/newsfirstlive-kannada/media/media_files/2025/09/06/ap-bhant-2025-09-06-21-54-37.jpg)
ಉಡುಪಿ: ಚಂದ್ರ ಗ್ರಹಣವನ್ನು ಕಣ್ತುಂಬ ನೋಡಿ ಎಂಜಾಯ್ ಮಾಡಿ. ಬರಿ ಕಣ್ಣಿನಲ್ಲಿ ನೋಡಿ ಖುಷಿ ಪಡಿ. ಚಂದ್ರ ಗ್ರಹಣದಿಂದ ಯಾವುದೇ ಹಾನಿ ಇಲ್ಲ ಎಂದು ಖ್ಯಾತ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ ಭಟ್ ಹೇಳಿದ್ದಾರೆ.
ಇವತ್ತು ಚಂದ್ರ ಗ್ರಹಣ ನಡೆಯಲಿದೆ. ಈ ಸಂಬಂಧ ನ್ಯೂಸ್ಫಸ್ಟ್ ಜೊತೆ ಮಾತನಾಡಿರುವ ಅವರು.. ಗ್ರಹಣಗಳೇ ಅಪರೂಪದ ವಿದ್ಯಮಾನ. ಸೂರ್ಯಗ್ರಹಣ ಬರಿ ಕಣ್ಣಿನಲ್ಲಿ ನೋಡಬಾರದು. ಚಂದ್ರ ಗ್ರಹಣ ಬರಿಗಣ್ಣಿನಲ್ಲಿ ನೋಡಬಹುದು. ಇದು ಸುಂದರ ಪ್ರಾಕೃತಿಕ ವಿದ್ಯಮಾನ. ಚಂದ್ರ ಗ್ರಹಣವನ್ನು ನೋಡಿ ಎಂಜಾಯ್ ಮಾಡಿ ಎಂದು ಕರೆ ನೀಡಿದರು.
ಇದನ್ನೂ ಓದಿ:ಘೋರ ದುರಂತ.. ರೋಪ್ವೇ ಕುಸಿದು ಬಿದ್ದು 6 ಮಂದಿ ದುರಂತ ಅಂತ್ಯ
ರಾತ್ರಿ 11:00 ಯಿಂದ 12 .30 ರವರೆಗೆ ಚಂದಿರ ಸುಂದರವಾಗಿ ಕಾಣುತ್ತದೆ. ಸೂರ್ಯನ ಬೆಳಕು ಬೀಳದೆ ಚಂದ್ರ ಮರೆಯಾಗುತ್ತಾನೆ. ಸೂರ್ಯನಿಂದ ಹೊರಟ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಚಂದ್ರ ಭೂಮಿಯ ಸುತ್ತ ಸುತ್ತುತ್ತಾನೆ. ಮೂರು ಲಕ್ಷದ ಎಪ್ಪತ್ತೊಂದು ಸಾವಿರ ಕಿಲೋ ಮೀಟರ್ ದೂರದಲ್ಲಿ ಇರುತ್ತಾನೆ.
ಚಂದ್ರ ತುಂಬಾ ಹತ್ತಿರದಲ್ಲಿ ಕಾಣುವುದರಿಂದ ಸುಂದರವಾಗಿ ಕಾಣುತ್ತಾನೆ. ಚಂದ್ರನ ಪಥ 5 1/2 ಡಿಗ್ರಿ ವಾರೆ ಆಗಿರುತ್ತದೆ. ಹುಣ್ಣಿಮೆಯ ಮೇಲೆ ಭೂಮಿ ನೇರವಾಗಿ ಅಡ್ಡ ಬರುತ್ತದೆ. ಇದರಿಂದ ಖಗ್ರಾಸ ಚಂದ್ರ ಗ್ರಹಣ ಆಗುತ್ತದೆ. ಬೆಳಕು ಮಬ್ಬಾಗಿ ಕಾಣುತ್ತದೆ. ರಕ್ತ ಚಂದ್ರ ಎಂದು ಹೆದರಿಸುವುದು ಬೇಡ. ಸಲ್ಪ ಕೆಂಪಾಗಿ ನಸುಕೆಂಪಾಗಿ ಕಾಣುತ್ತೆ ಅಷ್ಟೇ. ಈ ರೀತಿ ಆಗುವುದಕ್ಕೆ ಭೂಮಿ ಕಾರಣ. ಭೂಮಿಯಿಂದ ಹೊರಟ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಕೆಂಪು ಬಣ್ಣದ ಬೆಳಕು ಬೀಳುತ್ತದೆ. ರಕ್ತ ಚಂದನ ಅಲ್ಲ, ನಸುಗೆಂಪು ಅಷ್ಟೇ ಎಂದಿದ್ದಾರೆ.
ಎಲ್ಲರೂ ಗ್ರಹಣವನ್ನು ಚೆನ್ನಾಗಿ ನೋಡಿ. ಇದು ಬ್ಯೂಟಿ ಆಫ್ ನೇಚರ್. ಸೂರ್ಯಾಸ್ತಕ್ಕಿಂತಲೂ ಸೇಫ್ ಆಗಿ ನೋಡಬಹುದು. ಸೂರ್ಯಾಸ್ತದಲ್ಲಿ ಕಣ್ಣಿಗೆ ಸ್ವಲ್ಪ ರಗಳೆ ಆಗುತ್ತದೆ. ಆದರೆ ಚಂದ್ರ ಗ್ರಹಣ ಸುಲಭವಾಗಿ ನೋಡಬಹುದು. ಮನಸ್ಸಿಗೆ ಮುದ ಕೊಡುವವನು ಚಂದ್ರ ಎಂದಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಅಯ್ಯರ್ ಕ್ಯಾಪ್ಟನ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ