/newsfirstlive-kannada/media/media_files/2025/11/14/saalumarada-timmakka-2025-11-14-16-00-26.jpg)
ವೃಕ್ಷಮಾತೆ, ಶತಾಯುಷಿ ಸಾಲುಮರದ ತಿಮ್ಮಕ್ಕ (Saalumarada Thimmakka) ಇನ್ನು ನೆನಪು ಮಾತ್ರ. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯ ಜೀವ, ಇಂದು ಚಿಕಿತ್ಸೆ ಫಲಿಸದೇ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರಿಗೆ 114 ವಯಸ್ಸಾಗಿತ್ತು . ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಬಳಿ ಸಾಲುಮರಗಳನ್ನು ಬೆಳೆಸಿದ್ದರು. ಸಾಲುಮರದ ತಿಮ್ಮಕ್ಕ ಅವರಿಗೆ ಮಕ್ಕಳಿರಲಿಲ್ಲ. ರಸ್ತೆ ಬದಿಯಲ್ಲಿ ಕಿಲೋಮೀಟರ್ ಗಟ್ಟಲೇ ಗಿಡಗಳನ್ನು ನೆಟ್ಟು ನಿತ್ಯ ನೀರು ಹಾಕಿ ಮರಗಳಾಗುವಂತೆ ಬೆಳೆಸಿದ್ದರು. ಮರಗಳನ್ನೇ ಮಕ್ಕಳಂತೆ ನೋಡಿಕೊಂಡಿದ್ದರು. ಇದರಿಂದಾಗಿ ತಿಮ್ಮಕ್ಕ ಅವರಿಗೆ ಸಾಲುಮರದ ತಿಮ್ಮಕ್ಕ ಎಂಬ ಅನ್ವರ್ಥನಾಮವೇ ಬಂದಿತ್ತು.
/filters:format(webp)/newsfirstlive-kannada/media/media_files/2025/11/14/salumarda-timmakka-1-2025-11-14-12-30-12.jpg)
ಹಸಿರನ್ನೇ ಉಸಿರಾಗಿಸಿಕೊಂಡಿದ್ದ ತಿಮ್ಮಕ್ಕ..
1911 ಜೂನ್ 30ರಂದು ತುಮಕೂರು ಜಿಲ್ಲೆಯ ಹುಲಿಕಲ್ ಗ್ರಾಮದಲ್ಲಿ ತಿಮ್ಮಕ್ಕ ಜನಿಸಿದ್ದರು. ಮೊದಲು ಕಲ್ಲು ಗಣಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ಚಿಕ್ಕಯ್ಯ ಎಂಬ ಜಾನುವಾರು ಸಾಕಣೆದಾರರನ್ನು ವಿವಾಹವಾಗಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ವೃಕ್ಷಮಾತೆ ಸಾಲುಮರ ತಿಮ್ಮಕ್ಕ ವಿಧಿವಶ
ಮದುವೆಯಾಗಿ 25 ವರ್ಷಗಳಾದರೂ ಮಕ್ಕಳಾಗದಿದ್ದಾಗ ಮರ ನೆಡಲು ಆರಂಭ ಮಾಡಿದ್ದರು. ಸಮಾಜದ ಟೀಕೆ ಮತ್ತು ತಮ್ಮ ದುಃಖ ಮರೆಯಲು ಮರ ಬೆಳೆಸಲು ಶುರುಮಾಡಿದ್ದರು. ಸುಮಾರು 4.5 ಕಿ.ಮೀ ರಸ್ತೆಯ ಉದ್ದಕ್ಕೂ 385 ಆಲದ ಮರಗಳನ್ನು ತಿಮ್ಮಕ್ಕ ನೆಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/11/14/salumarda-timmakka-2-2025-11-14-12-30-12.jpg)
ಹುಲಿಕಲ್ ಮತ್ತು ಕುದೂರು ನಡುವಿನ ಹೆದ್ದಾರಿಯಲ್ಲಿ ಮರ ನೆಟ್ಟು ಪೋಷಣೆ ಮಾಡಿದ್ದರು. ಗಿಡಗಳನ್ನ ನೆಟ್ಟು ಮರ ಆಗುವವರೆಗೆ ಪ್ರತಿನಿತ್ಯವೂ ಪೋಷಿಸುತ್ತಿದ್ದರು. ಈ ಮಹತ್ಕಾರ್ಯದಿಂದಾಗಿ ‘ಸಾಲುಮರದ ತಿಮ್ಮಕ್ಕ ಎಂಬ ಹೆಸರು ಬಂತು. 1991ರಲ್ಲಿ ಪತಿ ನಿಧನರಾದರೂ, ತಮ್ಮ ಪರಿಸರ ಸೇವೆ ಮುಂದುವರೆಸಿದ್ದರು. ಈವರೆಗೂ ಸುಮಾರು 8,000 ಕ್ಕೂ ಹೆಚ್ಚು ಇತರ ಮರಗಳನ್ನು ನೆಟ್ಟು ಬೆಳೆಸಿದ್ದರು.
ಸಾಲುಮರದ ತಿಮ್ಮಕ್ಕಗೆ ಸಿಕ್ಕ ಗೌರವಗಳು!
1. ರಾಷ್ಟ್ರೀಯ ಪೌರ ಪ್ರಶಸ್ತಿ
2. ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
3. ವೀರಚಕ್ರ ಪ್ರಶಸ್ತಿ
4. ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ
5. ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ
6. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ
7. ವನಮಾತೆ ಪ್ರಶಸ್ತಿ
8. ಶ್ರೀಮಾತಾ ಪ್ರಶಸ್ತಿ
9. ಹೆಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ
10. ಕರ್ನಾಟಕ ಪರಿಸರ ಪ್ರಶಸ್ತಿ
11. ಮಹಿಳಾರತ್ನ ಪ್ರಶಸ್ತಿ
12. ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ –
13. ಭಾರತ ಸರ್ಕಾರದಿಂದ ಪದ್ಮಶ್ರೀ
14.ಕರ್ನಾಟಕ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೇಟ್
ಇದನ್ನೂ ಓದಿ:Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us