/newsfirstlive-kannada/media/media_files/2025/11/28/narendra-modi-5-2025-11-28-11-18-44.jpg)
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿದ್ದು, ಕೃಷ್ಣನಗರಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮೋದಿ ಅವರು, ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಉಡುಪಿಯತ್ತ ಪ್ರಯಾಣ ಬೆಳೆಸಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಉಡುಪಿ ಹೆಲಿಪ್ಯಾಡ್​ಗೆ ಆಗಮಿಸಿದರು.
/filters:format(webp)/newsfirstlive-kannada/media/media_files/2025/11/28/narendra-modi-8-2025-11-28-11-22-00.jpg)
ಅಲ್ಲಿಂದ ಸುಮಾರು 1.8 ಕಿಲೋ ಮೀಟರ್ ದೂರದ ವರೆಗೆ ರೋಡ್​ ಶೋ ನಡೆಸಿದರು. ಈ ವೇಳೆ ಮೋದಿಯನ್ನ ನೋಡಲು ರಸ್ತೆ ಬದಿಯಲ್ಲಿ ಜನರು ಕಿಕ್ಕಿರಿದು ನಿಂತಿದ್ದರು. ಬಳಿಕ ನೇರವಾಗಿ ಕೃಷ್ಣಮಠಕ್ಕೆ ತೆರಳಿದ್ದಾರೆ.
/filters:format(webp)/newsfirstlive-kannada/media/media_files/2025/11/28/narendra-modi-6-2025-11-28-11-22-12.jpg)
ಅಲ್ಲಿ ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿಯಾಗಲಿದ್ದು, ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಗವದ್ಗೀತೆಯ 10 ಶ್ಲೋಕಗಳನ್ನ ಮೋದಿ ಪಠಿಸಲಿದ್ದಾರೆ.
ಇದನ್ನೂ ಓದಿ: ಉಡುಪಿಗೆ ಇವತ್ತು ಪ್ರಧಾನಿ ಮೋದಿ ಭೇಟಿ.. ಕನ್ನಡದಲ್ಲೇ ಸಂತಸ ಹಂಚಿಕೊಂಡ ನಮೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us