/newsfirstlive-kannada/media/media_files/2025/08/05/ksrtc-2025-08-05-15-26-58.jpg)
ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ 4 ವಿಭಾಗಗಳ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?
ಸರ್ಕಾರದ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಅವರ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಇಂದು ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮಧ್ಯೆ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ಅಷ್ಟೇ ಅಲ್ಲದೇ ಕೆಎಸ್‌ಆರ್‌ಟಿಸಿ ದೊಡ್ಡ ಮಟ್ಟದಲ್ಲಿ ಮುಷ್ಕರದ ಎಫೆಕ್ಟ್ ತಟ್ಟಿದೆ.
ಮೆಜೆಸ್ಟಿಕ್ನಿಂದ ಮಧ್ಯಾಹ್ನ 2 ಗಂಟೆಯವರಿಗೆ 1175 ಬಸ್ಗಳು ಸಂಚರಿಸಬೇಕಿತ್ತು. ಆದ್ರೆ 1175 ಬಸ್ ಗಳ ಪೈಕಿ ಕೇವಲ 294 ಬಸ್ಗಳು ಸಂಚರಿಸಿವೆ. ಸ್ಯಾಟ್ ಲೈಟ್ನಿಂದ 565 KSRTC ಬಸ್ಗಳು ಸಂಚರಿಸಬೇಕಿತ್ತು. ಆದ್ರೆ ಕೇವಲ 167 ಬಸ್ಗಳು ಮಾತ್ರ ಸಂಚರಿಸಿವೆ. ಈ ಬಗ್ಗೆ ನ್ಯೂಸ್ ಫಸ್ಟ್ಗೆ KSRTC ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
- ಕೆಎಸ್‌ಆರ್‌ಟಿಸಿ ತನ್ನ ನಿಗದಿತ ಬಸ್‌ಗಳಲ್ಲಿ ಕೇವಲ 36.5% ಮಾತ್ರ ಸಂಚರಿಸಿದೆ.
Corp | Sch Dep | Operated dep | % Opn |
KSRTC | 4670 | 2050 | 43.9 |
BMTC | 3475 | 3468 | 99.8 |
NWKRTC | 2949 | 1752 | 59.4 |
KKRTC | 2691 | 801 | 29.8 |
Total | 13785 | 8071 | 58.5 |
ಸಾರಿಗೆ ನೌಕರರ ಬೇಡಿಕೆಗಳೇನು?
- 01-01-2024ರಿಂದ ನೌಕರರ ವೇತನ ಪರಿಷ್ಕರಣೆ ಆಗಬೇಕು
- ನೌಕರರ 38 ತಿಂಗಳ ಹಿಂಬಾಕಿಯನ್ನು ಪಾವತಿ ಮಾಡಬೇಕು
- ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಬೇಕು
- ಸಾರಿಗೆ ನೌಕರರಿಗೆ ಪ್ರತಿ 4 ವರ್ಷಕೊಮ್ಮೆ ವೇತನ ಪರಿಷ್ಕರಣೆ
- ಇನ್ನು ಮುಂದೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು
- ಈ ಹಿಂದೆ ಮುಷ್ಕರದಲ್ಲಿ ಭಾಗಿಯಾದ ನೌಕರರ ವಜಾ ವಾಪಾಸ್
- ನೌಕರರ ಕುಟುಂಬಸ್ಥರ ಮೇಲಿನ ಸುಳ್ಳು ಕೇಸ್ ವಾಪಾಸ್ ಪಡಿಬೇಕು
- ನಗದು ರಹಿತ ವೈದ್ಯಕೀಯ ಸೌಲಭ್ಯ, ಉತ್ತಮ ಕ್ಯಾಂಟೀನ್ ವ್ಯವಸ್ಥೆ
- ವಿದ್ಯುತ್ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು
- ವಿದ್ಯುತ್ ಬಸ್‌ಗಳ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಬಾರದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ