/newsfirstlive-kannada/media/media_files/2025/10/22/siraj-arshadeep-2025-10-22-10-13-32.jpg)
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ODI ಗುರುವಾರ ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅಭ್ಯಾಸದ ಅವಧಿಯಲ್ಲಿ ನಡೆದ ಕೆಲವು ಬೆಳವಣಿಗೆಗಳು ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಶೆ ಮಾಡಿದೆ.
ಪರ್ತ್ ಏಕದಿನ ಪಂದ್ಯದಲ್ಲಿ ಭಾರತ ಸೋತಾಗ ಉದ್ಭವಿಸಿದ ದೊಡ್ಡ ಪ್ರಶ್ನೆ ಕುಲ್ದೀಪ್ ಯಾದವ್​ ಅವರನ್ನು ಯಾಕೆ ಆಡಿಸಿಲ್ಲ? ಸ್ಪೆಷಲಿಸ್ಟ್ ಬೌಲರ್ ಬದಲಿಗೆ ಮೂವರು ಆಲ್‌ರೌಂಡರ್‌ಗಳನ್ನು ಏಕೆ ಟೀಮ್ ಇಂಡಿಯಾ ಕಣಕ್ಕಿಳಿಸಿತು? ಕುಲ್ದೀಪ್ ಯಾದವ್ ಅವರನ್ನು ಏಕೆ ನಂಬಲಿಲ್ಲ? ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈಗ ನೋಡಿದ್ರೆ ಮುಂದಿನ ಪಂದ್ಯದಲ್ಲೂ ಕುಲ್ದೀಪ್ ಯಾದವ್ ಆಡುವುದಿಲ್ಲ ಎಂದು ತೋರುತ್ತದೆ. ಮಂಗಳವಾರ ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ಅಭ್ಯಾಸ ನಡೆಸಿತು. ಆ ಅವಧಿಯ ನಂತರ ಕುಲ್ದೀಪ್ ಯಾದವ್ ಬೌಲಿಂಗ್ ಮಾಡಿಲ್ಲ.
ಕುಲದೀಪ್‌ಗೆ ಮತ್ತೊಮ್ಮೆ ಕಠಿಣ ಶಿಕ್ಷೆ?
ಕುಲದೀಪ್​​ ಆಡದಿರೋದು ಟೀಂ ಇಂಡಿಯಾ ಅಭಿಮಾನಿಗಳ ಕಾಡಿದೆ. ಅಡಿಲೇಡ್ ಓವಲ್‌ನಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಇದರಿಂದಾಗಿ ಕುಲದೀಪ್ ಮೈದಾನಕ್ಕಿಳಿಯುವುದು ಕಷ್ಟಕರ ಎನ್ನಲಾಗಿದೆ. ಕುಲದೀಪ್ ಮಾತ್ರವಲ್ಲ, ಮೊಹಮ್ಮದ್ ಸಿರಾಜ್ ಕೂಡ ಅಭ್ಯಾಸ ಮಾಡಿಲ್ಲ. ಹೀಗಾಗಿ ಎರಡನೇ ಏಕದಿನ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಸಿರಾಜ್ ಬದಲಿಗೆ ಪ್ರಸಿದ್ಧ ಕೃಷ್ಣನಿಗೆ ಅವಕಾಶ ಸಿಗುವ ಚಾನ್ಸ್ ಇದೆ.
ಟೀಮ್ ಇಂಡಿಯಾದ ಅಭ್ಯಾಸ ಅವಧಿಯಿಂದ ಹಲವು ಸುದ್ದಿಗಳು ಹೊರಬಂದವು. ಹಿರಿಯ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಪ್ರಕಾರ.. ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ನಲ್ಲಿ ಸ್ಪಾರ್ಕ್ ಇರಲಿಲ್ಲ. ಇಬ್ಬರೂ ತುಂಬಾ ನಿರಾಳವಾಗಿ ಕಾಣುತ್ತಿದ್ದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಶ್ರೇಯಸ್ ಅಯ್ಯರ್ ಜೊತೆ ದೀರ್ಘಕಾಲ ಚರ್ಚೆ ನಡೆಸಿದ್ದಾರೆ. ಅಯ್ಯರ್ ಆಟಗಾರ ನೆಟ್ಸ್‌ನಲ್ಲಿ ಉತ್ತಮವಾಗಿ ಕಾಣುತ್ತಿದ್ದರು. ಕೆ.ಎಲ್.ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದರು. ಲಾಂಗ್ ಶಾಟ್‌ಗಳನ್ನು ಹೊಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ಬಂದಿದ್ದೇ ಲೇಟು..’ ಕೊಹ್ಲಿ-ರೋಹಿತ್ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಕೈಫ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us