Advertisment

ಉಡುಪಿಗೆ ಇವತ್ತು ಪ್ರಧಾನಿ ಮೋದಿ ಭೇಟಿ.. ಕನ್ನಡದಲ್ಲೇ ಸಂತಸ ಹಂಚಿಕೊಂಡ ನಮೋ

ಪ್ರಧಾನಿ ಮೋದಿ ಇವತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಆಗಮಿಸುತ್ತಿದ್ದಾರೆ.. ಕೃಷ್ಣ ಮಠದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಳಿಕ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ಆಯೋಜನೆ ಆಗಿದ್ದು ಭದ್ರತಾ ಸಿಬ್ಬಂದಿ ಇಂಚಿಂಚೂ ತಲಾಷ್ ನಡೆಸುತ್ತಿದ್ದಾರೆ.

author-image
Ganesh Kerekuli
Narendra Modi (1)
Advertisment
  • ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್​ ಹಾರಾಟ ನಿಷೇಧ
  • ಪ್ರಧಾನಿ ವೀಕ್ಷಣೆಗೆ ಬರುವವರು ಬ್ಯಾಗ್​, ನೀರಿನ ಬಾಟಲ್​
  • ಧ್ವಜ, ಸ್ಟಿಕರ್ಸ್​,ಬಲೂನ್ಸ್, ಪಟಾಕಿ, ಲೂಸ್​​ ಪಾಲಿಥಿನ್​​ ತರುವಂತಿಲ್ಲ

ಕೃಷ್ಣನೂರು ಉಡುಪಿ ಆಚಾರ್ಯ ಮಧ್ವರು ಸ್ಥಾಪಿಸಿದ್ದ ಶ್ರೀಮಠ, ಶ್ರೀಕೃಷ್ಣಪರಮಾತ್ಮ ಕನಕದಾಸರಿಗೆ ದರ್ಶನ ವಿತ್ತ ಪುಣ್ಯಧಾಮ.. ಇದೊಂದು ಕೇವಲ ಮಠವಲ್ಲ.. ಜೀವಂತ ಆಶ್ರಮ.. ದೈನಂದಿನ ಭಕ್ತಿ ಹಾಗೂ ಜೀವನಕ್ಕಾಗಿ ಪವಿತ್ರ ಸ್ಥಳವಾಗಿದೆ.. ಇಂತಹ ಪುಣ್ಯಭೂಮಿಗೆ ಇವತ್ತು ಪ್ರಧಾನಿ ಮೋದಿ ಅಡಿ ಇಡುತ್ತಿದ್ದು, ಕೃಷ್ಣನಗರಿ ಭರ್ಜರಿಯಾಗಿ ಸಜ್ಜಾಗಿದೆ.

Advertisment

ಮೊನ್ನೇ ತಾನೇ ರಾಮಜನ್ಮಭೂಮಿ ಅಯೋಧ್ಯೆ ಮಂದಿರದ ಮೇಲೆ ಧರ್ಮಧ್ವಜ ಸ್ಥಾಪನೆ ಮಾಡಿದ್ದ ಪ್ರಧಾನಿ ಮೋದಿ ಇವತ್ತು ಕನ್ನಡಮ್ಮನ ಕೃಷ್ಣ ನಾಡಿಗೆ ಸಂಚಾರ ಮಾಡ್ತಿದ್ದಾರೆ.. ಇವತ್ತು ಉಡುಪಿಗೆ ಭೇಟಿ ನೀಡುವ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ..  ಪ್ರಧಾನಿ ಮೋದಿ ದೇವಾಲಯಗಳ ನಗರಿಗೆ ಆಗಮಿಸ್ತಿರೋದು ಕರಾವಳಿಗರಲ್ಲಿ ರೋಮಾಂಚನ ಸೃಷ್ಟಿಸಿದೆ. ಇನ್ನು ಉಡುಪಿ ಭೇಟಿಗೆ ಪ್ರಧಾನಿ ಮೋದಿ ಕಾತರರಾಗಿದ್ದು, ಕನ್ನಡ ನಾಡಿಗೆ ಬರುತ್ತಿರುವುದಕ್ಕೆ ಕನ್ನಡದಲ್ಲೇ ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟ ಮಾತಿನ ಡಿಕೆ ಶಿವಕುಮಾರ್ ಪೋಸ್ಟ್‌ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್ ಮೂಲಕವೇ ಕೌಂಟರ್‌

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ 

-ನರೇಂದ್ರ ಮೋದಿ, ಪ್ರಧಾನ ಮಂತ್ರಿ

Advertisment

ಕೃಷ್ಣನೂರಿಗೆ ನಮೋ!

  • ಬೆಳಗ್ಗೆ 11 ಗಂಟೆಗೆ ಉಡುಪಿ ಹೆಲಿಪ್ಯಾಡ್​ಗೆ ಆಗಮನ
  • ಬೆಳಗ್ಗೆ 11ರಿಂದ 11.30ರವರೆಗೆ ಪ್ರಧಾನಿ ರೋಡ್​ಶೋ
  • ಹೆಲಿಪ್ಯಾಡ್​ನಿಂದ 1.8 ಕಿ.ಮೀ ದೂರ ರೋಡ್ ಶೋ
  • ರೋಡ್ ಶೋ ಮೂಲಕ ಆಗಮಿಸಿ ಕೃಷ್ಣಮಠಕ್ಕೆ ಭೇಟಿ
  • ಮಧ್ಯಾಹ್ನ 12ಕ್ಕೆ ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ
  • ಕನಕನ ಕಿಂಡಿ ಸ್ವರ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ 
  • ತೀರ್ಥಮಂಟಪ ಅನಾವರಣದಲ್ಲಿ ಪಿಎಂ ಮೋದಿ ಭಾಗಿ
  • ಬಳಿಕ ಲಕ್ಷಕಂಠ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿ
  • ಭಗವದ್ಗೀತೆಯ 10 ಶ್ಲೋಕಗಳ ಪಠಿಸಲಿಸಲಿರುವ ಮೋದಿ
  • ಬಳಿಕ ಸಮಾವೇಶದ ಸ್ಥಳಕ್ಕೆ ಆಗಮಿಸಿ ಪ್ರಧಾನಿ ಮಾತು

ರೋಡ್ ಶೋ ನಡೆಯುವ ಮಾರ್ಗದಲ್ಲಿ ಕಣ್ಗಾವಲು

ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಉಡುಪಿಯಲ್ಲಿ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ. ರೋಡ್​ಶೋನಲ್ಲಿ ಸಾಗುವ ಮಾರ್ಗದಲ್ಲಿ 3 ಕಡೆ ಸಿದ್ಧವಾಗಿರೋ ಸಾಂಸ್ಕೃತಿಕ ವೇದಿಕೆ ವೀಕ್ಷಣೆ ಮಾಡಲಿದ್ದಾರೆ. ರೋಡ್ ಶೋ ಸಾಗುವ ಮಾರ್ಗದ ಭದ್ರತೆ ಎಸ್‍ಪಿಜಿ ಹಾಗೂ ಪೊಲೀಸರಿಗೆ ಸವಾಲಾಗಿದ್ದು 3 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯದಳದಿಂದ ಇಂಚಿಂಚೂ ಸ್ಥಳವನ್ನು ಪರಿಶೀಲಿಸಲಾಗಿದ್ದು, ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ. ಇನ್ನು ಪ್ರಧಾನಿ ಮೋದಿಯನ್ನು ನೋಡಲು ಬರುವ ಜನರಿಗೂ ಕೆಲವೊಂದು ಸೂಚನೆ ನೀಡಲಾಗಿದೆ.

Advertisment

ಇದನ್ನೂ ಓದಿ: ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಶೋನ ಶಿವು ಮತ್ತು ಮಾನಸ

ಪ್ರಧಾನಿ ವೀಕ್ಷಣೆಗೆ ಬರುವವರೇ ಗಮನಿಸಿ

ಇವತ್ತು ಸಂಜೆವರೆಗೂ ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್​ ಹಾರಾಟ ನಿಷೇಧ ಮಾಡಲಾಗಿದ್ದು ನೋ ಫ್ಲೈ ಝೋನ್​ ಎಂದು ಸೂಚನೆ ನೀಡಲಾಗಿದೆ. ಇನ್ನು ಪ್ರಧಾನಿ ವೀಕ್ಷಣೆಗೆ ಬರುವವರು ಬ್ಯಾಗ್​, ನೀರಿನ ಬಾಟಲ್​, ಧ್ವಜ, ಸ್ಟಿಕರ್ಸ್​,ಬಲೂನ್ಸ್, ಪಟಾಕಿ, ಲೂಸ್​​ ಪಾಲಿಥಿನ್​​ ತರುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಒಂದ್ವೇಳೆ ಆದೇಶ ಉಲ್ಲಂಘಿಸಿದ್ರೆ, ಅಂಥವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಉಡುಪಿ ಕಡಲತೀರದಲ್ಲಿ ಪ್ರಧಾನಿ ಭೇಟಿಯನ್ನು ವಿಶಿಷ್ಟ ಮರಳುಶಿಲ್ಪದ ಮೂಲಕ ತೋರಿಸಲಾಗಿದೆ. ಕಲಾವಿದ ಹರೀಶ್ ಸಾಗ ರಚನೆಯ ಈ ಸುಂದರ ಕಲಾ ಕೃತಿ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸಿದೆ. ಒಟ್ಟಾರೆ, ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಕಡಲನಗರಿಯಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ.. ಎಲ್ಲೆಲ್ಲೂ ಕೇಸರಿ ಕಹಳೆ ಮೊಳಗಿದೆ.

Advertisment

ಇದನ್ನೂ ಓದಿ:ಸಿದ್ದು ಪರ ಹೈಕಮ್ಯಾಂಡ್ ಮೇಲೆ ಒತ್ತಡ ಹೇರಲು ಅಹಿಂದ ನಾಯಕರ ನಿರ್ಧಾರ: ಬಹಳಷ್ಟು ಕ್ಷೇತ್ರಗಳಲ್ಲಿ ಅಹಿಂದವೇ ನಿರ್ಣಾಯಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi Udupi shri krishna mutt udupi Udupi Sri Krishna Matha
Advertisment
Advertisment
Advertisment