/newsfirstlive-kannada/media/media_files/2025/08/23/yashpal-anand-suvarna1-2025-08-23-15-46-37.jpg)
ಉಡುಪಿ: ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನೂ ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ್ದ ಅನಾಮಿಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗಾಗಲೇ ಮಾಸ್ಕ್‌ಮ್ಯಾನ್ ನಿಜವಾದ ಹೆಸರು ಹಾಗೂ ಆತನ ಮುಖವನ್ನು ರಿವೀಲ್ ಮಾಡಲಾಗಿದೆ.
ಇದನ್ನೂ ಓದಿ: ಅಪ್ಪು, ಯಶ್, ತೆಲುಗು ಡೈಲಾಗ್ಗೆ ಲಿಪ್ ಸಿಂಕ್.. ಸ್ವೀಡನ್ ದೇಶದ ದಂಪತಿ ಈಗ ವರ್ಲ್ಡ್ ಫೇಮಸ್; ಯಾರಿವರು..?
ಇದೇ ಧರ್ಮಸ್ಥಳ ಮಾಸ್ಕ್ ಮ್ಯಾನ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಧರ್ಮಸ್ಥಳ ಬಗ್ಗೆ ಟೀಕೆ ಮಾಡಿದ್ದ ಯೂಟ್ಯೂಬರ್ ಸಮೀರ್ಗೂ ಶಾಸಕ ಯಶ್ಪಾಲ್ ಸುವರ್ಣ ವಾರ್ನಿಂಗ್ ಕೊಟ್ಟಿದ್ದಾರೆ.
ಯೂಟ್ಯೂಬರ್ ಸಮೀರ್ ಎಲ್ಲಿಂದಲೋ ಬಂದು ಧರ್ಮಸ್ಥಳದ ವಿಚಾರದಲ್ಲಿ ಮಾತನಾಡಿದ್ದಾನೆ. ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ, ಹಿಂದೂ ಸಮಾಜ, ನಮ್ಮ ನಾಯಕರ ಬಗ್ಗೆ ಟೀಕೆ ಮಾಡಿದ್ದಾನೆ. ಆತ ಮಂಗಳೂರಿನಲ್ಲಿದ್ದು ಬಚಾವಾಗಿದ್ದಾನೆ. ಒಂದು ವೇಳೆ ಉಡುಪಿ ಜಿಲ್ಲೆಯಲ್ಲಿ ಇದ್ದಿದ್ದರೆ ಫುಟ್ ಬಾಲ್ ರೀತಿ ಒದೆಯಬೇಕಿತ್ತು. ಮಲ್ಪೆ ಬೀಚಿನಲ್ಲಿ ಫುಟ್ ಬಾಲ್ ರೀತಿ ಒದೆಯುತ್ತಿದ್ದರೆ ಬುದ್ಧಿ ಬರುತ್ತಿತ್ತು. ಇನ್ನು ಮುಂದೆ ಹಿಂದೂ ಸಮಾಜದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಜೀವಮಾನವಿಡೀ ಸುಮ್ಮನೆ ಬಿಡುವುದಿಲ್ಲ. ಧರ್ಮಸ್ಥಳ, ಧರ್ಮಾಧಿಕಾರಿ ನನ್ನ ಗುರುಗಳ ಬಗ್ಗೆ ಟೀಕೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ