/newsfirstlive-kannada/media/post_attachments/wp-content/uploads/2023/11/Rohit-Sharma.jpg)
7 ತಿಂಗಳ ಬಳಿಕ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ರೋ-ಕೋ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಹುಸಿಗೊಳಿಸಿದ್ದಾರೆ. ಪರ್ತ್ ಏಕದಿನ ಪಂದ್ಯದಲ್ಲಿ ಫ್ಲಾಪ್ ಶೋ ನೀಡಿ, ಕ್ರಿಕೆಟ್​​​​​ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡು ಆರ್ ಡೈ ಸರಣಿಯಲ್ಲಿ ರೋಹಿತ್-ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿವೆ.
ಸರಿಯಾದ ಪ್ರಿಪರೇಶನ್ ಇಲ್ಲ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಲವು ತಿಂಗಳ ಬಳಿಕ ವೈಟ್​ಬಾಲ್ ಕ್ರಿಕೆಟ್​​​ಗೆ ಮರಳಿದ್ದಾರೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್-ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನ ಆಡಲಿಲ್ಲ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋ-ಕೋ ಪ್ರಿಪರೇಶನ್, ಹೇಳಿಕೊಳ್ಳುವಂತಿರಲಿಲ್ಲ. ಇದು ಮೊದಲ ಪಂದ್ಯದಲ್ಲಿ ರೋಹಿತ್-ಕೊಹ್ಲಿ ಆಟ ನೋಡ್ತಿದ್ರಂತೆ ಗೊತ್ತಾಗುತ್ತದೆ. ಸರಿಯಾದ ತಯಾರಿ ಇಲ್ಲದೇ ಇಬ್ಬರೂ ಆಸಿಸ್ ಫ್ಲೈಟ್ ಹತ್ತಿದ್ರಾ ಅನ್ನೋದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರಶ್ನೆ.
ಇದನ್ನೂ ಓದಿ: ‘ತರಕಾರಿ ಹಳಸಿ ವಾಸನೆ ಬರ್ತಿದೆ ಅಂದ್ಮೇಲೆ..’ ನೆಕ್ಸ್ಟ್​ ಎಲಿಮಿನೇಟ್ ಆಗೋರ ಹೆಸರು ಹೇಳಿದ ಮಂಜು
ಏಕದಿನ ಸರಣಿಗೆ 3 ದಿನಗಳು ಇರುವಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ರು. ಪ್ರಶ್ನೆ ಏನಪ್ಪಾ ಅಂದ್ರೆ? ರೋಹಿತ್-ಕೊಹ್ಲಿ ಇಬ್ಬರೂ ಯಾಕೆ ಮುಂಚಿತವಾಗಿ ಆಸಿಸ್​​​ಗೆ ಹೋಗಿಲ್ಲ. ವಾರದ ಮುಂಚೆ ಹೋಗಿದ್ದಿದ್ರೆ ಇಬ್ಬರಿಗೂ ಪ್ರಿಪರೇಷನ್ಸ್​ಗೆ ತುಂಬಾ ಅನುಕೂಲವಾಗ್ತಿತ್ತು. ಆದ್ರೆ ರೋಹಿತ್-ಕೊಹ್ಲಿ ಲೇಟಾಗಿ ಹೋಗಿದ್ದೇ ಇಬ್ಬರ ಹಿನ್ನಡೆಗೆ ಕಾರಣವಾಗಿದೆ ಎಂದು ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋ-ಕೋಗೆ ಮುಂದಿನ 2 ಪಂದ್ಯಗಳು ಕಠಿಣ
ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಸಹ, ರೋಹಿತ್-ಕೊಹ್ಲಿ ಜೋಡಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೊದಲೇ ಸರಿಯಾದ ಪ್ರಿಪರೇಶನ್ಸ್​ ಇಲ್ಲದೆ ರೋಹಿತ್-ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಜೊತೆಗೆ ಸರಣಿಗೂ ಮುನ್ನ ಯಾವುದೇ ಅಭ್ಯಾಸ ಪಂದ್ಯಗಳನ್ನೂ ಆಡಿಲ್ಲ. ರೋ-ಕೋಗೆ ಮುಂದೆ, ಕಠಿಣ ಸವಾಲುಗಳು ಎದುರಾಗಲಿದೆ. ಈಗಾಗಲೇ ರೋಹಿತ್-ಕೊಹ್ಲಿ ಪರ್ತ್ ಏಕದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಇಬ್ಬರು, ಒಳ್ಳೆ ಪರ್ಫಾಮೆನ್ಸ್ ನೀಡಲಿ ಅನ್ನೋದೇ ನನ್ನ ಬಯಕೆ ಅಂತ ಅಶ್ವಿನ್ ಹೇಳಿಕೊಂಡಿದ್ದಾರೆ.
ಪರ್ತ್​ ಪಂದ್ಯದಲ್ಲಿ ವಿರಾಟ್​​​ ಕೊಹ್ಲಿ ಔಟಾಗಿದ್ದು ಹಳೆ ಕಥೆಯನ್ನ ನೆನಪಿಸಿತ್ತು. ಬಾರ್ಡರ್​​​ ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ವಿರಾಟ್, ಆಫ್ ಸ್ಟಂಪ್ ಆಚೆ ಹೋಗೋ ಎಸೆತಗಳನ್ನ ಟೆಂಪ್ಟ್ ಆಗಿ ಹೊಡೆಯಲು ಹೋಗಿ, ವಿಕೆಟ್ ಒಪ್ಪಿಸುತ್ತಿದ್ರು. ಇದೀಗ ಮೊದಲ ಏಕದಿನ ಪಂದ್ಯದಲ್ಲೂ, ಕೊಹ್ಲಿದ್ದು ಅದೇ ರಾಗ ಅದೇ ಹಾಡು. ಟೆಸ್ಟ್​ ಸರಣಿಯಲ್ಲಿ 7 ಇನ್ನಿಂಗ್ಸ್​ಗಳಲ್ಲೂ ಒಂದೇ ರೀತಿಯಲ್ಲಿ ಔಟಾಗಿದ್ದ ವಿರಾಟ್ ಅಷ್ಟಾದ್ರೂ ತಮ್ಮ ವೀಕ್ನೆಸ್​​​​ ಅನ್ನ ಸರಿ ಪಡಿಸಿಕೊಕೊಳ್ಳಲಿಲ್ಲ. ಇದು ನಿಜಕ್ಕೂ ಬೇಸರ ತರಿಸಿದೆ.
ಆತ್ಮವಿಶ್ವಾಸದ ಕೊರತೆ ಕಾಡ್ತಿತ್ತಾ?
ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಫಿಟ್ನೆಸ್ ಮೇಲೆ ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾರೆ. ದಿನನಿತ್ಯ ಜಿಮ್, ವರ್ಕ್​ಔಟ್, ಸ್ಪೆಷಲ್ ಡಯಟ್ ಮಾಡಿ 10 ಕೆ.ಜಿ.ತೂಕ ತಿಳಿಸಿಕೊಂಡಿದ್ದಾರೆ. ರೋಹಿತ್, ಬ್ಯಾಟಿಂಗ್ ಅಭ್ಯಾಸ ಮೇಲೆ ಹೆಚ್ಚು ಗಮನ ಕೊಟ್ಟಿಲ್ಲ ಅಂತ ಕಾಣುತ್ತದೆ. ಇದೆಲ್ಲದರ ನಡುವೆ ರೋಹಿತ್, ಏಕದಿನ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ಆತ್ಮವಿಶ್ವಾಸವನ್ನೇ ಕಳೆದುಕೊಂಡವಂತೆ ಕಾಣುತ್ತಾರೆ. ಮೇಲ್ನೋಟಕ್ಕೆ ರೋಹಿತ್​ ನಗು ನಗುತಾ ಇದ್ದಾರೆ ನಿಜ. ಆದ್ರೆ ಒಳಗೊಳಗೆ ರೋಹಿತ್​ಗೆ ನಾಯಕತ್ವದ ಚಿಂತೆ ಕಾಡುತ್ತಿದೆ.
ಯಾರು ಏನೇ ಹೇಳಿದ್ರೂ ರೋಹಿತ್-ಕೊಹ್ಲಿ ವಿಶ್ವಕ್ರಿಕೆಟ್​​ನ ಶ್ರೇಷ್ಟ ಆಟಗಾರರು ಅನ್ನೋದು ಮರೆಯುವಂತಿಲ್ಲ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ರೋ-ಕೋ ಕಮ್​​ಬ್ಯಾಕ್ ಮಾಡಿ, ಅಬ್ಬರಿಸಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ಇದನ್ನೂ ಓದಿ:ಮಂದಾನ ಭಾವಿ ಪತಿ ಹಾಕಿಸಿಕೊಂಡಿರೋ ಟ್ಯಾಟೂ ಏನು..? ಅಷ್ಟೊಂದು ಪ್ರೀತಿಸ್ತಾರಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ