬೇಡಿ
- ಇಂದು ನಿಮ್ಮ ಮಾತು, ನಡೆನುಡಿ ಬಹಳ ವಿನಯದಿಂದ ಇರಲಿ
- ವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಮುಖ್ಯ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ತೋರವ ಸಾಧ್ಯತೆ
- ಇಂದು ಅವಕಾಶ, ಅನುಕೂಲ ಕೈ ತಪ್ಪುವ ಸಾಧ್ಯತೆ ಹೆಚ್ಚು
- ಮಕ್ಕಳಿಂದ, ಚಿಕ್ಕವರಿಂದ ಬೆಂಬಲ ಪ್ರೋತ್ಸಾಹ ಸಿಗುತ್ತದೆ
- ನಿಮ್ಮಿಂದ ಬೇರೆಯವರಿಗೆ ಸಹಾಯವಾಗುತ್ತದೆ
- ಆದರೆ ಅವರು ನಿಮ್ಮನ್ನ ಮರೆಯುವ ಸಾಧ್ಯತೆ ಹೆಚ್ಚು
- ಶ್ರೀ ಲಕ್ಷ್ಮೀ ದೇವಿಯನ್ನ ಪ್ರಾರ್ಥನೆ ಮಾಡಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯಕ್ಷೇತ್ರ, ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮನ್ನು ಅಲ್ಪರನ್ನಾಗಿ ಕಾಣಬಹುದು
- ನಿಮ್ಮ ಮನಸ್ಸಿನ ಚಂಚಲತೆ ನಿಗ್ರಹಮಾಡಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಬಹುದು ತಾಳ್ಮೆಯಿರಲಿ
- ನಿಮ್ಮ ಕುಲದೇವತೆ ಹಾಗೂ ಗುರುವನ್ನ ಸ್ಮರಣೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕುಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ
- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಪಡೆಯುತ್ತೀರಿ
- ಇಂದು ನಿಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರಬೇಕು
- ಇಂದು ಮನೆಗೆ ದಿಢೀರಂತ ಅತಿಥಿಗಳ ಆಗಮನ ಸಾಧ್ಯತೆ
- ಮೇಲಾಧಿಕಾರಿಗಳಿಂದ ಉದ್ಯೋಗಿಗಳಿಗೆ ಒತ್ತಡ ಇರುವುದಿಲ್ಲ
- ಸ್ವಂತ ಕೆಲಸಗಳಿದ್ದರೆ ಅದನ್ನು ಮಾಡಿಕೊಳ್ಳಬಹುದು
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us