/newsfirstlive-kannada/media/media_files/2025/09/02/ydr_brother-2025-09-02-14-22-00.jpg)
ಯಾದಗಿರಿ: ಸಹೋದರ ಹೃದಯಾಘಾತದಿಂದ ಕಣ್ಮುಚ್ಚಿರುವ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.
ಕೆಂಭಾವಿ ನಿವಾಸಿಗಳಾದ ಶಮಶುದ್ದೀನ್ ಪೇಶಮಾಮ್ (42) ಹಾಗೂ ಇರ್ಫಾನ್ ಪೇಶಮಾಮ್ (38) ಕೊನೆಯುಸಿರೆಳೆದವರು. ಬೆಳಗ್ಗೆ ಸಹೋದರ ಇರ್ಫಾನ್ ಪೇಶಮಾಮ್ಗೆ ಹೃದಯಾಘಾತ ಸಂಭವಿಸಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದನು. ತಮ್ಮ ನಿಧನ ಹೊಂದಿರುವ ಸುದ್ದಿಯನ್ನು ಕೇಳಿದ ಅಣ್ಣ ಶಮಶುದ್ದೀನ್ ಪೇಶಮಾಮ್ಗೆ ಹಾರ್ಟ್ ಅಟ್ಯಾಕ್ ಆಗಿದೆ.
ಇದನ್ನೂ ಓದಿ: ನಿರಂತರ ಮಳೆ, ಕುಸಿದ ಬೃಹತ್ ಬೆಟ್ಟ.. 1000ಕ್ಕೂ ಹೆಚ್ಚು ಜನ ಭೂ ಸಮಾಧಿ, ಒಬ್ಬನು ಮಾತ್ರ..
ತಕ್ಷಣ ಶಮಶುದ್ದೀನ್ ಪೇಶಮಾಮ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ