/newsfirstlive-kannada/media/media_files/2025/08/22/tmk_7_years_jail-2025-08-22-13-44-56.jpg)
ತುಮಕೂರು: ಇತ್ತೀಚೆಗೆ ಮೊಬೈಲ್ ಕಳ್ಳತನ ಮಾಡುವುದು ಕಳ್ಳರಿಗೆ ಸಿಂಪಲ್ ಆಗೋಗಿದೆ. ಆದರೆ ಅಂತಹ ಕಳ್ಳರಿಗೆ ಶಾಕ್ ನೀಡುವಂತ ತೀರ್ಪು ಅನ್ನು ನ್ಯಾಯಾಲಯ ನೀಡಿದೆ. ಇದನ್ನು ಓದಿದ ಮೇಲೆ ಮೊಬೈಲ್ ಎಲ್ಲಿಯೇ ಬಿದ್ದರು ಅದನ್ನು ಮುಟ್ಟುವುದೇ ಬೇಡ ಎನ್ನುವ ನಿರ್ಧಾರ ಕೂಡ ಮಾಡಬಹುದು. ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ವ್ಯಕ್ತಿ 7 ವರ್ಷ ಜೈಲು ಪಾಲಾಗಿದ್ದಾನೆ.
ಮೊಬೈಲ್ ಕಿತ್ತುಕೊಂಡು ಹೋಗಿದ್ದ ಪುನೀತ್ ಎನ್ನುವ ವ್ಯಕ್ತಿಗೆ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಅವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಈ ತೀರ್ಪಿನಂತೆ ಕೇವಲ ಒಂದೇ ಒಂದು ಮೊಬೈಲ್ ಕದ್ದಿದ್ದವ ಈಗ ಅಪರಾಧಿಯಾಗಿ 7 ವರ್ಷ ಜೈಲು ಸೇರಿದ್ದಾನೆ.
ಇದನ್ನೂ ಓದಿ: Asia Cup; ಭಾರತ- ಪಾಕ್ ಪಂದ್ಯ ನಡೆಯುತ್ತೋ, ಇಲ್ವೋ; ಕ್ರೀಡಾ ಸಚಿವಾಲಯದ ನಿರ್ಧಾರ ಏನ್?
ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ ಪುನೀತ್ 2020ರಲ್ಲಿ ತುಮಕೂರಿನ ನಾಮದ ಚಿಲುಮೆ ಬಳಿ ಅಮಿತ್ ಹಾಗೂ ದಿಲೀಪ್ ಚೌಧರಿ ಎನ್ನುವ ಇಬ್ಬರು ಯುವಕರಿಗೆ ಬೆದರಿಸಿ ಮೊಬೈಲ್ ಕಿತ್ತುಕೊಂಡಿದ್ದನು. ಡ್ರ್ಯಾಗರ್ ತೋರಿಸಿ ಭಯ ಹುಟ್ಟಿಸಿ ಅವರಿಂದ ಒಪ್ಪೊ-ಎಫ್15 ಮೊಬೈಲ್ ಕಿತ್ತುಕೊಂಡು ಹೋಗಿದ್ದನು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಮೊಬೈಲ್ ಕಿತ್ತುಕೊಂಡು ಹೋಗಿದ್ದ ಪುನೀತ್ ವಿರುದ್ಧ ಐಪಿಸಿ ಸೆಕ್ಷನ್ 397 ಅಡಿ ದೂರು ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಚನ್ನೇಗೌಡ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಸರ್ಕಾರಿ ಅಭಿಯೋಜಕಿ ಆರ್.ಟಿ ಅರುಣಾ ಅವರು ವಾದ ಮಂಡಿಸಿದ್ದರು. ಎರಡು ಕಡೆಯ ವಾದ ಆಲಿಸಿದ್ದ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಅವರು ತೀರ್ಪು ನೀಡಿದ್ದಾರೆ. ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಮೊಬೈಲ್ ಕಳ್ಳತನ ಕೇಸ್ ಗಳು ನಡೆಯುತ್ತಲೇ ಇವೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿವೆ. ಮೊಬೈಲ್ ಕಳ್ಳರಿಗೆ ತುಮಕೂರು ಜಿಲ್ಲಾ ಕೋರ್ಟ್ ಕೊಟ್ಟಿರುವ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಮೊಬೈಲ್ ಕದ್ದರೇ ಏನೂ ಆಗಲ್ಲ, ಯಾವುದೇ ದೊಡ್ಡ ಶಿಕ್ಷೆ ಆಗಲ್ಲ ಎಂದು ಕದಿಯುವರಿಗೆ ಇದು ಎಚ್ಚರಿಕೆಯ ಗಂಟೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ