ಗ್ರಾಹಕರಿಗೆ ಭರ್ಜರಿ ಗುಡ್​ನ್ಯೂಸ್​​; BSNL ಬಳಕೆದಾರರಿಗೆ ಸೂಪರ್ ನ್ಯೂಸ್​..!

ಹೊಸ ವರ್ಷದ ಆರಂಭದೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಬಿಗ್‌ ರಿಲೀಫ್‌ ನೀಡಿದೆ. ಕಂಪನಿಯು ದೇಶದಾದ್ಯಂತ ಟೆಲಿಕಾಂ ವಲಯಗಳಲ್ಲಿ ವೈ-ಫೈ ಕಾಲಿಂಗ್ ಅಥವಾ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭಿಸಿದೆ

author-image
Ganesh Kerekuli
BSNL: ದಿನಕ್ಕೆ 7 ರೂಪಾಯಿಯಂತೆ 105 ದಿನಗಳಿಗೆ 210GB ಡೇಟಾ.. ಸಖತ್ತಾಗಿದೆ ನೂತನ ಪ್ಲಾನ್​
Advertisment

BSNL WiFi Calling: ಹೊಸ ವರ್ಷದ ಆರಂಭದೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಬಿಗ್‌ ರಿಲೀಫ್‌ ನೀಡಿದೆ. ಕಂಪನಿಯು ದೇಶದಾದ್ಯಂತ ಟೆಲಿಕಾಂ ವಲಯಗಳಲ್ಲಿ ವೈ-ಫೈ ಕಾಲಿಂಗ್ ಅಥವಾ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭಿಸಿದೆ. ಈ ಫೀಚರ್ಸ್​​ನಡಿ ಬಳಕೆದಾರರು ತಮ್ಮ ಮೊಬೈಲ್ ಸಿಗ್ನಲ್ ದುರ್ಬಲವಾಗಿದ್ದರೂ ಸಹ ವೈ-ಫೈ ನೆಟ್‌ವರ್ಕ್ ಮೂಲಕ ಕರೆಗಳನ್ನು ಮಾಡಿ ಮಾತಾಡಬಹುದಾಗಿದೆ. 

ಕಡಿಮೆ ನೆಟ್‌ವರ್ಕ್ ಇರೋ ಪ್ರದೇಶಗಳಲ್ಲಿಯೂ ಮಾತಾಡೋದು ಸುಲಭ

ಮೊಬೈಲ್ ನೆಟ್‌ವರ್ಕ್‌ಗಳು ಹೆಚ್ಚಾಗಿ ಲಭ್ಯವಿಲ್ಲದ ಪ್ರದೇಶಗಳಲ್ಲಿ ವೈ-ಫೈ ಕರೆ ಮಾಡಬಹುದು. ಬಿಎಸ್‌ಎನ್‌ಎಲ್ ಬಳಕೆದಾರರು, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿರೋರಿಗೆ ಈ ಸೇವೆ ಒಳ್ಳೆಯದಾಗಿದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಅಥವಾ ಇತರ ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿದ್ದರೆ.. ಇನ್ಮುಂದೆ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

ಇದನ್ನೂ ಓದಿ:2026 ರಲ್ಲಿ ಮಾರುಕಟ್ಟೆಗೆ ಬರುವ ಹೊಸ ಕಾರ್ ಗಳು ಯಾವ್ಯಾವು ಗೊತ್ತಾ? ಫುಲ್ ಡೀಟೈಲ್ಸ್ ಇಲ್ಲಿದೆ

262 ಕೋಟಿ ರೂ. ಲಾಭ.. 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL; ಇದು ಹೇಗಾಯ್ತು?

ಯಾವುದೇ ಅಪ್ಲಿಕೇಷನ್ ಬೇಡ

ಈ ಸೇವೆಗಾಗಿ ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದು ಫೋನ್‌ನ ಡೀಫಾಲ್ಟ್ ಡಯಲರ್‌ನಿಂದ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಕರೆ ಮಾಡಬಹುದು. ಕರೆಯ ಸಮಯದಲ್ಲಿ ಕರೆಗಳು ಸ್ವಯಂಚಾಲಿತವಾಗಿ ವೈ-ಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ನಡುವೆ ಬದಲಾಗುತ್ತವೆ. ಯಾವುದೇ ಅಡಚಣೆಗಳು ಆಗುವುದಿಲ್ಲ. 

ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

ಬಿಎಸ್ಎನ್ಎಲ್ ಗ್ರಾಹಕರಿಗೆ ವೈ-ಫೈ ಕರೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ವೈ-ಫೈ ಮೂಲಕ ಮಾಡಿದ ಕರೆಗಳಿಗೆ ಸಾಮಾನ್ಯ ಕರೆಗಳಂತೆ ಬಿಲ್ ವಿಧಿಸಲಾಗುತ್ತದೆ. ಇದರರ್ಥ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಅಸ್ತಿತ್ವದಲ್ಲಿರುವ ಪ್ಲಾನ್ ಪ್ರಕಾರ ಕರೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:ಇನ್ಪೋಸಿಸ್ ನಲ್ಲಿ ಫ್ರೆಶರ್ ಗಳ ಸಂಬಳದಲ್ಲಿ ಭಾರಿ ಏರಿಕೆ: 21 ಲಕ್ಷ ರೂಪಾಯಿವರೆಗೂ ಸಂಬಳ ನೀಡಿಕೆ

262 ಕೋಟಿ ರೂ. ಲಾಭ.. 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL; ಇದು ಹೇಗಾಯ್ತು?

ಯಾವ ಮೊಬೈಲ್​ನಲ್ಲಿ ಈ ಸೌಲಭ್ಯ ಲಭ್ಯ? 

ಹೊಸ ಮತ್ತು ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ವೈ-ಫೈ ಕಾಲಿಂಗ್ ಬೆಂಬಲಿತವಾಗಿದೆ. ಬಳಕೆದಾರರು ತಮ್ಮ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ವೈ-ಫೈ ಕಾಲಿಂಗ್ ಸಕ್ರಿಯಗೊಳಿಸಬೇಕು. ಸಕ್ರಿಯಗೊಳಿಸಿಯೂ ನೀವು ಕರೆ ಮಾಡಲು ಸಾಧ್ಯವಾಗದಿದ್ದರೆ BSNL ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು. 

BSNL ನೆಟ್‌ವರ್ಕ್ ನವೀಕರಣದತ್ತ ದೊಡ್ಡ ಹೆಜ್ಜೆ

ದೇಶದಾದ್ಯಂತ ವೈ-ಫೈ ಕಾಲಿಂಗ್ ಸೇವೆಯನ್ನು ಪ್ರಾರಂಭಿಸುವುದು BSNL ನೆಟ್‌ವರ್ಕ್ ಆಧುನೀಕರಣ ಉಪಕ್ರಮದ ಒಂದು ಭಾಗ. ಮೊಬೈಲ್ ನೆಟ್‌ವರ್ಕ್ ಸಂಪರ್ಕವು ಗಮನಾರ್ಹ ಸವಾಲಾಗಿರುವ ಪ್ರದೇಶಗಳಲ್ಲಿ ಉತ್ತಮ ಸಂಪರ್ಕ ಒದಗಿಸುವುದು ಇದರ ಗುರಿಯಾಗಿದೆ. ಈ ಕ್ರಮವು ಗ್ರಾಹಕರಿಗೆ ಪರಿಹಾರವನ್ನು ನೀಡುವುದಲ್ಲದೇ ಮೊಬೈಲ್ ನೆಟ್‌ವರ್ಕ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ:2026ರಲ್ಲಿ ನಿಮ್ಮ ಕೆಲಸ ಅಪಾಯದಲ್ಲಿದೆ -AI ಎಚ್ಚರಿಕೆ ಗಂಟೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bsnl plan BSNL
Advertisment