/newsfirstlive-kannada/media/media_files/2025/08/12/namma-metro2-2025-08-12-10-52-22.jpg)
ಬೆಂಗಳೂರು: ಮೊನ್ನೆಯಷ್ಟೇ ಪ್ರಧಾನಿ ಮೋದಿ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಿದ್ದರು. ಆ ಬೆನ್ನಲ್ಲೇ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಕೂಡ ಆರ್.ವಿ ಟು ಬೊಮ್ಮಸಂದ್ರದ ಕಡೆಗೆ ಪ್ರಯಾಣ ಬೆಳಸಿ ಖುಷಿಪಟ್ಟಿದ್ದಾರೆ. ಆದ್ರೆ, ಕುಚುಕು ಗೆಳೆಯರು ನಮ್ಮ ಮೆಟ್ರೋದಲ್ಲಿ ರೌಂಡ್ಸ್ ಹಾಕಿ ಫಜೀತಿಗೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ: ಬಿಗ್ಬಾಸ್ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?
ಅಸಲಿಗೆ ಆಗಿದ್ದೇನು..?
ನಿನ್ನೆಯಷ್ಟೇ ಆರ್ ವಿ ಟು ಬೊಮ್ಮಸಂದ್ರ ಯಲ್ಲೋ ಲೈನ್ ವಾಣಿಜ್ಯ ಸಂಚಾರ ನಿನ್ನೆಯಿಂದ ಶುರುವಾಗಿದೆ. ಇದೇ ಖುಷಿಯಲ್ಲಿ ಕುಚಿಕು ಗೆಳೆಯರು ನಮ್ಮ ಮೆಟ್ರೋ ಹಳದಿ ಮಾರ್ಗದ ಕಡೆಯ ನಿಲ್ದಾಣ ಬೊಮ್ಮಸಂದ್ರಕ್ಕೆ ಒಂದು ರೌಂಡ್ಸ್ ಹಾಕಿದ್ದಾರೆ. ಇಬ್ಬರು ಗೆಳೆಯರು ರಾಗಿ ಗುಡ್ಡದಲ್ಲಿ ಮೆಟ್ರೋ ಹತ್ತಿದ್ದಾರೆ. ಇದಾದ ಬಳಿಕ ಬೊಮ್ಮಸಂದ್ರದಲ್ಲಿ ಇಳಿಯುತ್ತಿದ್ದಂತೆ ವಾಪಸ್ ಇದೇ ಮೆಟ್ರೋ ಹೋಗುತ್ತದೆ ಎಂದು ಅನೌನ್ಸ್ ಮಾಡಲಾಗಿತ್ತು. ಹೀಗಾಗಿ ಕುಚಿಕು ಗೆಳೆಯರು ಮತ್ತೆ ಅದೇ ಅದೇ ಮೆಟ್ರೋದಲ್ಲಿ ರಾಗಿ ಗುಡ್ಡಕ್ಕೆ ವಾಪಸ್ ಆಗಿದ್ದಾರೆ. ಇಲ್ಲೇ ನೋಡಿ ಗೆಳೆಯರು ಯಡವಟ್ಟು ಮಾಡಿದ್ದು.
ರಾಗಿಗುಡ್ಡದಿಂದಲೇ ಹತ್ತಿ ಮತ್ತೆ ಅದೇ ನಿಲ್ದಾಣದಿಂದ ಆಚೆ ಹೋಗಲು ಮುಂದಾಗಿದ್ದಾರೆ. ಆದ್ರೆ ರಾಗಿ ಗುಡ್ಡದಲ್ಲಿ ನಿರ್ಗಮಿಸಲು ಆಗದೆ ಪರದಾಡಿದ್ದಾರೆ. ಹೀಗಾಗಿ ಅರ್ಧ ಗಂಟೆ ನಿಲ್ದಾಣದಲ್ಲಿ ಸ್ನೇಹಿತರು ಪರದಾಟ ನಡೆಸಿದ್ದಾರೆ. ನೀವು ಬೊಮ್ಮಸಂದ್ರದಲ್ಲಿ ನಿರ್ಗಮಿಸಿ, ಮತ್ತೆ ಜರ್ನಿ ಮುಂದುವರೆಸಬೇಕಿತ್ತು. ಇದರಿಂದ ಸಮಸ್ಯೆ ಆಗಿದೆ ಎಂದಿದ್ದಾರೆ. ಇದೇ ವೇಳೆ ನಮ್ಮ ಮೆಟ್ರೋ ಅಧಿಕಾರಿಗಳು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಆಗ ಸ್ನೇಹಿತರು ನಾವು ತಪ್ಪು ಮಾಡಿಲ್ಲ.. ಯಾಕೆ ದಂಡ ಕಟ್ಟಬೇಕು ಅಂತ ನಿಲ್ದಾಣದಲ್ಲೇ ಕೆಲಕಾಲ ವಾದ ಮಾಡಿದ್ದಾರೆ. ಕಡೆಗೆ ಒಂದು ಗಂಟೆಯ ನಂತರ 50 ರೂ ದಂಡ ಕಟ್ಟಿ ಕುಚಿಕು ಗೆಳೆಯರು ಹೊರ ಬಂದಿದ್ದಾರೆ.
ನಮ್ಮ ಮೆಟ್ರೋ ನಿಯಮದ ಪ್ರಕಾರ..
ನಮ್ಮ ಮೆಟ್ರೋ ನಿಯಮದ ಪ್ರಕಾರ ಬೊಮ್ಮಸಂದ್ರದಲ್ಲಿ ನಿರ್ಗಮಿಸಿ ಆಗಿ ಮತ್ತೆ ಸಂಚಾರ ಮುಂದುವರೆಸಬೇಕು. ಒಮ್ಮೆ ನಮ್ಮ ಮೆಟ್ರೋಗೆ ಎಂಟ್ರಿಯಾದ್ಮೇಲೆ ಅದಕ್ಕೆ ನಿಗದಿತ ಸಮಯ ಇರುತ್ತೆ. ಆದ್ರೆ, ಈ ಗೆಳೆಯರು ಎಂಟ್ರಿಯಾಗಿ ಒಂದು ಗಂಟೆಯಾದ್ರೂ ಆಚೆ ಬರದೇ ಅಲ್ಲೇ ಸುತ್ತಾಡುತ್ತಿದ್ದರು. ಹೀಗಾಗಿ ಇದೇ ಕಾರಣಕ್ಕೆ BMRCL ದಂಡ ವಿಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ