/newsfirstlive-kannada/media/media_files/2025/10/22/tumakuru-father-2025-10-22-10-31-00.jpg)
ತುಮಕೂರು: ದೀಪಾವಳಿ ಹಬ್ಬದಂದೇ ಮೂವರು ದಾರುಣವಾಗಿ ಜೀವಬಿಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಯರೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಶ್ರಾವ್ಯಾ (12), ಪುಣ್ಯಾ(12), ಶ್ರಾವ್ಯಾಳ ತಂದೆ ವೆಂಕಟೇಶ್ (50) ಮೃತ ದುರ್ದೈವಿಗಳು.
ಮೂತ್ರ ವಿಸರ್ಜನೆ ವೇಳೆ ಶ್ರಾವ್ಯ ಕಾಲು ಜಾರಿ ಕೆರೆಗೆ ಬಿದ್ದಳು. ಶ್ರಾವ್ಯಾಳನ್ನ ರಕ್ಷಿಸಲು ಪುಣ್ಯಾ ಕೆರೆಗೆ ಇಳಿದಿದ್ದಾಳೆ. ಇವರಿಬ್ಬರನ್ನೂ ರಕ್ಷಿಸಲು ವೆಂಕಟೇಶ್ ನೀರಿಗೆ ಹಾರಿದ್ದಾರೆ. ಮೂವರಿಗೂ ಈಜು ಬಾರದೆ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ನಾಲ್ಕು ಮೂವತ್ತರ ವೇಳೆಯಲ್ಲಿ ದುರ್ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ನಡೆಸಿದ್ದರು. ಸದ್ಯ ಮೂರು ಮೃತದೇಹಗಳನ್ನ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಡಿಲೇಡ್​​ನಿಂದ ಶಾಕಿಂಗ್ ನ್ಯೂಸ್.. 2ನೇ ODI ನಿಂದ ಇಬ್ಬರು ಸ್ಟಾರ್ ನಾಪತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ