ಬಳ್ಳಾರಿ SP ಪವನ್ ನೆಜ್ಜೂರ್ ಆತ್ಮ*ತ್ಯೆಗೆ ಯತ್ನ ವದಂತಿ; ಅದೆಲ್ಲ ಸುಳ್ಳು ಎಂದು ಸ್ಪಷ್ಟನೆ ಕೊಟ್ಟ ಮಂಡ್ಯ ಎಸ್​ಪಿ

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗಲಾಟೆ ಸಂಬಂಧ ಅಮಾನತು ಆಗಿರುವ ಬಳ್ಳಾರಿ ಎಸ್​ಪಿ (ಪೊಲೀಸ್ ವರಿಷ್ಠಾಧಿಕಾರಿ) ಪವನ್​ ನೆಜ್ಜೂರ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

author-image
Ganesh Kerekuli
pavan nejjuru
Advertisment

ತುಮಕೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗಲಾಟೆ ಸಂಬಂಧ ಅಮಾನತು ಆಗಿರುವ ಬಳ್ಳಾರಿ ಎಸ್​ಪಿ (ಪೊಲೀಸ್ ವರಿಷ್ಠಾಧಿಕಾರಿ) ಪವನ್​ ನೆಜ್ಜೂರ್ (pawan nejjur) ಆತ್ಮ*ತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಕೆಲವು ಮಾಹಿತಿಗಳ ಪ್ರಕಾರ ಪೊಲೀಸ್ ಅಧಿಕಾರಿ ಪವನ್​ ನೆಜ್ಜೂರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ತುಮಕೂರಿನ ಶಿರಾದ ಬರಗೂರಿನಲ್ಲಿರೋ ಸ್ನೇಹಿತನ ಫಾರ್ಮ್​ಹೌಸ್​ನಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​​; BSNL ಬಳಕೆದಾರರಿಗೆ ಸೂಪರ್ ನ್ಯೂಸ್​..!

ನಿನ್ನೆ SP ಪವನ್‌ ನೆಜ್ಜೂರ್‌ ಅವರನ್ನು ಕರ್ನಾಟ ಸರ್ಕಾರ ಅಮಾನತು ಮಾಡಿತ್ತು. ಬಳ್ಳಾರಿ ಘಟನೆಯಲ್ಲಿ  ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಕಾರಣವನ್ನು ನೀಡಿ ಸಸ್ಪೆಂಡ್‌ ಮಾಡಲಾಗಿತ್ತು. ಇನ್ನೊಂದು ವಿಚಾರ ಅಂದ್ರೆ ಅವರು ಬಳ್ಳಾರಿಗೆ ಕೆಲವೇ ಕೆಲವು ದಿನಗಳ ಹಿಂದಷ್ಟೇ ಬಳ್ಳಾರಿ ಎಸ್​ಪಿಯಾಗಿ ನಿಯೋಜನೆಗೊಂಡಿದ್ದರು.  

ಮಂಡ್ಯ ಎಸ್​ಪಿ ಸ್ಪಷ್ಟಣೆ..

ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್​ಪಿ ಶೋಭಾ ರಾಣಿ, ಪವನ್ ನೆಜ್ಜೂರ್ ಜೊತೆ ಮಾತನ್ನಾಡಿದೆ. ಅವರು, ನಮ್ಮ ಬ್ಯಾಚ್​​ಮೇಟ್​ನ ಫಾರ್ಮ್​​ಹೌಸ್​ನಲ್ಲಿದ್ದಾರೆ. ಆತ್ಮ*ತ್ಯೆ ಯತ್ನ ಅನ್ನೋದು ಸುಳ್ಳು, ವದಂತಿ ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ballari news Ballari banner dispute Janardan Reddy Nara Bharath Reddy Pavan Nejjur
Advertisment