/newsfirstlive-kannada/media/media_files/2025/08/05/bmtc-bus-2025-08-05-06-17-37.jpg)
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಬಂದ್ಗೆ ಕಡೆ ನೀಡಿದ್ದರು.
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ಮುಷ್ಕರ.. ಬಸ್ ಡಿಪೋ ಕಡೆಗೆ ಹೋಗಬೇಡಿ, ಮನೆಯಲ್ಲಿ ಇರಿ; ಅನಂತ
ಆದ್ರೆ, ಬೆಳಗ್ಗೆ 4.30ಕ್ಕೆ ಕೆಲ ಬಸ್ಗಳು ಸಂಚಾರ ಆರಂಭಿಸಿವೆ. ಮೆಜೆಸ್ಟಿಕ್, ಶಾಂತಿನಗರ, ಕೆ.ಆರ್ ಮಾರ್ಕೆಟ್ನಲ್ಲಿ ಬಿಎಂಟಿಸಿ ಬಸ್ಗಳು ಸಂಚಾರ ನಡೆಸುತ್ತಿವೆ. ಸದ್ಯ ರಾತ್ರಿ ಪಾಳಿ ಬಿಎಂಟಿಸಿ ಬಸ್ಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಬೆಳಗಿನ ಪಾಳಿಯ ಬಸ್ಗಳು ಸಂಚಾರ ಮಾಡೋದು ಬಹುತೇಕ ಅನುಮಾನ ಇದೆ. ಹೀಗಾಗಿ ಕೆಲ ಕಂಡಕ್ಟರ್ ಹಾಗೂ ಡ್ರೈವರ್ಗಳು ಕರ್ತವ್ಯಕ್ಕೆ ಬ್ರೇಕ್ ಆಗೋ ಎಲ್ಲಾ ಸಾಧ್ಯತೆಗಳಿವೆ. 6 ಗಂಟೆ ನಂತರ ಬಸ್‌ಗಳ ಸಂಚಾರ ಬಂದ್ ಆಗುವು ಸಾಧ್ಯತೆಗಳಿವೆ.
ಸಾರಿಗೆ ನೌಕರರ ಬೇಡಿಕೆಗಳೇನು?
- 01-01-2024ರಿಂದ ನೌಕರರ ವೇತನ ಪರಿಷ್ಕರಣೆ ಆಗಬೇಕು
- ನೌಕರರ 38 ತಿಂಗಳ ಹಿಂಬಾಕಿಯನ್ನು ಪಾವತಿ ಮಾಡಬೇಕು
- ಸಾರಿಗೆ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಬೇಕು
- ಸಾರಿಗೆ ನೌಕರರಿಗೆ ಪ್ರತಿ 4 ವರ್ಷಕೊಮ್ಮೆ ವೇತನ ಪರಿಷ್ಕರಣೆ
- ಇನ್ನು ಮುಂದೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು
- ಈ ಹಿಂದೆ ಮುಷ್ಕರದಲ್ಲಿ ಭಾಗಿಯಾದ ನೌಕರರ ವಜಾ ವಾಪಾಸ್
- ನೌಕರರ ಕುಟುಂಬಸ್ಥರ ಮೇಲಿನ ಸುಳ್ಳು ಕೇಸ್ ವಾಪಾಸ್ ಪಡಿಬೇಕು
- ನಗದು ರಹಿತ ವೈದ್ಯಕೀಯ ಸೌಲಭ್ಯ, ಉತ್ತಮ ಕ್ಯಾಂಟೀನ್ ವ್ಯವಸ್ಥೆ
- ವಿದ್ಯುತ್ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು
- ವಿದ್ಯುತ್ ಬಸ್‌ಗಳ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಬಾರದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ